»   » ಖ್ಯಾತ ಸಿನಿಮಾ ನಟಿ ಹೆಸರಿನಲ್ಲಿ ನಕಲಿ ಬ್ಯಾಂಕ್ ಅಕೌಂಟ್

ಖ್ಯಾತ ಸಿನಿಮಾ ನಟಿ ಹೆಸರಿನಲ್ಲಿ ನಕಲಿ ಬ್ಯಾಂಕ್ ಅಕೌಂಟ್

Posted By:
Subscribe to Filmibeat Kannada
ಖ್ಯಾತ ಸಿನಿಮಾ ನಟಿ ಹೆಸರಿನಲ್ಲಿ ನಕಲಿ ಬ್ಯಾಂಕ್ ಅಕೌಂಟ್ | Filmibeat Kannada

ಸಾಕಷ್ಟು ಸಿನಿಮಾ ಹಾಗೂ ಧಾರಾವಾಹಿಗಳ ಮೂಲಕ ಮನೆ ಮಾತಾಗಿರುವ ನಟಿ ಅಶ್ವಿನಿ ಗೌಡ, ಉಷಾ ಎಂಬವರ ಮೇಲೆ ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದಾರೆ. ಮಹಾಲಕ್ಷ್ಮಿ ಲೇಔಟ್ 'ಜನತಾ ಸೇವಾ ಕೋ ಆಪರೇಟಿವ್ ಬ್ಯಾಂಕ್' ನಲ್ಲಿ ಅಶ್ವಿನಿ ಗೌಡ ಹೆಸರಿನಲ್ಲಿ ಬ್ಯಾಂಕ್ ಸಿಬ್ಬಂದಿ ಅಕೌಂಟ್ ಕ್ರಿಯೇಟ್ ಮಾಡ್ಕೊಂಡಿದ್ದರು.

ಅಶ್ವಿನಿ ಅವರ ಹೆಸರಿನಲ್ಲೇ ಜನತಾ ಸೇವಾ ಕೋ ಆಪರೇಟಿವ್ ಬ್ಯಾಂಕ್ ಸಿಬ್ಬಂದಿ ಜೈರಾಮ್ ಚೆಕ್ ಬುಕ್ ಕೂಡ ಪಡೆದುಕೊಂಡಿದ್ದರು. ಅನಂತರ 2013 ರಲ್ಲಿ ಆರೋಪಿ ಉಷಾರಿಂದ ಅಶ್ವಿನಿ ಗೌಡ ವಿರುದ್ಧ ಚೆಕ್ ಬೌನ್ಸ್ ಕೇಸ್ ದಾಖಲಾಗಿತ್ತು. ಇದೇ ಸಂಬಂಧ 2014 ರಲ್ಲಿ ಅಶ್ವಿನಿ ಗೌಡರಿಗೆ ವಾರೆಂಟ್ ಜಾರಿಯಾಗಿತ್ತು. ಫೇಕ್ ಬ್ಯಾಂಕ್ ಖಾತೆ ಸಂಬಂಧ 2017 ರಲ್ಲಿ ಅಶ್ವಿನಿ ಗೌಡರಿಂದ ಮಹಾಲಕ್ಷ್ಮಿ ಲೇಔಟ್ ಠಾಣೆಗೆ ದೂರನ್ನು ನೀಡಿದ್ದರು.

Ashwini Gowda has filed complaint against Janata Seva co-operative bank staff

ತನ್ನ ಐಡಿ-ಅಡ್ರಸ್ ಫ್ರೂಫ್ ಕದ್ದು ಅಕೌಂಟ್ ಕ್ರಿಯೇಟ್ ಮಾಡಿದ್ದಾರೆ ಮಹಾಲಕ್ಷ್ಮಿ ಲೇಔಟ್ ಜನತಾ ಸೇವಾ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಖಾತೆ ತೆರೆಯಲಾಗಿದೆ. ಎಂದು ಬ್ಯಾಂಕ್ ಮ್ಯಾನೇಜರ್ ಭಾಗ್ಯ, ವ್ಯವಸ್ಥಾಪಕ ರಾಮು, ಜೈರಾಮ್, ವೆಂಕಟೇಶ್ ಹಾಗೂ ಚೇತನಾ ಮೇಲೆ ಅಶ್ವಿನಿ ಗೌಡ ದೂರು ಕೊಟ್ಟಿದ್ದರು.

Ashwini Gowda has filed complaint against Janata Seva co-operative bank staff

ಇದೀಗ ಚೆಕ್ ಬೌನ್ಸ್ ಕೇಸ್ ಹಾಕಿದ್ದ ಉಷಾ ಎಂಬಾಕೆಯ ಮೇಲೆ ನಟಿ ಅಶ್ವಿನಿ ಗೌಡ ಹಲಸೂರು ಗೇಟ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಹಲಸೂರು ಗೇಟ್ ಪೊಲೀಸರಿಂದ ಆರೋಪಿ ಉಷಾಗಾಗಿ ಹುಡುಕಾಟ ನಡೆಸಿದ್ದಾರೆ. ಅಶ್ವಿನಿ ಗೌಡ 'ಪದ್ಮಾವತಿ', 'ಮನೆ ದೇವ್ರು', ಹೀಗೆ ಹಲವಾರು ಸೀರಿಯಲ್ ನಲ್ಲಿ ಅಭಿನಯಿಸಿದ್ದು ಸಾಕಷ್ಟು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸೈಬರ್ ಕ್ರೈಂ ನಲ್ಲಿ

ವಂಚನೆ ಆರೋಪದಡಿ ನಿರ್ಮಾಪಕಿ ಜಯಶ್ರೀ ದೇವಿ ಅರೆಸ್ಟ್

English summary
A complaint has been lodged against 'Janata Seva co-operative bank' staff, who stole the Kannada actress Aashwini Gowda's ID and address proof and create fake account. Actress Ashwini has filed a complaint against the five bank staff at Halasur Gate station.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X