»   » ಇಂದಿನಿಂದ ಬೆಂಗಳೂರಿನಲ್ಲಿ ಪ್ರಶಸ್ತಿ ಪುರಸ್ಕೃತ ಚಿತ್ರಗಳ ಉತ್ಸವ

ಇಂದಿನಿಂದ ಬೆಂಗಳೂರಿನಲ್ಲಿ ಪ್ರಶಸ್ತಿ ಪುರಸ್ಕೃತ ಚಿತ್ರಗಳ ಉತ್ಸವ

Posted By:
Subscribe to Filmibeat Kannada

ಕರ್ನಾಟಕ ಚಲನಚಿತ್ರ ಅಕಾಡೆಮಿಯು "ರಾಷ್ಟ್ರ-ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಪನೋರಮಾ ಚಿತ್ರೋತ್ಸವ ಆಯ್ಕೆಯಾದ ಕನ್ನಡ ಚಿತ್ರಗಳ ಉತ್ಸವವನ್ನು ಏಪ್ರಿಲ್ 25 ರಿಂದ 29 ರವರೆಗೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಹಮ್ಮಿಕೊಂಡಿದೆ.

ಗೃಹ ಸಚಿವ ಡಾ: ಜಿ.ಪರಮೇಶ್ವರ ಅವರು ಏಪ್ರಿಲ್ 25 ರಂದು ಸಂಜೆ 4.00 ಗಂಟೆಗೆ ಈ ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಹಿರಿಯ ಕಲಾವಿದೆ ಡಾ: ಜಯಮಾಲಾ ಅವರು ಭಾಗಯಾಗಲಿದ್ದಾರೆ. ಪದ್ಮಶ್ರೀ ಪುರಸ್ಕೃತ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಪ್ರಧಾನ ಭಾಷಣ ಮಾಡಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರು ವಹಿಸಲಿದ್ದಾರೆ.[2016ನೇ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ]

ಸಮಾರಂಭದ ವಿಶೇಷ ಆಹ್ವಾನಿತರಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, 2016 ನೇ ಸಾಲಿನ ಅತ್ಯುತ್ತಮ ನಟ ಪ್ರಶಸ್ತಿ ಪುರಸ್ಕೃತ ಶ್ರೀ ಅಚ್ಯುತ್ ಕುಮಾರ್, 2016 ನೇ ಸಾಲಿನ ಅತ್ಯುತ್ತಮ ನಟಿ ಪ್ರಶಸ್ತಿ ಪುರಸ್ಕೃತ ಕುಮಾರಿ ಶೃತಿ ಹರಿಹರನ್ ಅವರು ಭಾಗವಹಿಸುವರು.

ಏಪ್ರಿಲ್ 26, 27, 28, 29 ರಂದು ಯಾವ ಯಾವ ಚಿತ್ರಗಳು, ಎಷ್ಟು ಗಂಟೆಗೆ ಪ್ರಸಾರವಾಗಲಿದೆ ಎಂಬ ಮಾಹಿತಿ ಮುಂದೆ ನೀಡಲಾಗಿದೆ ಓದಿ.....

ಏಪ್ರಿಲ್ 25 ರಂದು ಕಾರ್ಯಕ್ರಮಕ್ಕೆ ಚಾಲನೆ

ಗೃಹ ಸಚಿವ ಡಾ: ಜಿ.ಪರಮೇಶ್ವರ ಅವರು ಏಪ್ರಿಲ್ 25 ರಂದು ಸಂಜೆ 4.00 ಗಂಟೆಗೆ ಈ ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದು, ಉದ್ಘಾಟನಾ ಸಮಾರಂಭದ ನಂತರ "ಅನಲ" ಕಿರುಚಿತ್ರ ಹಾಗೂ "ರೈಲ್ವೇ ಚಿಲ್ಡ್ರನ್" ಚಿತ್ರ ಪ್ರದರ್ಶನಗೊಳ್ಳಲಿವೆ.[ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿ ಪ್ರಕಟ: ಸಂಪೂರ್ಣ ಪಟ್ಟಿ ಇಲ್ಲಿದೆ]

ಏಪ್ರಿಲ್ 26 ರಂದು ಪ್ರದರ್ಶನಗೊಳ್ಳುವ ಚಿತ್ರಗಳು

ಏಪ್ರಿಲ್ 26 ರಂದು ಬೆಳಿಗ್ಗೆ 11-00 ಗಂಟೆಗೆ "ರಿಸರ್ವೇಶನ್" ಮಧ್ಯಾಹ್ನ 2-30 ಗಂಟೆಗೆ "ಮದಿಪು", ಸಂಜೆ 5-00 ಗಂಟೆಗೆ "ಅಮರಾವತಿ" ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.[2016 ರಾಜ್ಯ ಪ್ರಶಸ್ತಿ: 'ಅಮರಾವತಿ' ಅತ್ಯುತ್ತಮ ಚಿತ್ರ, ಅಚ್ಯುತ್ ಕುಮಾರ್ ಅತ್ಯುತ್ತಮ ನಟ]

ಏಪ್ರಿಲ್ 27 ರಂದು ಪ್ರದರ್ಶನಗೊಳ್ಳುವ ಚಿತ್ರಗಳು

ಏಪ್ರಿಲ್ 27 ರಂದು ಬೆಳಿಗ್ಗೆ 11-00 ಗಂಟೆಗೆ "ಜೀರ್ ಜಿಂಬೆ", ಮಧ್ಯಾಹ್ನ 2-30 ಗಂಟೆಗೆ "ರಾಮ ರಾಮಾ ರೇ", ಸಂಜೆ 5-00 ಗಂಟೆಗೆ "ಅಂತರ್ಜಲ" ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.

ಏಪ್ರಿಲ್ 28 ರಂದು ಪ್ರದರ್ಶನಗೊಳ್ಳುವ ಚಿತ್ರಗಳು

ಏಪ್ರಿಲ್ 28 ರಂದು ಬೆಳಿಗ್ಗೆ 11-00 ಗಂಟೆಗೆ "ಅಲ್ಲಮ", ಮಧ್ಯಾಹ್ನ 2-30 ಗಂಟೆಗೆ "ಹರಿಕಥಾ ಪ್ರಸಂಗ", ಸಂಜೆ 5-00 ಗಂಟೆಗೆ "ಮೂಡ್ಲ ಸೀಮೆಯಲಿ" ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.['ಅಲ್ಲಮ' ಚಿತ್ರಕ್ಕೆ ರಾಷ್ಟ್ರ ಮನ್ನಣೆ: ಕನ್ನಡಕ್ಕೆ 4 ರಾಷ್ಟ್ರ ಪ್ರಶಸ್ತಿ]

ಏಪ್ರಿಲ್ 29 ರಂದು ಪ್ರದರ್ಶನಗೊಳ್ಳುವ ಚಿತ್ರಗಳು

ಏಪ್ರಿಲ್ 29 ರಂದು ಮಧ್ಯಾಹ್ನ 2-30 ಗಂಟೆಗೆ "ಯು ಟರ್ನ್", ಸಂಜೆ 5-00 ಗಂಟೆಗೆ "ಕಿರಿಕ್ ಪಾರ್ಟಿ" ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಹೆಚ್.ಬಿ. ದಿನೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
State Award and National awards Movies are Screening From Today (April 25th) to April 29th 5days in Bengaluru.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X