»   » 'ರಂಗಿತರಂಗ' ಖ್ಯಾತಿಯ ಅವಂತಿಕಾ ಶೆಟ್ಟಿ ಕರಾಟೆ ಕಲಿತಿದ್ದಾರೆ: ಏಕೆ?

'ರಂಗಿತರಂಗ' ಖ್ಯಾತಿಯ ಅವಂತಿಕಾ ಶೆಟ್ಟಿ ಕರಾಟೆ ಕಲಿತಿದ್ದಾರೆ: ಏಕೆ?

Posted By:
Subscribe to Filmibeat Kannada

'ರಂಗಿತರಂಗ' ಚಿತ್ರದ ಮೂಲಕ ಕನ್ನಡ ಸಿನಿಮಾ ಅಂಗಳಕ್ಕೆ ಪಾದಾರ್ಪಣೆ ಮಾಡಿದ ಅವಂತಿಕಾ ಶೆಟ್ಟಿ ಈಗ ಮೊತ್ತೊಮ್ಮೆ ಅನೂಪ್ ಭಂಡಾರಿಗೆ ಹಿರೋಯಿನ್‌ ಆಗಿ ನಟಿಸುತ್ತಿದ್ದಾರೆ. ಅವಂತಿಕಾ ಶೆಟ್ಟಿ ಮೂಲತಃ ಮಂಗಳೂರಿನವರೇ ಆದರೂ ನೆಲೆಸಿರುವುದು ಮಾತ್ರ ಮುಂಬಯಿ ನಲ್ಲಿ. ಈ ಕನ್ನಡದ ನಟಿ ಮುಂಬೈಯಿಯಲ್ಲಿ ಏನ್ಮಾಡ್ತಿದ್ದಾರೆ ಅನ್ನೋ ಪ್ರಶ್ನೆ ಈಗ ಹಲವು ಸಿನಿ ಪ್ರಿಯರನ್ನು ಕಾಡುತ್ತಿದೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ರಂಗಿತರಂಗ ಚಿತ್ರದಲ್ಲಿ ಅನೂಪ್ ಭಂಡಾರಿ ಗೆ ನಾಯಕಿ ಆಗಿ ಅಭಿನಯಿಸಿದ್ದ ಅವಂತಿಕಾ ಶೆಟ್ಟಿ ಈಗ ಮತ್ತೊಮ್ಮೆ ಭಂಡಾರಿ ಸಹೋದರರ 'ರಾಜ ರಥ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲೂ ಸಹ ಅನೂಪ್‌ ಗೆ ನಾಯಕಿಯಾಗಿಯೇ ಅವಂತಿಕಾ ಶೆಟ್ಟಿ ನಟಿಸುತ್ತಿದ್ದಾರೆ. ರಾಜ ರಥ ಚಿತ್ರ ಶೂಟಿಂಗ್ ನಡುವೆಯೂ ಅವಂತಿಕಾ ಮುಂಬಯಿ ಅಲ್ಲಿ ನೆಲೆಸಿರುವುದು ಏಕೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.[ಅನುಪ್ ಭಂಡಾರಿ 'ರಾಜರಥ' ಏರಿದ ರಾಣಿ ಅವಂತಿಕಾ ಶೆಟ್ಟಿ]

ಅವಂತಿಕಾಗೆ ಕರಾಟೆ ಆಸೆ

ಅವಂತಿಕಾ ಶೆಟ್ಟಿ 2 ವರ್ಷಗಳಿಂದಲೂ ಸಹ ಮುಂಬಯಿ ಅಲ್ಲಿ ಕರಾಟೆ ಕಲಿಯುತ್ತಿದ್ದಾರಂತೆ.[ಭಂಡಾರಿ ಸಹೋದರರ 'ರಾಜರಥ' ಸ್ಪೆಷಲ್ ಟೀಸರ್ ನೋಡಿ]

ಕರಾಟೆ ಬಗ್ಗೆ ಅವಂತಿಕಾ ಹೇಳಿದ್ದೇನು?

"ನನಗೆ ಕರಾಟೆ ಕಲಿಯಬೇಕೆಂಬ ಆಸೆ ಚಿಕ್ಕಂದಿನಿಂದ ಇತ್ತು. ಶೂಟಿಂಗ್ ನಲ್ಲಿ ಒಂದು ಬಾರಿ ನಾನು ಬಿದ್ದಿದ್ದೆ. ಕರಾಟೆ ಕಲಿಯುವುದರಿಂದ ಚಿತ್ರ ಶೂಟಿಂಗ್ ನಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬಹುದು. ಕರಾಟೆ ಒಂದು ಕಲೆ ಆಗಿರುವುದರಿಂದ ಕಲಿತವರಿಗೆ ಶೂಟಿಂಗ್ ವೇಳೆ ಯಾವುದೇ ಪೆಟ್ಟಾಗದಂತೆ ನಿರ್ವಹಿಸುವ ಟೆಕ್ನಿಕ್ ಗೊತ್ತಿರುತ್ತದೆ", ಎಂದಿದ್ದಾರೆ. ಅವಂತಿಕಾ ಕರಾಟೆ ಬಗ್ಗೆ ಹೆಚ್ಚು ಆಸಕ್ತಿ ತೋರಿಸಲು ಕಾರಣ ತಿಳಿಯಲು ಮುಂದೆ ಓದಿ..

ಕರಾಟೆ ಬಗ್ಗೆ ಅವಂತಿಕಾ ಆಸಕ್ತಿ ತೋರಿಸಲು ಕಾರಣ ಇದೇ..

ಅವಂತಿಕಾ ಶೆಟ್ಟಿ ರವರು ಕೇವಲ ಕನ್ನಡ ಹಿರಿತೆರೆಯಲ್ಲಿ ಮಾತ್ರ ನಟಿಸುತ್ತಿದ್ದಾರೆ ಅಂತ ಹಲವರು ತಿಳಿದಿದ್ದಾರೆ. ಆದ್ರೆ ಅವಂತಿಕಾ ರವರು 2008 ರಿಂದಲೂ ಹಿಂದಿಯ ಕಿರುತೆರೆ ಯಲ್ಲಿ ನಟಿಸುತ್ತಿದ್ದಾರೆ. ಮಾರ್ಷಲ್‌ ಆರ್ಟ್ಸ್‌ ತರಬೇತಿ ಪಡೆದು ಆಕ್ಷನ್ ಚಿತ್ರಗಳಲ್ಲಿ ನಟಿಸುವ ಆಸಕ್ತಿ ಅವರಿಗಿದೆಯಂತೆ.

ರಾಜ ರಥದಲ್ಲಿ ಡಿಫರೆಂಟ್ ಕ್ಯಾರೆಕ್ಟರ್‌ನಲ್ಲಿ ಅವಂತಿಕಾ ಅಭಿನಯ

ಅಂದಹಾಗೆ ಅವಂತಿಕಾ ಶೆಟ್ಟಿ ರವರು ಸದ್ಯದಲ್ಲಿ ನಿರೂಪ್‌ ಭಂಡಾರಿ ನಿರ್ದೇಶನದ 'ರಾಜ ರಥ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅನೂಪ್‌ ಗೆ ನಾಯಕಿ ಆಗಿರುವ ಅವಂತಿಕಾ, ಡಿಫರೆಂಟ್ ಕ್ಯಾರೆಕ್ಟರ್ ನಲ್ಲಿ ನಟಿಸುತ್ತಿದ್ದಾರಂತೆ. ಆದ್ರೆ ಈ ಚಿತ್ರದಲ್ಲಿ ಥ್ರಿಲ್ಲಿಂಗ್, ಸಸ್ಪೆನ್ಸ್ ಇರದೇ ಹೆಚ್ಚು ಕಾಮಿಡಿ ಆಗಿದೆಯಂತೆ.

ಹೊಸ ಚಿತ್ರ ತೆಲುಗು ಮತ್ತು ಕನ್ನಡದಲ್ಲಿ

ಅವಂತಿಕಾ ತಾವು ನಟಿಸುತ್ತಿರುವ ಹೊಸ ಚಿತ್ರ ತೆಲುಗು ಮತ್ತು ಕನ್ನಡ ಎರಡರಲ್ಲೂ ನಿರ್ಮಾಣವಾಗುತ್ತಿದೆ. ಇದರ ಚಿತ್ರೀಕರಣದ ವೇಳೆ ತೆಲುಗು ಪದಗಳನ್ನು ಹೇಳಲು ಕಷ್ಟವಾಗುತ್ತಿದೆ. ಕನ್ನಡ ಮಾತನಾಡಲು ಖುಷಿ ಆಗುತ್ತದೆ ಎಂಬುದನ್ನು ಹೇಳಿದ್ದಾರೆ.

English summary
RangiTaranga famous Supporting Actress Avantika Shetty getting karate traing at Mumbai. she is an Indian film and television actress and advertiser working primarily in Kannada cinema. RangiTaranga found a worldwide release and declared a blockbuster, earning her a nomination at the Filmfare Awards for Best Supporting Actress.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada