For Quick Alerts
  ALLOW NOTIFICATIONS  
  For Daily Alerts

  ಮುಂದಿನ ತಿಂಗಳಲ್ಲಿ ವೀರಪ್ಪನ್ 'ಅಟ್ಟಹಾಸ' ಶುರು

  |
  <ul id="pagination-digg"><li class="next"><a href="/news/amr-ramesh-attahasa-movie-release-05-october-2012-068357.html">Next »</a></li></ul>

  ಕುಖ್ಯಾತ ನರಹಂತಹ ಹಾಗೂ ದಂತಚೋರ ವೀರಪ್ಪನ್ ಕುರಿತಾದ ಎಎಂಆರ್ ರಮೇಶ್ ನಿರ್ದೇಶನದ 'ಅಟ್ಟಹಾಸ' ಚಿತ್ರವು ಈ ಶುಕ್ರವಾರ (28 ಸೆಪ್ಟೆಂಬರ್ 2012) ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರದ ಬಿಡುಗಡೆ ಅನಿವಾರ್ಯ ಕಾರಣ ಮುಂದಕ್ಕೆ ಹೋಗಿದೆ. ಈಗಿನ ಮಾಹಿತಿ ಪ್ರಕಾರ ಚಿತ್ರವು ಬರುವ ತಿಂಗಳು 5ಕ್ಕೆ (5 ಅಕ್ಟೋಬರ್ 2012) ತೆರೆಗೆ ಬರಲಿದೆ. ಅಂದಹಾಗೆ ಈ ಚಿತ್ರಕ್ಕೆ 'ಯು-ಎ' ಪ್ರಮಾಣಪತ್ರ ನೀಡಲಾಗಿದೆ.

  ಅಟ್ಟಹಾಸ ಚಿತ್ರವು ತಮಿಳಿನಲ್ಲಿ 'ವನ ಯುದ್ಧಂ' ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರ ಬಿಡುಗಡೆಯಾಗುವುದಕ್ಕೂ ಮೊದಲು ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀಯ ಒಪ್ಪಿಗೆ ಪಡೆಯಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು. ಅದರಂತೆ ಇತ್ತೀಚಿಗೆ ತಮ್ಮ ಐವರು ವಕೀಲರು, ಹಾಗೂ ನಿಯೋಜಿಸಲಾಗಿದ್ದ ಸರ್ಕಾರಿ ವಕೀಲರೊಂದಿಗೆ ಮುತ್ತುಲಕ್ಷ್ಮೀ ಚೆನ್ನೈಯ ದೇವಿ ಶ್ರೀದೇವಿ ಚಿತ್ರಮಂದಿರದಲ್ಲಿನ ನಡೆದ ವಿಶೇಷ ಪ್ರದರ್ಶನದಲ್ಲಿ ಚಿತ್ರ ವೀಕ್ಷಿಸಿದ್ದಾರೆ.

  ಈಗಾಗಲೇ ನ್ಯಾಯಾಲಯವು 'ಮುತ್ತುಲಕ್ಷ್ಮಿ ಚಿತ್ರವನ್ನು ನೋಡಿ, ಆಕ್ಷೇಪಾರ್ಹ ಏನಾದರೂ ಇದ್ದರೆ 'ದೃಶ್ಯ-ವಿವರ'ಗಳ ಸಮೇತ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅಲ್ಲಿ ನ್ಯಾಯಾಧೀಶರು, ಚಿತ್ರದಲ್ಲಿರುವ ಯಾವುದೇ ಅಂಶ ಮುತ್ತುಲಕ್ಷ್ಮಿ ಮತ್ತು ಅವರ ಮಕ್ಕಳ ವೈಯಕ್ತಿಕ ಜೀವನಕ್ಕೆ ತೊಂದರೆಯಾಗುವಂತಿದ್ದರೆ ಅದನ್ನು ಪರಿಶೀಲಿಸಿ ತೀರ್ಪು ನೀಡಲಾಗುತ್ತದೆ" ಎಂದಿದ್ದರು. ಅದರಂತೆ ಚಿತ್ರ ನೋಡಿದ್ದಾರೆ ಮತ್ತುಲಕ್ಷ್ಮೀ.

  ಕನ್ನಡ ಮತ್ತು ತಮಿಳು ಎರಡೂ ಭಾಷೆಗಳಲ್ಲಿ ಸಿದ್ಧವಾಗಿರುವ ಚಿತ್ರವನ್ನು ನೋಡಿರುವ ಮತ್ತುಲಕ್ಷ್ಮೀ, ಚಿತ್ರದಲ್ಲಿನ ಕೆಲವು ದೃಶ್ಯಗಳ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ದೃಶ್ಯಗಳಿಗೆ ಕತ್ತರಿ ಹಾಕಬೇಕು ಎಂದಿದ್ದಾರೆ. ಈ ಹಿಂದೆ ಒಂದೆರಡು ಬಾರಿ ಆ ಚಿತ್ರವನ್ನು ನೋಡಲು ಪ್ರದರ್ಶನ ಏರ್ಪಡಿಸಲಾಗಿತ್ತಾದರೂ, ಅದಕ್ಕೆ ಮುತ್ತುಲಕ್ಷ್ಮಿ ಹಾಜರಾಗಿರಲಿಲ್ಲ. ಅಂತೂ ಕೊನೆಗೆ ಮತ್ತುಲಕ್ಷ್ಮೀ ಚಿತ್ರ ನೋಡಿದ್ದಾರೆ, ತಮ್ಮ ನಿಲುವು ತಿಳಿಸಿದ್ದಾರೆ. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/news/amr-ramesh-attahasa-movie-release-05-october-2012-068357.html">Next »</a></li></ul>
  English summary
  Attahasa movie is not releasing on this month, 28th September 2012 as the earlier announcement. AMR Ramesh Directed this movie to release on 05th October 2012, as the recent sources are concerned. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X