»   » ಖ್ಯಾತ ರಂಗಕರ್ಮಿ ಅಶೋಕ್ ಬಾದರದಿನ್ನಿ ಇನ್ನಿಲ್ಲ

ಖ್ಯಾತ ರಂಗಕರ್ಮಿ ಅಶೋಕ್ ಬಾದರದಿನ್ನಿ ಇನ್ನಿಲ್ಲ

Written By:
Subscribe to Filmibeat Kannada

ಕನ್ನಡದ ಖ್ಯಾತ ರಂಗಕರ್ಮಿ ಹಾಗೂ ಚಲನಚಿತ್ರ ನಟ ಅಶೋಕ್ ಬಾದರದಿನ್ನಿ ಅನಾರೋಗ್ಯದಿಂದ ಗುರುವಾರ ಮುಂಜಾನೆ ಸಾವಿಗೀಡಾಗಿದ್ದಾರೆ. 66 ವರ್ಷದ ಬಾದರದಿನ್ನಿ ಕಳೆದ ಕೆಲ ದಿನಗಳಿಂದ ಅಲ್ಸರ್ ಕಾಯಿಲೆಯಿಂದ ಬಳುತ್ತಿದ್ದರು. ಇತ್ತೀಚೆಗೆ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆಯನ್ನ ಕೂಡ ನೀಡಲಾಗುತ್ತಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು (ನವೆಂಬರ್ 24) ಬಾದರದಿನ್ನಿ ಕೊನೆಯುಸಿರೆಳೆದಿದ್ದಾರೆ.

Ashok Badaradinni has expired

ಅಶೋಕ್ ಬಾದರದಿನ್ನಿ 200ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದು, ಹಲವು ನಾಟಕ ತರಬೇತಿ ಶಿಬಿರಗಳನ್ನು ಆಯೋಜಿಸಿದ್ದರು. ರವಿಚಂದ್ರನ್ ಅಭಿನಯದ 'ಅಂಜದ ಗಂಡು' ಸಿನಿಮಾದಲ್ಲಿ ನಾಯಕನ ಸ್ನೇಹಿತನ ಪಾತ್ರ ಮಾಡಿದ್ದರು.

ಇದಲ್ಲದೆ 'ಮನ ಮೆಚ್ಚಿದ ಹುಡುಗಿ' 'ನವತಾರೆ', 'ಏಕಲವ್ಯ', 'ಆಸ್ಫೋಟ', 'ಧರ್ಮಪತ್ಮಿ', 'ಭೂತಯ್ಯನ ಮಕ್ಕಳು' ಸೇರಿದಂತೆ 80 ಸಿನಿಮಾಗಳಲ್ಲಿ ಅಭಿನಯಿಸಿದ್ದಲ್ಲದೆ, 300 ಕ್ಕೂ ಹೆಚ್ಚು ಧಾರವಾಹಿಗಳಲ್ಲಿ ಅಭಿನಯಿಸಿದ್ದರು.

English summary
Well known theatre personality and movie actor Ashok Badaradinni has expired today morning at Chitradurga hospital. He was aged 66 and was not well from last two years.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X