Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಸ್ಟ್ರೇಲಿಯ ಕನ್ನಡಿಗರಿಂದ ಪುನೀತ್‌ಗೆ ಗೀತ ನಮನ
ಆಸ್ಟ್ರೇಲಿಯ
ಕನ್ನಡಿಗರಿಂದ
ಪುನೀತ್‌ಗೆ
ಗೀತ
ನಮನ.
ಪುನೀತ್
ರಾಜ್‌ಕುಮಾರ್
ನಮ್ಮನ್ನೆಲ್ಲಾ
ಅಗಲಿ
ನಾಳೆಗೆ
ಒಂದು
ತಿಂಗಳು.
ಒಂದು
ತಿಂಗಳು
ಕಳೆದರೂ
ಪುನೀತ್
ರಾಜ್‌ಕುಮಾರ್
ನಮ್ಮೊಂದಿಗೆ
ಇಲ್ಲ
ಅನ್ನುವ
ನೋವನ್ನು
ಮರೆಯಲು
ಸಾಧ್ಯವಾಗುತ್ತಿಲ್ಲ.
ಅವರ
ನಗು,
ಅವರ
ಸಿನಿಮಾಗಳು
,
ಅವರ
ಆದರ್ಶ
ವ್ಯಕ್ತಿತ್ವ,
ಇವೆಲ್ಲವೂ
ಹಾಗೇ
ನೆನಪಿನಲ್ಲಿ
ಉಳಿದಿದೆ.
ಎಷ್ಟೇ
ಪ್ರಯತ್ನ
ಪಟ್ಟರೂ
ಪುನೀತ್
ಅವರ
ನೆನಪುಗಳು
ಕಾಡುತ್ತಲೇ
ಇವೆ.
ಈಗಲೂ
ಅಭಿಮಾನಿಗಳು,
ಕುಟುಂಬ
ಸದಸ್ಯರು
ಅವರ
ನೆನಪಲ್ಲೇ
ದಿನ
ದೂಡುತ್ತಿದ್ದಾರೆ.
ಅವರಿಲ್ಲ
ಎಂಬ
ನೋವಿನಲ್ಲೆ
ಜೀವನ
ನಡೆಸುತ್ತಿದ್ದಾರೆ.
ರಾಜ್ಯ
ಹೊರರಾಜ್ಯ,
ದೇಶ
ವಿದೇಶಗಳಲ್ಲೂ
ಪುನೀತ್
ರಾಜ್‌ಕುಮಾರ್
ಸ್ಮರಣೆಗಳು
ಆಗುತ್ತಿದ್ದು,
ಈಗಲೂ
ಅವರ
ಹೆಸರಲ್ಲಿ
ಜನ
ನೇತ್ರದಾನ,
ರಕ್ತದಾನ,
ಅನ್ನದಾನದಂತಹ
ಮಹತ್ಕಾರ್ಯಗಳನ್ನು
ಮಾಡುತ್ತಿದ್ದಾರೆ.
ಇದೀಗ
ಪುನೀತ್
ರಾಜ್‌ಕುಮಾರ್
ನಿಧನರಾಗಿ
ಒಂದು
ತಿಂಗಳ
ಸ್ಮರಣಾರ್ಥವಾಗಿ
ಆಸ್ಟ್ರೇಲಿಯಾದಲ್ಲಿ
ಗೀತ
ನಮನ
ಕಾರ್ಯಕ್ರಮವನ್ನು
ಹಮ್ಮಿಕೊಳ್ಳಲಾಗಿತ್ತು.
ಆಸ್ಟ್ರೇಲಿಯಾದಲ್ಲಿ
ನೆಲೆಸಿರುವ
ಕನ್ನಡಿಗರು
ಈ
ಗೀತ
ನಮನ
ಕಾರ್ಯಕ್ರಮವನ್ನು
ಹಮ್ಮಿಕೊಂಡು
ಇದರಲ್ಲಿ
ಪುನೀತ್
ಅವರ
ಸ್ಮರಣೆಯನ್ನು
ಕೂಡ
ಮಾಡಿದ್ದಾರೆ.
ಸುಮಾರು
300ಕ್ಕೂ
ಹೆಚ್ಚು
ಮಂದಿ
ಸೇರಿ
ಆಯೋಜಿಸಿದ್ದ
ಈ
ಕಾರ್ಯಕ್ರಮ
ಯಶಸ್ವಿಯಾಗಿದೆ
ಎಂಬ
ಬಗ್ಗೆ
ಸೋಷಿಯಲ್
ಮೀಡಿಯಾದಲ್ಲಿ
ಹಂಚಿಕೊಂಡಿದ್ದಾರೆ.
ಪುನೀತ್
ಅವರು
ನಮ್ಮನ್ನೆಲ್ಲ
ಅಗಲಿ
ಒಂದು
ತಿಂಗಳ
ಸ್ಮರಣಾರ್ಥವಾಗಿ
ಈ
ಕಾರ್ಯಕ್ರಮವನ್ನು
ಹಮ್ಮಿಕೊಳ್ಳಲಾಗಿತ್ತು.
ಆಸ್ಟ್ರೇಲಿಯಾದ
ಅಡಿಲೇಡ್‌ನಲ್ಲಿ
ಈ
ಕಾರ್ಯಕ್ರಮ
ನೆರವೇರಿದ್ದು,
ಅಲ್ಲಿನ
ಕನ್ನಡ
ಸಂಘ
ಬಹಳ
ಅರ್ಥಪೂರ್ಣವಾಗಿ
ಈ
ಕಾರ್ಯಕ್ರಮವನ್ನು
ಆಯೋಜಿಸಿತ್ತು.
ಅಲ್ಲಿ
ನೆಲೆಸಿರುವ
ಎಲ್ಲಾ
ಕನ್ನಡಿಗರು
ಈ
ಕಾರ್ಯಕ್ರಮದಲ್ಲಿ
ಭಾಗಿಯಾಗಿ
ಪುನೀತ್
ಅವರನ್ನು
ಸ್ಮರಣೆ
ಮಾಡಿಕೊಂಡಿದ್ದಾರೆ.
ಹಾಗೇ
ಅವರ
ಆತ್ಮಕ್ಕೆ
ಶಾಂತಿ
ಸಿಗಲಿ
ಎಂದು
ದೇವರಲ್ಲಿ
ಪ್ರಾರ್ಥಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ ಸಿನಿಮಾಗಳ ಹಾಡುಗಳನ್ನು ಹಾಡಲಾಗಿದೆ. ರಾಜಕುಮಾರ ಹಾಡನ್ನು ಹೆಚ್ಚಿನವರು ಹಾಡಿದ್ದಾರೆ. ಅಷ್ಟೇ ಅಲ್ಲದೇ ಪುನೀತ್ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಈ ಹಿಂದೆ ಪುನೀತ್ ರಾಜ್‌ಕುಮಾರ್ ರಾಜಕುಮಾರ ಚಿತ್ರದ ಶೂಟಿಂಗ್‌ಗಾಗಿ ಮೆಲ್ಬರ್ನ್‌ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ಕನ್ನಡಿಗರು ಔತಣ ಕೂಟ ಏರ್ಪಡಿಸಿದ್ದರು. ಇದರಲ್ಲಿ ಪುನೀತ್ ಅವರು ಕೂಡ ಭಾಗಿ ಆಗಿದ್ದರು, ಸುಂದರ ಕ್ಷಣಗಳನ್ನು ಕಳೆದಿದ್ದರು ಎಂದು ಕಾರ್ಯಕ್ರಮದಲ್ಲಿ ಹಲವರು ಮೆಲುಕುಹಾಕಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಪುನೀತ್ ಅವರ ಪ್ರಾಮಾಣಿಕತೆ, ಸರಳತೆ, ಮತ್ತು ನಿಸ್ವಾರ್ಥ ಸೇವೆಗಳ ಬಗ್ಗೆಯೂ ಅಭಿಮಾನಿಗಳು ಮಾತನಾಡಿದ್ದಾರೆ.

ಪುನೀತ್ ಗೀತ ನಮನ ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್‌ಗೆ ಸಂಬಂಧಿಸಿದ ಒಂದಷ್ಟು ವಿಷಯಗಳನ್ನು ಕಲೆಹಾಕಿ ಅದನ್ನು ವಿಡಿಯೋ ಮೂಲಕ ನೆರೆದಿದ್ದವರಿಗೆ ಪ್ರದರ್ಶನ ಮಾಡಲಾಗಿದೆ. ಅವರ ಸಿನಿಮಾಗಳು, ಹಾಡುಗಳು, ರಾಜ್ ಕುಟುಂಬ, ಪುನೀತ್ ಬಾಲ್ಯದ ನೆನಪುಗಳು, ಅವರು ದತ್ತು ತೆಗೆದುಕೊಂಡಿರೊ ಬಾಲಾಶ್ರಮ, ಹೀಗೆ ಸಾಕಷ್ಟು ವಿಷಯಗಳನ್ನು ಒಗ್ಗೂಡಿಸಿ ವೀಡಿಯೊ ಮೂಲಕ ತೋರಿಸಲಾಗಿದೆ. 10 ನಿಮಿಷದ ಈ ವೀಡಿಯೊ ನೆರೆದಿದ್ದವರಿಗೆ ಕಣ್ಣೀರು ತರಿಸಿದೆ.
ಈ ಹಿಂದೆ ಕೂಡ ಆಸ್ಟ್ರೇಲಿಯಾದ ಕನ್ನಡ ಸಂಘದ ಸದಸ್ಯರು ಪುನೀತ್ ನಿಧನರಾದ ಸಂದರ್ಭದಲ್ಲಿ ದೀಪ ಬೆಳಗಿ ಅವರ ಆತ್ಮಕ್ಕೆ ಶಾಂತಿ ಕೋರಿದ್ದರು. ಇದೀಗ ಒಂದು ದೊಡ್ಡ ಕಾರ್ಯಕ್ರಮವನ್ನೆ ಮಾಡಿ ಪುನೀತ್‌ಗೆ ಗೀತ ನಮನ ಸಲ್ಲಿಸಿದ್ದಾರೆ. ಪುನೀತ್ ಅವರನ್ನು ಸ್ಮರಣೆ ಮಾಡಿಕೊಂಡು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಮುಂದಿನ ತಿಂಗಳು ಕೂಡ ಒಂದು ದೊಡ್ಡ ಕಾರ್ಯಕ್ರಮವನ್ನು ಮಾಡಲು ಆಸ್ಟ್ರೇಲಿಯಾದ ಕನ್ನಡ ಸಂಘ ತೀರ್ಮಾನಿಸಿದ್ದು, ಇದಕ್ಕಾಗಿ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದೆ. ಈ ಕಾರ್ಯಕ್ರಮಕ್ಕೆ ಪುನೀತ್ ಕುಟುಂಬದವರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.