For Quick Alerts
  ALLOW NOTIFICATIONS  
  For Daily Alerts

  ಕುಡಿದ ಮತ್ತಿನಲ್ಲಿ ರಾಗಿಣಿಗೆ ಉಮೇಶ್ ಎಸ್ಎಂಎಸ್

  By Rajendra
  |

  ನಟಿ ರಾಗಿಣಿ ಅವರಿಗೆ ಅಶ್ಲೀಲ ಎಸ್ಎಂಎಸ್ ಕಳುಹಿಸಿ ಸಿಕ್ಕಿಬಿದ್ದಿದ್ದ ಸಹಾಯಕ ನಿರ್ದೇಶಕ ಉಮೇಶ್ ಕ್ಷಮೆಯಾಚಿಸಿದ್ದಾನೆ. ಕುಡಿದ ಮತ್ತಿನಲ್ಲಿ ಈ ತಪ್ಪಾಯಿತು ಎಂದು ಚಲನಚಿತ್ರ ವಾಣಿಜ್ಯ ಮ‌oಡಳಿ ಅಧ್ಯಕ್ಷ ಬಿ.ವಿಜಯಕುಮಾರ್, ರಾಗಿಣಿ ಹಾಗೂ ಇತರೆ ಪದಾಧಿಕಾರಿಗಳ ಸಮ್ಮುಖದಲ್ಲಿ ಕ್ಷಮೆಯಾಚಿಸಿದ್ದಾರೆ.

  ಇದೇ ಸಂದರ್ಭದಲ್ಲಿ ಉಮೇಶ್ ವಿರುದ್ಧ ಫಿಲಂ ಚೇಂಬರ್ ನಾಲ್ಕು ತಿಂಗಳು ಕಾಲ ಚಿತ್ರರಂಗದಿಂದ ನಿಷೇಧ ಹೇರಿದೆ. ನಾಲ್ಕು ತಿಂಗಳ ಕಾಲ ಉಮೇಶ್ ಅವರಿಗೆ ಚಿತ್ರರಂಗದಲ್ಲಿ ಯಾರೂ ಕೆಲಸ ಕೊಡಬಾರದು ಎಂದು ಆದೇಶಿಸಿದೆ.

  ರಾಗಿಣಿ ಹಾಗೂ ಫಿಲಂ ಚೇಂಬರ್ ಪದಾಧಿಕಾರಿಗಳ ಮುಂದೆ ಉಮೇಶ್ ಹಾಜರಾಗಿ, ಕುಡಿದ ಮತ್ತಿನಲ್ಲಿ ಈ ಪ್ರಮಾದವಾಗಿದೆ. ಇನ್ನು ಮುಂದೆ ಈ ರೀತಿಯ ತಪ್ಪು ಆಗದಂತೆ ನಡೆದುಕೊಳ್ಳುತ್ತೇನೆ ಎಂದು ಕ್ಷಮೆಯಾಚಿಸಿದ್ದಾರೆ ಉಮೇಶ್.

  ಬಳಿಕ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ನಟಿ ರಾಗಿಣಿ, "ಪೊಲೀಸರು ಹಾಗೂ ವಾಣಿಜ್ಯ ಮಂಡಳಿ ಉಮೇಶ್ ವಿರುದ್ಧ ತಕ್ಷಣ ಕ್ರಮಗೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಯಾವುದೇ ಹೆಣ್ಣುಮಕ್ಕಳಿಗೂ ಈ ರೀತಿ ಆಗಬಾರದು ಎಂಬ ಉದ್ದೇಶದಿಂದ ಈ ದಿಟ್ಟ ನಿಲುವು ಕೈಗೊಂಡೆ" ಎಂದರು.

  ಉಮೇಶ್ ಅವರು ಪ್ರೀತಂ ಗುಬ್ಬಿ, ಆನಂದ್ ಪಿ ರಾಜು ಅವರ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವುದಾಗಿ ತಿಳಿಸಿದ್ದರು. ಈತ ರಾತ್ರಿ 11.30 ರಿಂದ 2.13ರ ಸಮಯದಲ್ಲಿ ರಾಗಿಣಿ ಅವರ ತಾಯಿಗೆ ಪದೇ ಪದೇ ಕರೆ ಮಾಡಿ ತಾನು ಸಹಾಯಕ ನಿರ್ದೇಶಕ ಎಂದು ಹೇಳಿಕೊಂಡು ಅಶ್ಲೀಲವಾಗಿ ಮಾತನಾಡಿ ಕಿರಿಕಿರಿ ಮಾಡುತ್ತಿದ್ದ ಎಂದು ರಾಗಿಣಿ ಆರೋಪಿಸಿದ್ದರು. (ಏಜೆನ್ಸೀಸ್)

  English summary
  Assistant director Umesh, who had been sending lewd messages to actor Ragini Dwivedi, has been banned from any work in the industry for three months. Umesh claims to have been assisting directors like Preetham Gubbi and Anand P Raju, even worked with the censor board. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X