»   » ಬಣ್ಣದ ಲೋಕಕ್ಕೆ ಕಾಲಿಟ್ಟ ಅಶ್ವಿನಿ ರಾಮ್ ಪ್ರಸಾದ್ ಪುತ್ರ ಅರುಣ್

ಬಣ್ಣದ ಲೋಕಕ್ಕೆ ಕಾಲಿಟ್ಟ ಅಶ್ವಿನಿ ರಾಮ್ ಪ್ರಸಾದ್ ಪುತ್ರ ಅರುಣ್

Posted By:
Subscribe to Filmibeat Kannada

ಖ್ಯಾತ ಆಡಿಯೋ ಕಂಪನಿ ಮಾಲೀಕ, ಕನ್ನಡ ಚಿತ್ರ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಪುತ್ರ ಅರುಣ್ ರಾಮ್ ಪ್ರಸಾದ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.

ಸದ್ದಿಲ್ಲದೇ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿರುವ ಅರುಣ್ ರಾಮ್ ಪ್ರಸಾದ್, ಅದಾಗಲೇ 'ಘಾರ್ಗಾ' ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡು ಮೊದಲನೇ ಹಂತದ ಶೂಟಿಂಗ್ ಮುಗಿಸಿದ್ದಾರೆ.

ಅಷ್ಟಕ್ಕೂ, 'ಘಾರ್ಗಾ' ಹಾರರ್-ಥ್ರಿಲ್ಲರ್ ಸಿನಿಮಾ. ನವ ನಿರ್ದೇಶಕ ಶಶಿ ರಾಜ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಮುಂದಿನ ಹಂತದ ಚಿತ್ರೀಕರಣ ದಾಂಡೇಲಿ ಹಾಗೂ ಬ್ಯಾಂಕಾಕ್ ನಲ್ಲಿ ನಡೆಯಲಿದೆ. ಎ.ಪಿ.ಅರ್ಜುನ್ ಬಳಿ ಕೆಲಸ ಮಾಡಿದ್ದ ಶಶಿ ರಾಜ್, ಇದೀಗ 'ಘಾರ್ಗಾ' ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

Ashwini Ramprasad's son Arun to debut in 'Gharga'

'ಘಾರ್ಗಾ' ಚಿತ್ರದಲ್ಲಿ ಸಾಯಿ ಕುಮಾರ್, ಕಿಶೋರ್, ಅರುಣ್ ಸಾಗರ್, ಅವಿನಾಶ್, ಚಂದನಾ ಗೌಡ ತಾರಾಗಣ ಇದೆ. 'ನೀನಾಸಂ'ನಲ್ಲಿ ಟ್ರೇನಿಂಗ್ ಪಡೆದಿರುವ ಅರುಣ್ ಪ್ರಸಾದ್ ಇದೀಗ ಬೆಳ್ಳಿಪರದೆ ಮೇಲೆ ಮಿನುಗಲು ಸಜ್ಜಾಗಿದ್ದಾರೆ. ವಿಶೇಷ ಅಂದ್ರೆ ಮಗನ ಈ ಚೊಚ್ಚಲ ಪ್ರಯತ್ನಕ್ಕೆ ಅಪ್ಪ ಅಶ್ವಿನಿ ರಾಮ್ ಪ್ರಸಾದ್ ಅವರೇ ಬಂಡವಾಳ ಹಾಕುತ್ತಿದ್ದಾರೆ. 'ಘಾರ್ಗಾ' ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಕೊಡ್ತಾಯಿರ್ತೀವಿ, 'ಫಿಲ್ಮಿಬೀಟ್ ಕನ್ನಡ' ಪೇಜ್ ಲೈಕ್ ಮಾಡಿ, ಫಾಲೋ ಮಾಡಿ...

Ashwini Ramprasad's son Arun to debut in 'Gharga'
English summary
Ashwini Ramprasad's son Arun Ramprasad to debut in 'Gharga' directed by Shashi Raj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X