'99' ಚಿತ್ರ ನೋಡಿ ಬಂದ ಪ್ರೇಕ್ಷಕರು ಟ್ವಿಟ್ಟರ್ ನಲ್ಲಿ ಹೇಳಿದ್ದೇನು?

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಭಾವನಾ ಅಭಿನಯದ 99 ಸಿನಿಮಾ ಮೇ 1 ರಂದು ಬಿಡುಗಡೆಯಾಗಿದೆ. ತಮಿಳಿನ 96 ಚಿತ್ರದ ರೀಮೇಕ್ ಆಗಿದ್ದರಿಂದ ಈ ಸಿನಿಮಾದ ಮೇಲೆ ತುಂಬಾ ಕುತೂಹಲವಿತ್ತು. ಇದೀಗ ಸಿನಿಮಾ ರಿಲೀಸ್ ಆದ್ಮೇಲೆ ಪ್ರೇಕ್ಷಕರು ಖುಷಿಯಾಗಿದ್ದಾರೆ.

ಸಿನಿಮಾ ಚೆನ್ನಾಗಿದೆ, ಗಣೇಶ್ ಮತ್ತು ಭಾವನಾ ಜೋಡಿ ಮುದ್ದಾಗಿದೆ. ಈ ಸಿನಿಮಾ ನೋಡುತ್ತಿದ್ದರೇ ಶಾಲೆಯ ಜೀವನಕ್ಕೆ ವಾಪಸ್ ಹೋಗಬೇಕು ಎನಿಸುತ್ತದೆ ಎಂಬ ಮಾತುಗಳನ್ನ ಹೇಳುತ್ತಿದ್ದಾರೆ.

Audience response for 99 movie

ಈ ಬಗ್ಗೆ ಟ್ವಿಟ್ಟರ್ ನಲ್ಲಿ ಕೆಲವು ಪ್ರೇಕ್ಷಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ''99 ಸಿನಿಮಾ ಸೂಪರ್ ಮತ್ತು ಅದ್ಭುತ. ನಮ್ಮ ಬಾಸು ಡಿಫರೆಂಟ್ ಲುಕ್, ಎಮೋಷನ್ ತುಂಬಾ ಇಷ್ಟ ಆಯ್ತು. ಚಿತ್ರಕಥೆ ಅತ್ಯದ್ಭುತ'' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

''#99TheMovie ....ಸಿನಿಮಾ ತುಂಬಾ ಚೆನ್ನಾಗಿದೆ ...ಕಾಮಿಡಿ , ನಗು , ಅಳು , ಹಾಡು ಎಲ್ಲವೂ ಅದ್ಭುತವಾಗಿವೆ...ತೀರ್ಥಹಳ್ಳಿ ಶಾಲೆ , ನಿಮ್ಮ ಕತೆಗಳು....ಅದ್ಭುತವಾಗಿವೆ..'' ಎಂದು ಹೇಳಿದ್ದಾರೆ.

''ನೀರವ ಮೌನ, ಅಂದವಾದ ಚಿತ್ರಿಕೆ, ಕಿವಿಗೆ ಹಿತವೆನಿಸುವ ಸಂಗೀತ, ಕಾಡುವ ನಮ್ಮ ಹಳೇ ಶಾಲಾ ದಿನಗಳು,ಈ ಪಾತ್ರಕ್ಕೆ ಜೀವ ತುಂಬಿರುವ ಗಣೇಶ್ boss ನಟನೆ, ನೆನೆಯುವ ಪಾತ್ರಗಳು, ಎಲ್ಲೆ ಮೀರದ ಏಕಾಂತದ ಅಧ್ಯಾತ್ಮನಂದ =99 ವಿಶೇಷವಾದ ಧನ್ಯವಾದಗಳು'' ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ಪ್ರೀತಂ ಗುಬ್ಬಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ತಮಿಳಿನಲ್ಲಿ ವಿಜಯ್ ಸೇತುಪತಿ ಮತ್ತು ತ್ರಿಷಾ ಅಭಿನಯಿಸಿದ್ದ ಪಾತ್ರಗಳಲ್ಲಿ ಗಣೇಶ್ ಮತ್ತು ಭಾವನಾ ನಟಿಸಿದ್ದಾರೆ. ರಾಮು ಈ ಚಿತ್ರವನ್ನ ನಿರ್ಮಿಸಿದ್ದಾರೆ.

More from Filmibeat

English summary
Golden star ganesh and bhavana starrer 99 movie has released on may 1st. the movie good response from Audience. movie directed by preetham gubbi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X