»   » ದೆಹಲಿ ಕನ್ನಡ ಚಲನಚಿತ್ರೋತ್ಸವಕ್ಕೆ ಅದ್ದೂರಿ ಚಾಲನೆ

ದೆಹಲಿ ಕನ್ನಡ ಚಲನಚಿತ್ರೋತ್ಸವಕ್ಕೆ ಅದ್ದೂರಿ ಚಾಲನೆ

By Suneetha
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ನವದೆಹಲಿಯಲ್ಲಿ ಏಪ್ರಿಲ್ 16 ರಿಂದ 18ರವರೆಗೆ ಸತತ 3 ದಿನಗಳ ಕಾಲ ಏರ್ಪಡಿಸಿರುವ ಕನ್ನಡ ಚಲನಚಿತ್ರೋತ್ಸವವು ಯಶಸ್ವಿಯಾಗಿ ಪ್ರಾರಂಭಗೊಂಡಿತು.

  ನವದೆಹಲಿಯ ಸಿರಿಪೋರ್ಟ್ ಆಡಿಟೋರಿಯಂ ನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಭಾರತ ಸರ್ಕಾರದ ಚಲನಚಿತ್ರೋತ್ಸವ ನಿರ್ದೇಶನಾಲಯ ಹಾಗು ದೆಹಲಿ ಕರ್ನಾಟಕ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರುವ ಈ ಚಲನಚಿತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಭವನದ ನಿವಾಸಿ ಆಯುಕ್ತರಾದ ಅತುಲ್ ಕುಮಾರ್ ತಿವಾರಿ ಅವರು ಮಾತನಾಡಿ, ''ಕನ್ನಡ ಭಾಷೆ, ಕಲೆ, ಸಂಸ್ಕೃತಿ ಪರಂಪರೆಯನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಏರ್ಪಡಿಸಬೇಕಿದೆ''.[ನವದೆಹಲಿಯ ಚಲನಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳ ಅಬ್ಬರ]

  ''ಚಲನಚಿತ್ರ ಕ್ಷೇತ್ರವು ಅತ್ಯಂತ ಪ್ರಭಾವಶಾಲಿ ಮಾಧ್ಯಮವಾಗಿದ್ದು, ಈ ಚಲನಚಿತ್ರೋತ್ಸವ ಕಾರ್ಯಕ್ರಮವು ಕನ್ನಡ ಭಾಷೆ, ಕಲೆ ಸಾಹಿತ್ಯವನ್ನು ಪ್ರೋತ್ಸಾಹಿಸುತ್ತದೆ. ಇಂತಹ ಕಾರ್ಯಕ್ರಮಗಳನ್ನು ನವದೆಹಲಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏರ್ಪಡಿಸುವ ಮೂಲಕ ಕನ್ನಡ ಕಂಪನ್ನು ಮೊಳಗಿಸಬೇಕು'' ಎಂದು ಅವರು ತಿಳಿಸಿದರು.

  ಚಲನಚಿತ್ರೋತ್ಸವ ನಿರ್ದೇಶನಾಲಯದ ನಿರ್ದೇಶಕ ಸೆಂಥಿಲ್ ರಾಜನ್ ಮಾತನಾಡಿ, "ಈ ಕನ್ನಡ ಚಲನಚಿತ್ರೋತ್ಸವದಿಂದ ದೆಹಲಿಯಲ್ಲಿ ಕನ್ನಡ ಚಲನಚಿತ್ರಗಳು ಪ್ರದರ್ಶನಗೊಂಡು ಭಾಷೆಯ ಪುನರುಜ್ಜೀವನಗೊಳ್ಳಲಿದೆ. ಯುವ ಪೀಳೆಗೆಗೆ ಭಾಷೆಯನ್ನು ಸಂರಕ್ಷಿಸಲು ನೆರವಾಗುತ್ತದೆ'' ಎಂದು ತಿಳಿಸಿದರು.[ದೆಹಲಿಯಲ್ಲಿ ಕನ್ನಡ ಚಿತ್ರ ವೀಕ್ಷಿಸಿ ಖುಷಿಪಟ್ಟ ಜನ]

  ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರನಟ ಸಂಚಾರಿ ವಿಜಯ್ ಮಾತನಾಡಿ, "ಕನ್ನಡ ಚಲನಚಿತ್ರಗಳು ದೇಶದೆಲ್ಲೆಡೆ ಪ್ರದರ್ಶನಗೊಳ್ಳಬೇಕು. ಕನ್ನಡದ ಮಹತ್ವ ದೇಶದೆಲ್ಲೆಡೆ ತಿಳಿಯಬೇಕು" ಎಂದು ತಿಳಿಸಿದರು.

  ಹಿರಿಯ ಪತ್ರಕರ್ತರಾದ ಡಿ.ಉಮಾಪತಿ ಅವರು ಮಾತನಾಡಿ, "ಸಾಮಾಜಿಕ ಕಳಕಳಿಯುಳ್ಳ ಸದಭಿರುಚಿಯ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಮೂಡಿಬರಬೇಕು. ಕರ್ನಾಟಕದಲ್ಲಿ ಪರಭಾಷೆ ಚಿತ್ರಗಳ ಮೋಹಬಿಟ್ಟು ಕನ್ನಡ ಭಾಷೆಯ ಚಲನಚಿತ್ರಗಳನ್ನು ವೀಕ್ಷಿಸಬೇಕು. ಕನ್ನಡ ಭಾಷೆಯ ಚಿತ್ರಗಳೂ ಉತ್ತಮವಾಗಿ ಮೂಡಿಬರುತ್ತಿದ್ದು, ಯಶಸ್ವಿ ಪ್ರದರ್ಶನಗೊಳ್ಳುತ್ತಿವೆ".

  "ಸಾಮಾಜಿಕ ಸಮಸ್ಯೆಗಳಾದ ಹೆಣ್ಣು ಭ್ರೂಣಹತ್ಯೆ, ಜಾತಿ ಪದ್ದತಿ, ಸೇರಿದಂತೆ ಜಟಿಲ ಸಮಸ್ಯೆಗಳನ್ನು ತೊಲಗಿಸಲು ನೆರವಾಗುವಂತಹ ಆಧಾರದಡಿಯ ಚಲನಚಿತ್ರಗಳು ಹೊರಹೊಮ್ಮಬೇಕು" ಎಂದು ಅವರು ತಿಳಿಸಿದರು.[ಅದ್ಧೂರಿಯಾಗಿ ಆರಂಭಗೊಂಡ ಭಾರತೀಯ ಪನೋರಮಾ ಸಿನಿಹಬ್ಬ]

  ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರಿ ಮಾತನಾಡಿ, "ಕನ್ನಡ ಚಲನಚಿತ್ರಗಳೊಂದಿಗೆ ಪ್ರಾದೇಶಿಕ ಚಲನಚಿತ್ರಗಳು ಪ್ರದರ್ಶನಗೊಳ್ಳಬೇಕು" ಎಂದರು.

  ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು, "ಕನ್ನಡ ಚಲನಚಿತ್ರ ಪರಂಪರೆಯು ಮತ್ತಷ್ಟು ಉತ್ಕೃಷ್ಟವಾಗಿ ಬೆಳೆಯಬೇಕು. ರಾಜ್ಯದಲ್ಲಿ ಪರಭಾಷೆಯ ಚಲನಚಿತ್ರಗಳ ಭರಾಟೆ ಹೆಚ್ಚಾಗಿದೆ. ಕನ್ನಡ ಭಾಷೆಯು ಶ್ರೀಮಂತವಾಗಿದೆ".

  "ಹೆಚ್ಚು ಜ್ಞಾನ ಪೀಠ ಪ್ರಶಸ್ತಿಗಳು ಸಂದಿವೆ. ಚಲನಚಿತ್ರಗಳಿಗೆ ಅನೇಕ ಮಹತ್ವದ ಪ್ರಶಸ್ತಿಗಳು ಲಭಿಸಿವೆ. ಹೊರರಾಜ್ಯಗಳಲ್ಲಿ ಕನ್ನಡ ಚಲನಚಿತ್ರ ಅಭಿರುಚಿಯನ್ನು ಹೆಚ್ಚಿಸುವ ಸಲುವಾಗಿ ಹೊರಾಜ್ಯಗಳಲ್ಲಿ ಚಲನಚಿತ್ರ ಪ್ರದರ್ಶನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ" ಎಂದು ಅವರು ತಿಳಿಸಿದರು.[ಕನ್ನಡ ಚಲನಚಿತ್ರ ಸಿಂಹಾವಲೋಕನ: ಸಾಧಕರಿಗೆ ಸನ್ಮಾನ]

  ಕರ್ನಾಟಕ ಭವನದ ಉಪನಿವಾಸಿ ಆಯುಕ್ತರಾದ ಅನೀಸ್ ಕೆ. ಜಾಯ್, ದೆಹಲಿ ಕರ್ನಾಟಕ ಸಂಘದ ಪ್ರದಾನ ಕಾರ್ಯದರ್ಶಿ ಸಿ.ಎಂ. ನಾಗರಾಜ್, ಹೆಸರಾಂತ ಬರಹಗಾರರಾದ ಪ್ರೋ.ಎಚ್.ಎಸ್. ಶಿವಪ್ರಕಾಶ್, ಪ್ರಧಾನ ಮಂತ್ರಿಗಳ ಕಚೇರಿಯ ನಿರ್ದೇಶಕರಾದ ವಿ.ಶೇಷಾದ್ರಿ, ಸಮನ್ವಯಾಧಿಕಾರಿ ಕೆ. ಶಿವರಾಮ್ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

  ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟರ್ ಹೆಚ್. ಬಿ. ದಿನೇಶ್ ಸ್ವಾಗತಿಸುತ್ತಾ, ಹೊರ ರಾಜ್ಯದಲ್ಲಿ ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ ಪರಂಪರೆಯನ್ನು ಬೆಳೆಸಲು ಚಲನಚಿತ್ರೋತ್ಸವ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು. ವಾರ್ತಾಧಿಕಾರಿ ಹೆಚ್. ಶ್ರೀನಿವಾಸ ವಂದಿಸಿದರು.

  ನಿರ್ದೇಶಕ ರಾಮ ರೆಡ್ಡಿ ನಿರ್ದೇಶನ 'ತಿಥಿ', ನಿರ್ದೇಶಕ ಬಿಎಸ್. ಲಿಂಗದೇವರು ನಿರ್ದೇಶನದ 'ನಾನು ಅವನಲ್ಲ ಅವಳು' ಹಾಗು ಅನುಪ್ ಬಂಡಾರಿ ನಿರ್ದೇಶನದ 'ರಂಗಿತರಂಗ' ಚಲಚಿತ್ರಗಳು ಸಿನಿಮೋತ್ಸವದಲ್ಲಿ ಪ್ರದರ್ಶನ ಗೊಂಡವು.

  -
  -
  -
  -
  -
  -
  -
  -
  -
  -
  -

  English summary
  Jointly organised by the Karnataka Department of Information, Directorate of Film Festivals and the Karnataka Chalanachitra Academy, a film festival in New Delhi will screen 9 Kannada films. The event which starts from April 16th and ends on April 18th, will showcase the recently released and critically acclaimed Kannada movies.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more