For Quick Alerts
  ALLOW NOTIFICATIONS  
  For Daily Alerts

  ಕುಡಿದು ರೋಡಲ್ಲಿ ಗಲಾಟೆ ಮಾಡಿಕೊಂಡ್ರಾ ಆಶಿಕಾ ರಂಗನಾಥ್? ವೈರಲ್ ವಿಡಿಯೊ ಹಿಂದಿನ ಸತ್ಯಾಂಶವಿದು

  |

  ಚಂದನವನದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾದ ನಟಿ ಆಶಿಕಾ ರಂಗನಾಥ್ ಗಣೇಶ್, ಶ್ರೀಮುರಳಿ, ಸುದೀಪ್ ಹಾಗೂ ಶ್ರೀಮುರಳಿ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಮೊದಲಿಗೆ ಕ್ರೇಜಿ ಬಾಯ್ ಎಂಬ ಚಿತ್ರದಲ್ಲಿ ಅಭಿನಯಿಸಿದ್ದ ಆಶಿಕಾ ರಂಗನಾಥ್ ನೇಮ್ ಹಾಗೂ ಫೇಮ್ ಪಡೆದುಕೊಂಡದ್ದು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮುಗುಳುನಗೆ ಚಿತ್ರದ ಮೂಲಕ.

  ಈ ಚಿತ್ರದಲ್ಲಿ ಮೂವರು ನಟಿಯರಲ್ಲಿ ಓರ್ವಳಾಗಿದ್ದರೂ ಸಹ ಹೆಚ್ಚು ಖ್ಯಾತಿ ಗಳಿಸಿದ್ದು ಆಶಿಕಾ ರಂಗನಾಥ್. ನಂತರ ಹಲವು ಚಿತ್ರಗಳಲ್ಲಿ ಸದ್ದು ಮಾಡಿ ಬೇಡಿಕೆ ಹೆಚ್ಚಿಸಿಕೊಂಡಿರುವ ನಟಿ ಆಶಿಕಾ ರಂಗನಾಥ್ ಪರಭಾಷೆಗಳಿಗೂ ಕಾಲಿಟ್ಟಿದ್ದಾರೆ. ಇನ್ನು ಆಶಿಕಾ ರಂಗನಾಥ್ ಪರಭಾಷೆ ತನ್ನ ವೃತ್ತಿ ಜೀವನದಲ್ಲಿ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ನಿರ್ವಹಿಸಿದ್ದು ಇಲ್ಲಿಯವರೆಗೂ ಒಮ್ಮೆಯೂ ವಿವಾದವನ್ನು ತನ್ನ ಮೈಮೇಲೆ ಎಳದುಕೊಂಡಿಲ್ಲ.

  ಆದರೆ ಇದೀಗ ಆಶಿಕಾ ರಂಗನಾಥ್ ಕುಡಿದು ರಸ್ತೆಯಲ್ಲಿ ತೂರಾಡಿ ಗಲಾಟೆ ಮಾಡಿಕೊಂಡಿದ್ದಾರೆ ಎಂಬ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಟಿ ಆಶಿಕಾ ರಂಗನಾಥ್ ಕುಡಿದು ರಂಪಾಟ ಮಾಡಿದ್ದಾರೆ, ಕುಡಿದ ಮತ್ತಿನಲ್ಲಿ ಆಶಿಕಾ ರಂಗನಾಥ್ ಜಗಳ ಮಾಡಿಕೊಂಡಿದ್ದಾರೆ ಎಂಬ ಬರಹಗಳ ಅಡಿಯಲ್ಲಿ ಈ ವಿಡಿಯೊ ವೈರಲ್ ಆಗಿದೆ. ಆದರೆ ಈ ವಿಡಿಯೊ ಹಿಂದಿನ ಸತ್ಯಾಂಶ ಬೇರೆಯದ್ದೇ ಇದೆ..

  ವಿಡಿಯೊದಲ್ಲಿ ಇರುವುದೇನು?

  ವಿಡಿಯೊದಲ್ಲಿ ಇರುವುದೇನು?

  ವೈರಲ್ ಆಗಿರುವ ಈ ವಿಡಿಯೊದಲ್ಲಿ ನಟಿ ಆಶಿಕಾ ರಂಗನಾಥ್ ಮದ್ಯದ ಬಾಟಲಿ ಹಿಡಿದು ಕುಡಿದ ಮತ್ತಿನಲ್ಲಿ ಪೊಲೀಸ್ ಮುಂದೆಯೇ ತೂರಾಡುತ್ತಾ ತನ್ನ ವಿಡಿಯೋ ಮಾಡುತ್ತಿದ್ದ ವ್ಯಕ್ತಿಗೆ ಕ್ಯಾಮೆರಾ ಆಫ್ ಮಾಡುವಂತೆ ಗದರಿದ್ದಾರೆ. ಅಷ್ಟೇ ಅಲ್ಲದೇ ವಿಡಿಯೊ ಮಾಡುತ್ತಿದ್ದ ಕ್ಯಾಮೆರಾಮ್ಯಾನ್‌ಗೆ ಮಧ್ಯದ ಬೆರಳನ್ನು ತೋರಿಸಿದ್ದಾರೆ. ಹೀಗಾಗಿ ಈ ವಿಡಿಯೊ ಬಹುಬೇಗನೆ ಎಲ್ಲೆಡೆ ವೈರಲ್ ಆಗಿಬಿಟ್ಟಿದೆ.

  ಶೂಟಿಂಗ್ ದೃಶ್ಯವಿದು

  ಶೂಟಿಂಗ್ ದೃಶ್ಯವಿದು

  ಇನ್ನು ನಟಿ ಆಶಿಕಾ ರಂಗನಾಥ್ ಕುಡಿದು ಗಲಾಟೆ ಮಾಡಿರುವ ಈ ವಿಡಿಯೊ ನಿಜ ಜೀವನದ್ದಲ್ಲ ಬದಲಾಗಿ ಪವನ್ ಒಡೆಯರ್ ನಿರ್ದೇಶನದ ರೇಮೊ ಚಿತ್ರದ ಚಿತ್ರೀಕರಣದ ಸಂದರ್ಭದ್ದು. ಚಿತ್ರದ ಒಂದು ದೃಶ್ಯದಲ್ಲಿ ಆಶಿಕಾ ರಂಗನಾಥ್‌ ಕುಡಿದು ಗಲಾಟೆ ಮಾಡುವುದನ್ನು ಚಿತ್ರೀಕರಿಸಲಾಗಿದ್ದು ಆ ವಿಡಿಯೊ ಈಗ ವೈರಲ್ ಆಗಿದೆ ಅಷ್ಟೇ. ಇನ್ನು ಚಿತ್ರದ ಟ್ರೈಲರ್‌ನಲ್ಲೂ ಅನೇಕ ದೃಶ್ಯಗಳಲ್ಲಿ ನಟಿ ಆಶಿಕಾ ರಂಗನಾಥ್ ಕುಡಿದು ತೂರಾಡಿದ ದೃಶ್ಯಗಳಿವೆ. ಇನ್ನು ವೈರಲ್ ಆಗಿರುವ ಈ ವಿಡಿಯೊದಲ್ಲಿ ಆಶಿಕಾ ರಂಗನಾರ್ಥ ಕೈನಲ್ಲಿರುವ ಬಾಟಲಿ ಓಪನ್ ಕೂಡ ಆಗಿಲ್ಲ.

  ಲೀಕ್ ಮಾಡಿದ್ಯಾರು? ಇದೇನು ಪ್ರಚಾರದ ಗಿಮಿಕ್ಕಾ?

  ಲೀಕ್ ಮಾಡಿದ್ಯಾರು? ಇದೇನು ಪ್ರಚಾರದ ಗಿಮಿಕ್ಕಾ?

  ಇನ್ನು ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಎಲ್ಲರಿಗೂ ಚಿತ್ರೀಕರಣ ಸಂದರ್ಭದ ಈ ವಿಡಿಯೊವನ್ನು ಲೀಕ್ ಮಾಡಿದ್ಯಾರು ಎಂಬ ಪ್ರಶ್ನೆ ಎದ್ದಿದೆ. ವೀಕ್ಷಕರ ಮನಸ್ಸಲ್ಲಿ ಒಳ್ಳೆ ಭಾವನೆ ಮೂಡಿಸಿರುವ ನಟಿ ಕುರಿತು ಇಂತಹ ವಿಡಿಯೊ ಹರಿಬಿಡುವುದರಿಂದ ಚಿತ್ರೀಕರಣದ ಬಗ್ಗೆ ಹೆಚ್ಚು ಮಾಹಿತಿ ಇಲ್ಲದವರು ಇದನ್ನೇ ನಿಜ ಎಂದು ನಂಬಿ ಆಶಿಕಾ ಮೇಲೆ ಕೆಟ್ಟ ಅಭಿಪ್ರಾಯ ಮೂಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಇಷ್ಟು ದಿನಗಳ ಕಾಲ ಲೀಕ್ ಆಗದ ಈ ವಿಡಿಯೊ ಚಿತ್ರ ಬಿಡುಗಡೆಗೆ ವಾರ ಬಾಕಿ ಇರುವಾಗ ಲೀಕ್ ಆಗಿರುವುದನ್ನು ಕೆಲವರು ಟೀಕಿಸಿದ್ದು, ಇದೆಲ್ಲಾ ಪಬ್ಲಿಸಿಟಿ ಗಿಮಿಕ್ ಎಂದಿದ್ದಾರೆ.

  English summary
  Ashika Ranganath's drunken viral video isn't real and it was Raymo's shooting clip. Read on
  Friday, November 18, 2022, 13:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X