For Quick Alerts
  ALLOW NOTIFICATIONS  
  For Daily Alerts

  ಡಿಫರೆಂಟ್ ಪೋಸ್ಟರ್ ಮೂಲಕ 'ಅವತಾರ ಪುರುಷ' ರಿಲೀಸ್ ಡೇಟ್ ಘೋಷಣೆ

  |

  ಕನ್ನಡ ಚಿತ್ರರಂಗದಲ್ಲಿ ಅಧ್ಯಕ್ಷನಾಗಿ ಬೆಳ್ಳಿತೆರೆಮೇಲೆ ರಾರಾಜಿಸಿದ ನಟ ಶರಣ್, ಕಾಮಿಡಿ ಪಾತ್ರಗಳನ್ನು ಮಾಡ್ತಾ ಈಗ ಹೀರೋ ಆಗಿ ಮಿಂಚುತ್ತಿದ್ದಾರೆ. ನಟ ಶರಣ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಅವತಾರ ಪುರುಷ. ಶರಣ್ ರಾಜ್ ಅವರ ವೃತ್ತಿ ಜೀವನದಲ್ಲಿಯೇ ಇದು ಅತಿ ಹೆಚ್ಚು ಬಜೆಟ್​ನ ಸಿನಿಮಾ ಆಗಿದೆ. ಸಿನಿಮಾವನ್ನು ಭರ್ಜರಿಯಾಗಿ ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಚಿತ್ರದ ಪೋಸ್ಟರ್ , ಟೀಸರ್, ಹಾಡುಗಳ ಮೂಲಕ ಗಮನ ಸೆಳೆದಿದೆ. ಶರಣ್ ಸಿನಿಮಾಗಳು ಅಂದರೇ ಅಲ್ಲಿ ಕಾಮಿಡಿ ಟಚ್ ಇದ್ದೇ ಇರುತ್ತೆ. ಅಂತೆಯೇ ಈ ಸಿನಿಮಾದಲ್ಲೂ ಕಾಮಿಡಿಗೇನು ಕಮ್ಮಿ ಇಲ್ಲ. ನಕ್ಕು ನಗಿಸಲು ಅವತಾರ ಪುರುಷ ಸಜ್ಜಾಗಿದ್ದಾನೆ. ಇದೀಗ ಈ ಸಿನಿಮಾದ ರಿಲೀಸ್ ಡೇಟ್ ಅನ್ನು ಚಿತ್ರತಂಡ ರಿವೀಲ್ ಮಾಡಿದ್ದು, ವಿಭಿನ್ನ ಪೋಸ್ಟರ್ ಮೂಲಕ ಅವತಾರ್ ಪುರುಷ ಸಿನಿಮಾದ ರಿಲೀಸ್ ಡೇಟ್ ಪ್ರಕಟಗೊಂಡಿದೆ.

  ಸಿಂಪಲ್ ಸುನಿ ನಿರ್ದೇಶನದ ಈ ಸಿನಿಮಾ ಈ ಹಿಂದೆಯೇ ರಿಲೀಸ್ ಆಗಬೇಕಿತ್ತು, ಆದರೆ ಕೊರೋನಾದಿಂದ ಎಲ್ಲಾ ಸಿನಿಮಾಗಳಿಗೂ ಅಡಚಣೆ ಆದಂತೆ ಅವತಾರ ಪುರುಷ ಚಿತ್ರ ಬಿಡುಗಡೆಗೂ ಸಮಸ್ಯೆ ಎದುರಾಗಿತ್ತು. ಚಿತ್ರವನ್ನು ಮೇ.28 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ, ಕೊರೋನಾ ಸೋಂಕು ವ್ಯಾಪಕವಾಗಿದ್ದ ಹಿನ್ನೆಲೆಯಲ್ಲಿ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ಚಿತ್ರ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಈ ಹಿಂದೆ ತಿಲೀಸಿದ್ದರು. ಇದರಿಂದ ಚಿತ್ರದ ರಿಲೀಸ್‌ಗೆ ಒಳ್ಳೆ ಸಮಯಕ್ಕಾಗಿ ಕಾದಿದ್ದ ಚಿತ್ರತಂಡ ಕೊನೆಗೂ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಡಿಸೆಂಬರ್ 10ಕ್ಕೆ ಆಫೀಶಿಯಲ್ ರಿಲೀಸ್ ಡೇಟ್ ನಿಗದಿ ಮಾಡಿದೆ. ಇದರಿಂದ ಶರಣ್ ಅಭಿಮಾನಿಗಳಿಗೂ ಸಂತಸವಾಗಿದ್ದು, ಸಿನಿಮಾ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.

  ಅವತಾರ ಪುರುಷ ಸಿನಿಮಾ ಈಗಾಗಲೇ ಸೆನ್ಸಾರ್ ಕೂಡ ಮುಗಿಸಿಕೊಂಡು ಸಿನಿಮಾ ರಿಲೀಸ್‌ಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿದೆ. ಅದೇ ಖುಷಿಯಲ್ಲಿ ರಿಲೀಸ್ ಡೇಟ್ ಅನೌನ್ಸ್ ಮಾಡಿರೋ ತಂಡ, ಪ್ರಚಾರ ಕಾರ್ಯಕೂಡ ಆರಂಭಿಸಿದೆ. ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರತಂಡ ಈಗ ಸಿನಿಮಾದ ಪ್ರಚಾರ ಆರಂಭಿಸಿದ್ದು, ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಂಡಿದೆ.

  ಸಿನಿಮಾಗಳಲ್ಲಿ ನಟಿಸುವ ಜ್ಯೂನಿಯರ್‌ ಕಲಾವಿದನಾಗಿ ಶರಣ್ 'ಅವತಾರ ಪುರುಷ'ದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಗಳ ಹೊರತಾಗಿ ಒಮ್ಮೆ ನಿಜಜೀವನದಲ್ಲಿಯೂ ನಟಿಸಬೇಕಾದ ಸಂದರ್ಭ ಎದುರಾದರೆ ಏನಾಗುತ್ತದೆ ಎಂಬುದು ಈ ಚಿತ್ರದ ಒನ್‌ಲೈನ್‌ ಕಥೆ. ಅಲ್ಲದೆ, ಬ್ಲ್ಯಾಕ್‌ ಮ್ಯಾಜಿಕ್‌ನ ವಿಚಾರಗಳೂ ಸಿನಿಮಾದ ಕಥೆಯಲ್ಲಿ ಜಾಗ ಪಡೆದಿವೆ.

  ಶರಣ್ ಮತ್ತು ಆಶಿಕಾ ರಂಗನಾಥ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಅವರಾತ ಪುರುಷ ಸಿನಿಮಾದಲ್ಲಿ ಸಾಕಷ್ಟು ಬಗೆಯ ವಿಶೇಷತೆಗಳಿವೆ. ಅವತಾರ ಪುರುಷ 2 ಭಾಗಗಳಲ್ಲಿ ರಿಲೀಸ್ ಆಗಲಿದ್ದು, ಅವತಾರ ಪುರುಷ 1, ಮತ್ತು ಅವತಾರ ಪುರುಷ 2 ಸರಣಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಆದರೆ ಸಿನಿಮಾದ ಟ್ಯಾಗ್‌ಲೈನ್ ಮಾತ್ರ ಬೇರೆ ಬೇರೆ ಇದ್ದು, ಮೊದಲನೇ ಭಾಗಕ್ಕೆ ಅಷ್ಟದಿಗ್ಬಂಧನ ಮಂಡಲಕ ಹಾಗೂ ಎರಡನೇ ಪಾರ್ಟ್‌ಗೆ ತ್ರಿಶಂಕು ಎನ್ನುವ ಟ್ಯಾಗ್ ಲೈನ್ ಬಳಸಲಾಗಿದೆ.

  ಈ ಸಿನಿಮಾದಲ್ಲಿ ಹಿರಿಯ ಕಲಾವಿದರಾದ ಸಾಯಿ ಕುಮಾರ್‌, ಭವ್ಯಾ, ಸುಧಾರಾಣಿ ಮುಂತಾದವರು ನಟಿಸುವ ಮೂಲಕ ಚಿತ್ರದ ತಾರಾ ಮೆರುಗು ಹೆಚ್ಚಿಸಿದ್ದಾರೆ. ಅವರೆಲ್ಲರ ಗೆಟಪ್‌ ಕೂಡ ವಿಭಿನ್ನವಾಗಿದೆ. ಈಗಾಗಲೇ ಆ ಎಲ್ಲಾ ಪಾತ್ರಗಳ ಬಗ್ಗೆ ಪೋಸ್ಟರ್‌ ಮೂಲಕ ನಿರ್ದೇಶಕರು ಕಿರು ಪರಿಚಯ ಮಾಡಿಕೊಟ್ಟಿದ್ದರು. ಅವತಾರ ಪುರುಷ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದಾರೆ. ಹಾಗೇ ಸಿನಿಮಾದ ಯಶಸ್ಸಿಗೆ ಸಾಕಷ್ಟು ಪ್ರಯತ್ನವನ್ನು ಪಡುತ್ತಿದ್ದಾರೆ. ಹಾಗೇ ಅರ್ಜುನ್ ಜನ್ಯ ಬ್ಯೂಟಿಫುಲ್ ಹಾಡುಗಳನ್ನು ಸಿನಿಮಾಗೆ ನೀಡಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ವಿಕ್ರಮ್ ಮೊರ್ ಚಿತ್ರಕ್ಕೆ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿಲಿಯಮ್ ಡೇವಿಡ್ ಛಾಯಾಗ್ರಹಣದಲ್ಲಿ ಅವತಾರ ಪುರುಷ ಮೂಡಿಬಂದಿದೆ.

  English summary
  Actor Sharan starrer Avatara Purusha movie will be releasing on December 10th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X