For Quick Alerts
  ALLOW NOTIFICATIONS  
  For Daily Alerts

  ಮೊದಲ ಬಾರಿಗೆ ಆಶಿಕಾ 'ಬೋಲ್ಡ್' ಫೋಟೋಶೂಟ್ : ಇದು ಈ ಕಾರಣಕ್ಕಾಗಿ ಅಷ್ಟೇ

  |

  ನಟಿಯರು ಫೋಟೋ ಶೂಟ್ ಮಾಡಿಸುವುದು ಕಾಮಾನ್. ಹೊಸ ಸಿನಿಮಾಗಾಗಿ ಅಥವಾ ಹೊಸ ಲುಕ್ ನಲ್ಲಿ ಹೇಗೆ ಕಾಣುತ್ತಾರೆ ಎಂದು ನೋಡಲು ನಟಿಯರು ಫೋಟೋ ಶೂಟ್ ಮೊರೆ ಹೋಗುತ್ತಾರೆ. ಈ ರೀತಿ ಫೋಟೋ ಶೂಟ್ ಗಳು ಎಷ್ಟೋ ನಟಿಯರ ಸಿನಿಮಾ ಪ್ರವೇಶಕ್ಕೆ ಟಿಕೆಟ್ ನೀಡಿವೆ.

  ಸ್ಯಾಂಡಲ್ ವುಡ್ ಸಕ್ಕರೆ ಚಲುವೆ ಆಶಿಕಾ ರಂಗನಾಥ್ ಸಹ ಈಗಾಗಲೇ ಸಾಕಷ್ಟು ಫೋಟೋಶೂಟ್ ಗಳಲ್ಲಿ ಗಮನ ಸೆಳೆದಿದ್ದಾರೆ. ಸ್ಟೈಲಿಶ್ ಉಡುಗೆಯ ಜೊತೆಗೆ ಸಾಂಪ್ರದಾಯಿಕ ಉಡುಗೆಗಳಲ್ಲಿ ಅವರ ಫೋಟೋ ಶೂಟ್ ನೋಡಬಹುದಾಗಿದೆ. ಆದರೆ, ಅವರ ಇತ್ತೀಚಿಗಿನ ಒಂದು ಫೋಟೋ ಶೂಟ್ ಅಭಿಮಾನಿಗಳ 'ಹಾಟ್' ಫೇವರೇಟ್ ಆಗಿದೆ.

  ಬರೋಬ್ಬರಿ 75 ಮಿಲಿಯನ್ ಹಿಟ್ಸ್ ದಾಟಿದ 'ಚುಟು ಚುಟು' ಹಾಡು

  ಇಷ್ಟು ದಿನ ಮುದ್ದು ಮುದ್ದಾಗಿ ಕ್ಯೂಟ್ ಲುಕ್ ನಲ್ಲಿ ಕಾಣುತ್ತಿದ್ದ ಆಶಿಕಾ ಈ ಫೋಟೋದಲ್ಲಿ ಕೊಂಚ ಬೋಲ್ಡ್ ಮತ್ತು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಮುಂದೆ ಓದಿ...

  'ಟೈಮ್ಸ್ ಮೋಸ್ಟ್ ಡಿಸೈರಬಲ್ ವುಮನ್' ಫೋಟೋ

  ತಮ್ಮ ಹೊಸ ಫೋಟೋಶೂಟ್ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ಕ್ಕೆ ಆಶಿಕಾ ರಂಗನಾಥ್ ವಿವರ ನೀಡಿದ್ದಾರೆ. ಬೆಂಗಳೂರು ಟೈಮ್ಸ್ ಮೋಸ್ಟ್ ಡಿಸೈರಬಲ್ ವುಮನ್ ಗಾಗಿ ಆಶಿಕಾ ಈ ಫೋಟೋ ಶೂಟ್ ಮಾಡಿಸಿದ್ದರಂತೆ. ಅದೇ ಫೋಟೋವನ್ನು ಈಗ ತಮ್ಮ ಇನ್ಟಾಗ್ರಾಮ್ ಹಾಗೂ ಫೇಸ್ ಬುಕ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

  'ಬೋಲ್ಡ್' & 'ಹಾಟ್' ಹಾಗೇನೂ ಇಲ್ಲ

  ಆಶಿಕಾ ರಂಗಾನಾಥ್ ಫೋಟೋ ನೋಡಿದ ಅನೇಕರು ಈ ಫೋಟೋ 'ಬೋಲ್ಡ್' ಮತ್ತು 'ಹಾಟ್' ಎಂದು ವರ್ಣಿಸುತ್ತಿದ್ದಾರೆ. ಆದರೆ, ಆಶಿಕಾ ಈ ಬಗ್ಗೆ ಮಾತನಾಡಿದ್ದು, ಬೋಲ್ಡ್, ಹಾಟ್ ಆ ರೀತಿ ಹಾಗೇನೂ ಇಲ್ಲ. ಟೈಮ್ಸ್ ಮೋಸ್ಟ್ ಡಿಸೈರಬಲ್ ವುಮನ್ ಗಾಗಿ ಸುಂದರ ಫೋಟೋಗಳು ಬೇಕಾಗಿತ್ತು. ಆ ಕಾರಣ ಈ ಫೋಟೋಶೂಟ್ ನಲ್ಲಿ ಭಾಗಿಯಾಗಿದ್ದೆ ಎಂದಿದ್ದಾರೆ.

  ಕಿಚ್ಚನ ಆಟೋಗ್ರಾಫ್ ಮನೆಯಲ್ಲಿ 'ಅವತಾರ್ ಪುರುಷ' ಶರಣ್

  ಮೊದಲ ಬಾರಿಗೆ 'ಬೋಲ್ಡ್' ಆದ ಆಶಿಕಾ

  ಮೊದಲ ಬಾರಿಗೆ 'ಬೋಲ್ಡ್' ಆದ ಆಶಿಕಾ

  ಆಶಿಕಾ ರಂಗನಾಥ್ ಸಿನಿಮಾಗಳಲ್ಲಿ ಹೆಚ್ಚು ಕ್ಯೂಟ್ ಲುಕ್ ನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಹಾಟ್, ಗ್ಲಾಮರ್ ಈ ರೀತಿಯ ಪಾತ್ರಗಳಲ್ಲಿ ಆಶಿಕಾ ಇನ್ನು ಅಭಿನಯಿಸಿಲ್ಲ. ಈ ಹಿಂದೆ ಯಾವ ಫೋಟೋ ಶೂಟ್ ನಲ್ಲಿಯೂ ಇಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಂಡಿರಲಿಲ್ಲ ಹಾಗಾಗಿ ಈ ಹೊಸ ಫೋಟೋ ಮೇಲೆ ಎಲ್ಲರ ಕಣ್ಣಿ ಬಿದ್ದಿದೆ.

  'ಅವತಾರ್ ಪುರುಷ' ಚಿತ್ರದಲ್ಲಿ ಆಶಿಕಾ

  'ಅವತಾರ್ ಪುರುಷ' ಚಿತ್ರದಲ್ಲಿ ಆಶಿಕಾ

  ಸದ್ಯ, ಆಶಿಕಾ ಕನ್ನಡದ ಬೇಡಿಕೆಯ ನಟಿಯಾಗಿದ್ದಾರೆ. 'ತಾಯಿಗೆ ತಕ್ಕ ಮಗ' ಸಿನಿಮಾದ ನಂತರ 'ರಂಗಮಂದಿರ' ಹಾಗೂ 'ಅವತಾರ್ ಪುರುಷ' ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. 'ಅವತಾರ್ ಪುರುಷ'ದಲ್ಲಿ ಶರಣ್ ನಾಯಕನಾಗಿದ್ದು, ಮತ್ತೆ ಚುಟು ಚುಟು ಜೋಡಿ ಒಂದಾಗಿದೆ.

  English summary
  Kannada actress, 'Mugulunage' fame Ashika Ranganath's new photoshoot for times most desirable woman.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X