For Quick Alerts
  ALLOW NOTIFICATIONS  
  For Daily Alerts

  ಶರಣ್ ಮುಂದಿನ ಚಿತ್ರದಲ್ಲಿ 'ಕ್ರೇಜಿ ಬಾಯ್' ಬೆಡಗಿ ನಾಯಕಿ

  By Suneel
  |

  ನಟ ಶರಣ್ 'ಅಧ್ಯಕ್ಷ' ಚಿತ್ರದ ಯಶಸ್ವಿ ನಂತರ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಈಗ ಅವರ 'ರಾಜ್-ವಿಷ್ಣು' ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಹೀಗಿರುವಾಗಲೇ ಅವರ ಮುಂದಿನ ಚಿತ್ರಕ್ಕೆ ನಾಯಕ ನಟಿ ಫಿಕ್ಸ್ ಆಗಿದ್ದಾರೆ.

  ಶರಣ್ ಮುಂದಿನ ಚಿತ್ರಕ್ಕೆ ಇಷ್ಟೊಂದು ಜನ ನಿರ್ಮಾಪಕರು.!

  ಮಹೇಶ್ ಬಾಬು ನಿರ್ದೇಶನದ 'ಕ್ರೇಜಿ ಬಾಯ್' ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ಬೆಡಗಿ ಆಶಿಕಾ ರಂಗನಾಥ್ ರವರು ಶರಣ್ ಮುಂದಿನ ಚಿತ್ರದಲ್ಲಿ ನಾಯಕ ನಟಿಯಾಗಿ ಅಭಿನಯಿಸಲಿದ್ದಾರೆ. ತಮ್ಮ ಅಭಿನಯದ ಕಲೆಯಿಂದ ಈಗಾಗಲೇ ಸ್ಟಾರ್ ನಟರ ಚಿತ್ರಗಳಲ್ಲಿ ಆಶಿಕಾ ತೆರೆಹಂಚಿಕೊಂಡಿದ್ದಾರೆ.

  ಆಶಿಕಾ ರಂಗನಾಥ್ ರವರು ಗುರುನಂದನ್ ರ 'ರಾಜು ಕನ್ನಡ ಮೀಡಿಯಂ', ಶಿವಣ್ಣ ಅಭಿನಯದ 'ಮಾಸ್ ಲೀಡರ್', ಗಣೇಶ್ ಅಭಿನಯದ 'ಮುಗುಳು ನಗೆ' ಚಿತ್ರಗಳಲ್ಲಿ ಈಗಾಗಲೇ ತೆರೆಹಂಚಿಕೊಂಡಿದ್ದಾರೆ. ಅಭಿನಯಕ್ಕೆ ಬಿಡುವು ಕೊಟ್ಟು ಟೈಮ್ ವೇಸ್ಟ್ ಮಾಡದ ಆಶಿಕಾ ಈಗ ಶರಣ್ ರೊಂದಿಗೆ ಸ್ಕ್ರೀನ್ ಶೇರ್ ಮಾಡಲು ರೆಡಿಯಾಗಿದ್ದಾರೆ. ಈಗಾಗಲೇ ಈ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದು, ಶರಣ್ ಮತ್ತು ಆಶಿಕಾ ಪೋಟೋ ಶೂಟ್ ಸಹ ನಡೆದಿದೆ.

  ಶರಣ್ ಮತ್ತು ಆಶಿಕಾ ರಂಗನಾಥ್ ಜೊತೆಯಾಗಲಿರುವ ಚಿತ್ರವನ್ನು ಅನಿಲ್ ಕುಮಾರ್ ರವರು ನಿರ್ದೇಶನ ಮಾಡಲಿದ್ದಾರೆ. ಆದರೆ ಇನ್ನೂ ಹೆಸರಿಡದ ಈ ಚಿತ್ರ ಪಕ್ಕಾ ಎಂಟರ್‌ಟೈನ್‌ಮೆಂಟ್ ಆಗಿರಲಿದೆಯಂತೆ. ಶರಣ್ ಜೊತೆ ಅಟ್ಲಾಂಟಾ ನಾಗೇಂದ್ರ ರವರು ಈ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡಲಿದ್ದಾರೆ. ತರುಣ್ ಸುಧೀರ್ ರವರು ಸಹ-ನಿರ್ಮಾಪಕರಾಗಿ ಕೆಲಸ ಮಾಡಲಿರುವ ಈ ಚಿತ್ರದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಛಾಯಾಗ್ರಾಹಕ ಸುಧಾಕರ್ ಎಸ್ ರಾಜ್, ಕೆ ಎಂ ಪ್ರಕಾಶ್, ಮೋಹನ್ ಬಿ ಕೆರೆ, ರವರು ಕೆಲಸ ಮಾಡಲಿದ್ದಾರಂತೆ.

  English summary
  'Crazy Boy' Movie fame actress Ashika Ranganath will be sharing screenspace with Sharan in a film directed by Anil Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X