For Quick Alerts
  ALLOW NOTIFICATIONS  
  For Daily Alerts

  'ಅವನೇ ಶ್ರೀಮನ್ನಾರಾಯಣ' ಯಾವ ಯಾವ ಭಾಷೆಯಲ್ಲಿ ಎಂದೆಂದು ಬಿಡುಗಡೆ?

  |
  4 ದಿನಾಂಕಗಳಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರ ಬಿಡುಗಡೆ | ASN | RAKSHITH SHETTY | SACHIN | FILMIBEAT KANNADA

  'ಅವನೇ ಶ್ರೀಮನ್ನಾರಾಯಣ' ಸಿನಿಮಾದ ಭರ್ಜರಿ ಪ್ರಚಾರ ನಡೆಯುತ್ತಿದೆ. ಸಿನಿಮಾ ಕನ್ನಡದಲ್ಲಿ ಇದೇ ತಿಂಗಳ 27 ರಂದು ಬಿಡುಗಡೆ ಆಗುತ್ತಿದೆ. ಆ ಬಳಿಕ ಬೇರೆ ಬೇರೆ ಭಾಷೆಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ.

  ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಆಗಿದೆ. ಕನ್ನಡದ ನಂತರ ಈ ಭಾಷೆಗಳಲ್ಲಿ ಸಿನಿಮಾ ತೆರೆಗೆ ತರಲಾಗುತ್ತಿದೆ. ತೆಲುಗಿನಲ್ಲಿ ಹೊಸ ವರ್ಷದ ವಿಶೇಷವಾಗಿ ಜನವರಿ 1 ರಂದು ಸಿನಿಮಾ ಬಿಡುಗಡೆ ಆಗುತ್ತಿದೆ. ದಿಲ್ ರಾಜು ಚಿತ್ರದ ವಿತರಣೆ ಮಾಡುತ್ತಿದ್ದಾರೆ.

  'ಅವನೇ ಶ್ರೀಮನ್ನಾರಾಯಣ' ಬಜೆಟ್ ಎಷ್ಟು?, ಏನಂದ್ರು ನಿರ್ಮಾಪಕರು?'ಅವನೇ ಶ್ರೀಮನ್ನಾರಾಯಣ' ಬಜೆಟ್ ಎಷ್ಟು?, ಏನಂದ್ರು ನಿರ್ಮಾಪಕರು?

  ತಮಿಳು ಅವತರಣಿಕೆ ಹಾಗೂ ಮಲೆಯಾಳಂ ಭಾಷೆಯಲ್ಲಿ ಜನವರಿ 3 ರಂದು ಸಿನಿಮಾ ಬರುತ್ತಿದೆ. ತಮಿಳಿನಲ್ಲಿ 'ಬಿಗಿಲ್' ಚಿತ್ರವನ್ನು ವಿತರಣೆ ಮಾಡಿದ್ದ ಸೀನ್ ಸ್ಕ್ರೀನ್ ಸಂಸ್ಥೆಯೇ ಈ ಜವಾಬ್ದಾರಿ ತೆಗೆದುಕೊಂಡಿದೆ.

  ಹಿಂದಿಯಲ್ಲಿ ಚಿತ್ರಕ್ಕೆ 'ಅಡ್ವೆಂಚರ್ಸ್ ಆಫ್ ಶ್ರೀಮನ್ನಾರಾಯಣ' ಎಂದು ಹೆಸರಿಡಲಾಗಿದೆ. ಹಿಂದಿಯಲ್ಲಿ ಜನವರಿ 17 ರಂದು ಚಿತ್ರ ಬರುತ್ತಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.

  'ಶ್ರೀಮನ್ನಾರಾಯಣ' ಟ್ರೈಲರ್ ನಲ್ಲಿ ಹಾಲಿವುಡ್ ಚಿತ್ರದ 'ನೆರಳು': ಇದು ಕಾಪಿನಾ? ಸ್ಫೂರ್ತಿನಾ?'ಶ್ರೀಮನ್ನಾರಾಯಣ' ಟ್ರೈಲರ್ ನಲ್ಲಿ ಹಾಲಿವುಡ್ ಚಿತ್ರದ 'ನೆರಳು': ಇದು ಕಾಪಿನಾ? ಸ್ಫೂರ್ತಿನಾ?

  'ಅವನೇ ಶ್ರೀಮನ್ನಾರಾಯಣ' ರಕ್ಷಿತ್ ಶೆಟ್ಟಿ ಹಾಗೂ ಶಾನ್ವಿ ಶ್ರೀವತ್ಸವ್ ನಟನೆಯ ಸಿನಿಮಾ. ಸಚಿನ್ ಚಿತ್ರದ ನಿರ್ದೇಶನ ಮಾಡಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಿನಿಮಾಗೆ ಇದೆ.

  English summary
  Avane Srimannarayana Movie Will Be release dates announced.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X