Don't Miss!
- Sports
Ind Vs Aus Test: ಟೆಸ್ಟ್ ಸರಣಿಗೆ ಈ ರೀತಿ ಪಿಚ್ ಬೇಕು ಎಂದು ಕ್ಯುರೇಟರ್ಗಳಿಗೆ ಮನವಿ ಮಾಡಿದ ದ್ರಾವಿಡ್ ಮತ್ತು ರೋಹಿತ್ ಶರ್ಮಾ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬೆಂಗಳೂರಿನಲ್ಲಿ ಅವತಾರ್ ಅಬ್ಬರ: ಜೇಮ್ಸ್, ವಿಕ್ರಾಂತ್ ರೋಣ ದಾಖಲೆ ಉಡೀಸ್, ಕೆಜಿಎಫ್ ಜಸ್ಟ್ ಮಿಸ್!
2022 ಸಿನಿಮಾ ಕ್ಷೇತ್ರದ ಪಾಲಿಗೆ ಲಕ್ಕಿ ಇಯರ್ ಎಂದೇ ಹೇಳಬಹುದು. ಏಕೆಂದರೆ ಈ ವರ್ಷ ಭಾರತದ ವಿವಿಧ ಚಿತ್ರರಂಗಗಳ ಹಲವು ಚಿತ್ರಗಳು ಸಕ್ಸಸ್ ಕಂಡು ಲಾಭ ಗಳಿಸಿದ್ದು, ನಿರ್ಮಾಪಕರು ಹಾಗೂ ವಿತರಕರು ಹಲವು ವರ್ಷಗಳ ಬಳಿಕ ಜೇಬು ತುಂಬಿಸಿಕೊಂಡಿದ್ದಾರೆ. ಅದರಲ್ಲಿಯೂ ಈ ವರ್ಷ ದಕ್ಷಿಣ ಭಾರತ ಚಿತ್ರರಂಗದ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು, ಹಲವು ಸ್ಟಾರ್ ನಟರ ಚಿತ್ರಗಳು ಬಿಡುಗಡೆಗೊಂಡ ಕಾರಣ ಬಾಕ್ಸ್ ಆಫೀಸ್‌ನಲ್ಲಿ ಹಣದ ಹೊಳೆ ಹರಿದಿದೆ.
ಇನ್ನು ಈ ವರ್ಷ ದೇಶದಲ್ಲಿ ಒಟ್ಟು ಮೂವತ್ತು ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿದ್ದು, ಹಲವಾರು ದಾಖಲೆಗಳನ್ನು ಬರೆದಿವೆ. ಮೊದಲಿನ ಹಾಗೆ ಈಗ ಐವತ್ತು ದಿನ, ನೂರು ದಿನಗಳ ಕಾಲ ಪ್ರದರ್ಶನ ಕಾಣುವ ಕಾನ್ಸೆಪ್ಟ್ ಇಲ್ಲದಿರುವ ಕಾರಣ ಚಿತ್ರಗಳ ಯಶಸ್ಸನ್ನು ಕಲೆಕ್ಷನ್ ಆಧಾರದ ಮೇಲೆ ಅಳೆಯಲಾಗುತ್ತಿದೆ. ಹೀಗಾಗಿ ಚಿತ್ರಗಳನ್ನು ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಿ ಎಷ್ಟು ಸಾಧ್ಯವೋ ಅಷ್ಟು ಗಳಿಸಿಕೊಂಡುಬಿಡಬೇಕು ಎಂಬ ಲೆಕ್ಕಾಚಾರ ನಿರ್ಮಾಪಕರದ್ದು.
ಹೀಗೆ ಈ ವರ್ಷ ಬಿಡುಗಡೆಗೊಂಡ ಹಲವಾರು ಸ್ಟಾರ್ ನಟರ ಚಿತ್ರಗಳು ದಾಖಲೆಯ ಸಂಖ್ಯೆಯ ಚಿತ್ರಮಂದಿರ ಹಾಗೂ ಪ್ರದರ್ಶನಗಳನ್ನು ಪಡೆದುಕೊಂಡಿವೆ. ಅದರಲ್ಲಿಯೂ ಎಲ್ಲಾ ಭಾಷೆಯ ಚಿತ್ರಗಳನ್ನೂ ನೋಡುವ ವೀಕ್ಷಕರಿರುವ ಬೆಂಗಳೂರು ನಗರದಲ್ಲಿ ಈ ವರ್ಷ ಹಲವು ಚಿತ್ರಗಳು ಹೆಚ್ಚೆಚ್ಚು ಚಿತ್ರಮಂದಿರ ಹಾಗೂ ಪ್ರದರ್ಶನಗಳನ್ನು ದಾಖಲೆ ಬರೆದಿವೆ. ಇನ್ನು ಇದೀಗ ಬಿಡುಗಡೆಗೊಂಡಿರುವ ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಬಹು ನಿರೀಕ್ಷಿತ ಅವತಾರ್ ದ ವೇ ಆಫ್ ವಾಟರ್ ಚಿತ್ರ ಕೂಡ ಬೆಂಗಳೂರಿನಲ್ಲಿ ದಾಖಲೆಯ ಸಂಖ್ಯೆಯ ಪ್ರದರ್ಶನಗಳನ್ನು ಪಡೆದುಕೊಳ್ಳುವುದರ ಮೂಲಕ ಬಿಡುಗಡೆಯಾಗಿದೆ.

ಬೆಂಗಳೂರಿನಲ್ಲಿ ಹೆಚ್ಚು ಶೋ ಪಡೆದ ಚಿತ್ರಗಳು
2022ರಲ್ಲಿ ಬೆಂಗಳೂರು ನಗರದಲ್ಲಿ ಬಿಡುಗಡೆಗೊಂಡ ದಿನ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡ ಟಾಪ್ 10 ಪಟ್ಟಿ ಈ ಕೆಳಕಂಡಂತಿದೆ..
1. ಕೆಜಿಎಫ್ ಚಾಪ್ಟರ್ 2 - 1037 ಪ್ರದರ್ಶನಗಳು
2. ಅವತಾರ್ ದ ವೇ ಆಫ್ ವಾಟರ್ - 1014 ಪ್ರದರ್ಶನಗಳು
3. ವಿಕ್ರಾಂತ್ ರೋಣ - 987
4. ಬೀಸ್ಟ್ - 963
5. ಆರ ಆರ್ ಆರ್ - 934 ಪ್ರದರ್ಶನಗಳು
6. ಜೇಮ್ಸ್ - 919
7. ವಾಲಿಮೈ - 719
8. ಲೈಗರ್ - 703
9. ಮಲ್ಟಿವರ್ಸ ಆಫ್ ಮ್ಯಾಡ್‌ನೆಸ್ - 592
10. ಸರ್ಕಾರು ವಾರಿ ಪಾಟ * 592

ಜೇಮ್ಸ್, ವಿಕ್ರಾಂತ್ ರೋಣ ಹಿಂದಿಕ್ಕಿದ ಅವತಾರ್
ಇನ್ನು ಅವತಾರ್ ದ ವೇ ಆಫ್ ವಾಟರ್ ಚಿತ್ರ ಬಿಡುಗಡೆ ದಿನ ಬೆಂಗಳೂರಿನಲ್ಲಿ 1014 ಪ್ರದರ್ಶನಗಳನ್ನು ಪಡೆದುಕೊಂಡಿದೆ. ಈ ಮೂಲಕ ಈ ವರ್ಷ ತೆರೆಕಂಡ ಚಿತ್ರಗಳ ಪೈಕಿ ಅತಿಹೆಚ್ಚು ಪ್ರದರ್ಶನಗಳನ್ನು ಬೆಂಗಳೂರಿನಲ್ಲಿ ಪಡೆದುಕೊಂಡ ಎರಡನೇ ಚಿತ್ರ ಎನಿಸಿಕೊಂಡಿದೆ. ಹಾಗೂ ಬೆಂಗಳೂರಿನಲ್ಲಿ ಕನ್ನಡದ ಚಿತ್ರಗಳಾದ ಜೇಮ್ಸ್ ಹಾಗೂ ವಿಕ್ರಾಂತ್ ರೋಣಗಿಂತ ಹೆಚ್ಚಿನ ಪ್ರದರ್ಶನಗಳನ್ನು ಪಡೆದುಕೊಂಡಿದೆ.

ಕೆಜಿಎಫ್ ದಾಖಲೆ ಜಸ್ಟ್ ಮಿಸ್
ಹೀಗೆ ಕನ್ನಡದ ಹಲವಾರು ಚಿತ್ರಗಳನ್ನು ಈ ಪಟ್ಟಿಯಲ್ಲಿ ಹಿಂದಿಕ್ಕಿರುವ ಅವತಾರ್ ದ ವೇ ಆಫ್ ವಾಟರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ಕೆಜಿಎಪ್ ಚಾಪ್ಟರ್ 2 ಚಿತ್ರವನ್ನು ಹಿಂದಿಕ್ಕುವಲ್ಲಿ ವಿಫಲವಾಗಿದೆ. ಕೆಜಿಎಫ್ ಚಾಪ್ಟರ್ 2 ಸಮೀಪಕ್ಕೆ ಬಂದರೂ ಸಹ ಕೊಂಚ ಪ್ರದರ್ಶನಗಳು ಕಡಿಮೆ ಇದ್ದ ಕಾರಣ ಈ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನಕ್ಕೇರುವುದನ್ನು ಜಸ್ಟ್ ಮಿಸ್ ಮಾಡಿಕೊಂಡಿದೆ.