»   » ದಾರಿ ಬಿಡಿ 'ಅಯೋಗ್ಯ' ಸತೀಶ ಬರ್ತಾವ್ನೆ

ದಾರಿ ಬಿಡಿ 'ಅಯೋಗ್ಯ' ಸತೀಶ ಬರ್ತಾವ್ನೆ

Posted By:
Subscribe to Filmibeat Kannada

ನಿನಾಸಂ ಸತೀಶ್ ಹಾಗೂ ರಚಿತಾ ರಾಮ್ ಅಭಿನಯದ ಅಯೋಗ್ಯ ಸಿನಿಮಾದ ಮಾತಿನ ಭಾಗದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಮಂಡ್ಯದ ಸುತ್ತಾ ಮುತ್ತ ಹಳ್ಳಿಗಳಲ್ಲಿ ಅಯೋಗ್ಯ ಸಿನಿಮಾದ ಚಿತ್ರೀಕರಣ ನಡೆದಿದ್ದು ಮಹೇಶ್ ಕುಮಾರ್ ಇದೇ ಮೊದಲ ಬಾರಿಗೆ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.

ಇಷ್ಟು ದಿನಗಳ ಕಾಲ ಗ್ಲಾಮರ್ ಲುಕ್ ನಲ್ಲಿ ಕನ್ನಡ ಸಿನಿ ರಸಿಕರ ಮನಸ್ಸು ಗೆದ್ದಿದ್ದ ಡಿಂಪಲ್ ಕ್ವೀನ್ ರಚಿತಾ ರಾಮ್ ಇದೇ ಮೊದಲ ಬಾರಿಗೆ ಪಕ್ಕಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ಅಭಿನಯಿಸುವ ಮೂಲಕ ಗಂಡು ಮಕ್ಕಳ ನಿದ್ದೆ ಕದಿಯಲಿದ್ದಾರೆ. ಅಯೋಗ್ಯ ಚಿತ್ರದಲ್ಲಿ ಅದ್ದೂರಿ ತಾರಬಳಗವಿದ್ದು ರವಿಶಂಕರ್ ಖಳನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಶರತ್ ಚಕ್ರವರ್ತಿ ಸಂಭಾಷಣೆ ಬರೆದಿದ್ದಾರೆ.

'ಅಯೋಗ್ಯ'ನ ಜೊತೆ ಸೇರಿ ಹಳ್ಳಿ ಹುಡುಗಿ ಆದ ರಚಿತಾ ರಾಮ್

Ayogya Kannada cinema will be released tomorrow(March 18)

ಸಿನಿಮಾಗಾಗಿ ನಿನಾಸಂ ಸತೀಶ್ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದ್ದು ಕೆಲ ಸಮಯ ಜಿಮ್ ನಲ್ಲಿ ವರ್ಕ್ ಮಾಡಿ ಬೆವರಿಳಿಸಿದ್ದಾರೆ. ಫೋಟೋ ಶೂಟ್ ನಿಂದಲೇ ಬಾರಿ ಸುದ್ದಿ ಮಾಡಿದ್ದ ಅಯೋಗ್ಯ ಸಿನಿಮಾತಂಡ ಯುಗಾದಿ ಹಬ್ಬಕ್ಕೆ ಪ್ರೇಕ್ಷಕರಿಗೆ ಸಿಹಿ ಸುದ್ದಿಯನ್ನ ಹಂಚಲು ರೆಡಿ ಮಾಡಿಕೊಂಡಿದೆ.

ಯುಗಾದಿ ಹಬ್ಬದ ವಿಶೇಷವಾಗಿ ಹೊಸ ಪೋಸ್ಟರ್ ಬಿಡುಗಡೆ ಮಾಡಿರುವ ನಿರ್ದೇಶಕ ಮಹೇಶ್ ಕುಮಾರ್ ನಾಳೆ (ಮಾರ್ಚ್ 18) ಅಯೋಗ್ಯನ ಅವತಾರವನ್ನ ಪ್ರೇಕ್ಷಕರಿಗೆ ಪರಿಚಯ ಮಾಡಲಿದ್ದಾರೆ. ಸಿನಿಮಾದ ಮೊದಲ ಟೀಸರ್ ಬಿಡುಗಡೆ ಮಾಡಲಿದ್ದು ಈ ಮೂಲಕ ಕನ್ನಡ ಸಿನಿಮಾ ಅಭಿಮಾನಿಗಳಿಗೆ ಅಯೋಗ್ಯ ಚಿತ್ರದ ಬಗ್ಗೆ ಸಣ್ಣ ಪರಿಚಯ ಮಾಡಿಸಲಿದ್ದಾರೆ.

ಸಾಕಷ್ಟು ದಿನಗಳಿಂದ ಚಿತ್ರದ ಮೇಕಿಂಗ್ ಸ್ಟಿಲ್ ಮತ್ತು ಚಿತ್ರೀಕರಣದ ಸಮಯದಲ್ಲಿ ಫೋಟೋಗಳನ್ನ ನೋಡಿರುವ ಅಭಿಮಾನಿಗಳು ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲದಲ್ಲಿದ್ದಾರೆ. ಇದೇ ಮೊದಲ ಬಾರಿಗೆ ತೆರೆ ಮೇಲೆ ಒಂದಾಗಿರುವ ಸತೀಶ್ ಹಾಗೂ ರಚಿತಾ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕೌತುಕಕ್ಕೂ ನಾಳೆ ತೆರೆ ಬೀಳಲಿದೆ.

ಮಂಡ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷನಾದ ಖಳನಟ ರವಿಶಂಕರ್

English summary
The first teaser of Ayogya Kannada cinema will be released tomorrow(March 18). Satish Ninasam and Rachita Ram are acting in the film. Mahesh Kumar directed the film .

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X