ರಕ್ಷಿತ್ ಅಭಿಮಾನಿಗಳಿಗೆ ನಿರಾಸೆ: ಕ್ಷಮೆ ಕೇಳಿದ ಶ್ರೀಮನ್ನಾರಾಯಣ
Recommended Video
ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾ ಸೌತ್ ಇಂಡಿಯಾದಲ್ಲಿ ಸದ್ದು ಮಾಡ್ತಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿದ್ದ ನಾರಾಯಣ ಈಗ ಬಾಲಿವುಡ್ಗೆ ಎಂಟ್ರಿಯಾಗಬೇಕಿತ್ತು.
ಆದರೆ ಹಿಂದಿಯಲ್ಲಿ ಶ್ರೀಮನ್ನಾರಾಯಣನ ದರ್ಶನ ಆಗುತ್ತಿಲ್ಲ. ಇದರಿಂದ ಹಿಂದಿ ಪ್ರೇಕ್ಷಕರು ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ಸದ್ಯಕ್ಕೆ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಅಷ್ಟಕ್ಕೂ, ದಕ್ಷಿಣ ಭಾರತದಲ್ಲಿ ಸಂಚರಿಸಿದ ಶ್ರೀಮನ್ನಾರಾಯಣ ಉತ್ತರದ ಪ್ರವೇಶಕ್ಕೆ ಅಡ್ಡಿಯಾಗಿದ್ದೇನು? ಹಿಂದಿ ಬಿಡುಗಡೆಗೆ ಎದುರಾದ ವಿಘ್ನ ಏನು? ಮುಂದೆ ಓದಿ...

ಈ ವಾರ ತೆರೆಗೆ ಬರಬೇಕಿತ್ತು!
ಎಲ್ಲ ಅಂದುಕೊಂಡಂತೆ ಆಗಿದ್ದರೇ ಜನವರಿ 17 ರಂದು (ಈ ವಾರ) ಅವನೇ ಶ್ರೀಮನ್ನಾರಾಯಣ ಸಿನಿಮಾ ಹಿಂದಿಯಲ್ಲಿ ಬಿಡುಗಡೆಯಾಗಬೇಕಿತ್ತು. ಆದ್ರೀಗ, ಸಿನಿಮಾ ಹಿಂದಿಯಲ್ಲಿ ರಿಲೀಸ್ ಆಗುತ್ತಿಲ್ಲ. ಇದು ರಕ್ಷಿತ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ಹಿಂದಿ ರಿಲೀಸ್ ಯಾಕಿಲ್ಲ, ಕಾರಣವೇನು?
ಹಿಂದಿಯಲ್ಲಿ ಅವನೇ ಶ್ರೀಮನ್ನಾರಾಯಣ ಸಿನಿಮಾ ಬಿಡುಗಡೆಯಾಗದೆ ಇರುವುದರ ಬಗ್ಗೆ ಚಿತ್ರದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮಾಹಿತಿ ನೀಡಿದ್ದಾರೆ. 'ತಾಂತ್ರಿಕ ಕಾರಣದಿಂದ ಹಿಂದಿಯಲ್ಲಿ ಶ್ರೀಮನ್ನಾರಾಯಣ ಸದ್ಯಕ್ಕೆ ಬಿಡುಗಡೆಯಾಗುತ್ತಿಲ್ಲ. ಮುಂದಿನ ದಿನಾಂಕವನ್ನು ಮತ್ತೆ ಘೋಷಿಸುತ್ತೇವೆ' ಎಂದು ಟ್ವೀಟ್ ಮಾಡಿದ್ದಾರೆ.

ಡಬ್ಬಿಂಗ್ ಪ್ರಗತಿಯಲ್ಲಿದೆ
ತಾಂತ್ರಿಕ ಕಾರಣ ಏನಿರಬಹುದು ಎಂಬ ಕುತೂಹಲಕ್ಕೆ ನಟ ರಕ್ಷಿತ್ ಶೆಟ್ಟಿ ಉತ್ತರಿಸಿದ್ದಾರೆ. ಪ್ರಸ್ತುತ ಹಿಂದಿ ವರ್ಷನ್ ಗೆ ರಕ್ಷಿತ್ ಶೆಟ್ಟಿ ಡಬ್ ಮಾಡ್ತಿದ್ದಾರೆ. 'ಡಬ್ಬಿಂಗ್ ಬಹುತೇಕ ಮುಗಿದಿದೆಯಂತೆ. ತಡವಾಗಿದ್ದಕ್ಕೆ ಕ್ಷಮೆ ಕೇಳಿರುವ ರಕ್ಷಿತ್ ಶೆಟ್ಟಿ, ಸದ್ಯದಲ್ಲೇ ಬಿಡುಗಡೆ ದಿನಾಂಕ ಪ್ರಕಟ ಮಾಡುತ್ತೇವೆ' ಎಂದು ಟ್ವೀಟ್ ಮಾಡಿದ್ದಾರೆ.

ಕುರುಕ್ಷೇತ್ರ ಹಿಂದಿಗೆ ಹೋಗಲೇ ಇಲ್ಲ
ಈ ಹಿಂದೆ ತೆರೆಕಂಡಿದ್ದ ಪೌರಾಣಿಕ ಚಿತ್ರ ಕುರುಕ್ಷೇತ್ರ ಬಹುಭಾಷೆಯಲ್ಲಿ ಬಿಡುಗಡೆಯಾಗಿತ್ತು. ಪ್ಯಾನ್ ಇಂಡಿಯಾ ರಿಲೀಸ್ ಎಂಬ ಕಾರಣಕ್ಕೆ ಕುತೂಹಲ ಮೂಡಿಸಿತ್ತು. ನಿರೀಕ್ಷೆಯಂತೆ ದಕ್ಷಿಣದ ಭಾಷೆಗಳಲ್ಲಿ ಬಿಡುಗಡೆಯಾದ ಕುರುಕ್ಷೇತ್ರ, ಹಿಂದಿಯಲ್ಲಿ ಇದುವರೆಗೂ ರಿಲೀಸ್ ಆಗಲೇ ಇಲ್ಲ. ಏಕೆ ಎಂಬ ಪ್ರಶ್ನೆಗೆ ಈಗಲೂ ಉತ್ತರ ಇಲ್ಲ.


Click it and Unblock the Notifications











