Just In
Don't Miss!
- News
ಕೇಂದ್ರ ಬಜೆಟ್ 2021:ಬೆಂಗಳೂರಿನ ನಿರೀಕ್ಷೆಗಳೇನು?
- Sports
ಟೆಸ್ಟ್ ಪದಾರ್ಪಣೆ ಹಾಗೂ ಸರಣಿ ಗೆಲುವು, ಕನಸು ನನಸಾದ ಸಂದರ್ಭ: ವಾಶಿಂಗ್ಟನ್ ಸುಂದರ್
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶಾರೂಖ್ ಜೊತೆ ಸಿನಿಮಾ ಬಗ್ಗೆ ಅಟ್ಲಿ ಸ್ಪಷ್ಟನೆ: ಆದರೂ ನಿಲ್ಲದ ಗೊಂದಲ!
ಐಪಿಎಲ್ ಪಂದ್ಯದ ವೇಳೆ ಬಾಲಿವುಡ್ ನಟ ಶಾರೂಖ್ ಖಾನ್ ಜೊತೆ ತಮಿಳು ನಿರ್ದೇಶಕ ಅಟ್ಲಿ ಅದ್ಯಾವಾಗ ಕಾಣಿಸಿಕೊಂಡರೋ, ಅಲ್ಲಿಂದ ಇವರಿಬ್ಬರ ಕಾಂಬಿನೇಷನ್ ಚಿತ್ರದ ಬಗ್ಗೆ ಬಹುದೊಡ್ಡ ಚರ್ಚೆ ಆರಂಭವಾಗಿತ್ತು.
ಶಾರೂಖ್ ಖಾನ್ ಜೊತೆ ಅಟ್ಲಿ ಸಿನಿಮಾ ಮಾಡ್ತಾರೆ, ಬಾಲಿವುಡ್ ಗೆ ಯಂಗ್ ಡೈರೆಕ್ಟರ್ ಜಿಗಿಯುತ್ತಾರಾ ಎಂಬ ಅಂತೆ-ಕಂತೆಗಳು ಸದ್ದು ಮಾಡಿದ್ದವು. ಈ ಕುರಿತು ಶಾರೂಖ್ ಆಗಲಿ ಅಥವಾ ಅಟ್ಲಿ ಆಗಲಿ ಸ್ಪಷ್ಟನೆ ನೀಡಿರಲಿಲ್ಲ.
ಶಾರುಖ್ ಬಿಟ್ಟು ಮತ್ತೊಬ್ಬ ಸ್ಟಾರ್ ನಟನ ಕೈ ಹಿಡೀತಾರಾ ನಿರ್ದೇಶಕ ಅಟ್ಲೀ
ಇದೀಗ, ಈ ಸುದ್ದಿಯ ಬಗ್ಗೆ ಅಟ್ಲಿ ಸ್ಪಷ್ಟನೆ ನೀಡಿದ್ದಾರೆ. askatlee ಅಭಿಯಾನದಲ್ಲಿ ಅಭಿಮಾನಿಯೊಬ್ಬರು ಶಾರೂಖ್ ಜೊತೆ ಸಿನಿಮಾ ಮಾಡಿ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅಟ್ಲಿ ''ನನಗೆ ಎಸ್ ಆರ್ ಕೆ ಅವರ ಮೇಲೆ ದೊಡ್ಡ ಗೌರವ ಮತ್ತು ಪ್ರೀತಿ ಇದೆ. ಅವರು ಕೂಡ ನನ್ನ ಕೆಲಸವನ್ನ ಮೆಚ್ಚಿದ್ದಾರೆ. ಆದಷ್ಟೂ ಬೇಗ ಈ ಬಗ್ಗೆ ನಾವು ಒಂದು ನಿರ್ಧಾರಕ್ಕೆ ಬರ್ತೀವಿ'' ಎಂದು ತಿಳಿಸಿದ್ದಾರೆ.
ಶಾರೂಖ್ ಖಾನ್ ಜೊತೆ ಸಿನಿಮಾ ಮಾಡುವ ತಯಾರಿ ನಡೆಯುತ್ತಿದೆ ಎನ್ನುವುದರ ಬಗ್ಗೆ ನೇರವಾಗಿ ಹೇಳದ ಅಟ್ಲಿ, ಪರೋಕ್ಷವಾಗಿ ಹೌದು ಇಂತಹದೊಂದು ಪ್ರಯತ್ನ ನಡೆಯುತ್ತಿದೆ, ಮುಂದಿನ ದಿನದಲ್ಲಿ ನಿಜ ಆಗಬಹುದು ಎಂಬ ಅರ್ಥದಲ್ಲಿ ಉತ್ತರಿಸಿದ್ದಾರೆ.
ಅಲ್ಲಿಗೆ, ಶಾರೂಖ್ ಖಾನ್ ಮುಂದಿನ ಅಟ್ಲಿ ಸಿನಿಮಾ ಇರೋದು ನಿಜಾ. ಅದಕ್ಕೆ ಬಾಲಿವುಡ್ ಖಾನ್ ಒಪ್ಪಿಗೆ ಕೊಟ್ಟು, ಬುಲಾವ್ ಕೊಡ್ತಾರಾ ಎಂಬುದರ ಬಗ್ಗೆ ಸದ್ಯಕ್ಕೆ ಉತ್ತರ ಇಲ್ಲ. ಹಾಗಾಗಿ, ಈಗಲೂ ಈ ಗೊಂದಲ ಮುಂದುವರಿಯಲಿದೆ.
'ಜೀರೋ' ಚಿತ್ರದ ಸೋಲಿನ ಬಳಿಕ ಶಾರೂಖ್, ಯಾವ ಚಿತ್ರವನ್ನ ಕೈಗೆತ್ತಿಕೊಂಡಿಲ್ಲ. ಈ ಕಡೆ ತಮಿಳು ನಟ ವಿಜಯ್ ಜೊತೆ ಮಾಡಿರುವ 'ಬಿಗಿಲ್' ಸಿನಿಮಾ ಈ ವಾರ ತೆರೆಕಂಡಿದೆ.