For Quick Alerts
  ALLOW NOTIFICATIONS  
  For Daily Alerts

  'ಅಯೋಗ್ಯ'ನ ಆನಂದದಲ್ಲಿ ಭಾಗಿಯಾದ ಧ್ರುವ ಸರ್ಜಾ

  By Naveen
  |
  Ayogya :ಅಯೋಗ್ಯನ ಹಾಡುಗಳನ್ನು ಅಪ್ಪಿದ ಬಹದ್ದೂರ್ ಗಂಡು..!! | Filmibeat Kannada

  ನಟ ನೀನಾಸಂ ಸತೀಶ್ ನಟನೆಯ 'ಅಯೋಗ್ಯ' ಸಿನಿಮಾ ದಿನೇ ದಿನೇ ತನ್ನ ಸೌಂಡ್ ಜಾಸ್ತಿ ಮಾಡುತ್ತಿದೆ. ಚಿತ್ರದ ಟೀಸರ್ ಬಳಿಕ ಈಗ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ನಟ ಧ್ರುವ ಸರ್ಜಾ ಬಿಡುಗಡೆ ಮಾಡಿದ್ದಾರೆ.

  ಇಂದು ಬೆಳ್ಳಗೆ 11.30 ಕ್ಕೆ ಬೆಂಗಳೂರಿನ ತ್ಯಾಗರಾಜ ನಗರದ ಶ್ರೀ ವೀರಾಂಜನೇಯ ದೇವಸ್ಠಾನದಲ್ಲಿ ಧ್ರುವ ಸರ್ಜಾ ಚಿತ್ರದ ಮೊದಲ ಹಾಡನ್ನು ರಿಲೀಸ್ ಮಾಡಿದರು. 'ಏನಮ್ಮಿ ಏನಮ್ಮಿ..' ಹಾಡಿನ ಬಿಡುಗಡೆಯ ಜೊತೆಗೆ ಚಿತ್ರತಂಡಕ್ಕೆ ಧ್ರುವ ವಿಶ್ ಮಾಡಿದರು.

  ಭಾರಿ ಮೊತ್ತಕ್ಕೆ ಸೇಲ್ ಆಯ್ತು 'ಅಯೋಗ್ಯ' ಆಡಿಯೋ ಭಾರಿ ಮೊತ್ತಕ್ಕೆ ಸೇಲ್ ಆಯ್ತು 'ಅಯೋಗ್ಯ' ಆಡಿಯೋ

  ಸದ್ಯ ರಿಲೀಸ್ ಆಗಿರುವ 'ಏನಮ್ಮಿ ಏನಮ್ಮಿ..' ಹಾಡು ಸಖತ್ ಕ್ಯಾಚಿ ಆಗಿದ್ದು, ಒಮ್ಮೆ ಕೇಳಿದರೆ ಇಷ್ಟ ಆಗಿ ಬಿಡುತ್ತದೆ. ಬಹದ್ದೂರ್ ಚೇತನ್ ಕುಮಾರ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ಹಾಗೂ ವಿಜಯ್ ಪ್ರಕಾಶ್ ಧ್ವನಿ ಹಾಡಿನಲ್ಲಿ ಬೆರತಿದೆ.

  ಭಾರಿ ಮೊತ್ತಕ್ಕೆ ಅಯೋಗ್ಯನ ಹಾಡುಗಳ ಹಕ್ಕನ್ನು ಆನಂದ್ ಆಡಿಯೋಗೆ ಕೊಂಡುಕೊಂಡಿದೆ. ಯೂ ಟ್ಯೂಬ್ ನಲ್ಲಿ ಮೊದಲ ಹಾಡು ಈಗಾಗಲೇ ಬಿಡುಗಡೆಯಾಗಿದೆ. ಇನ್ನು ಕ್ರಿಸ್ಟಲ್ ಪಾರ್ಕ್ ಸಿನಿಮಾ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಆಗಿದ್ದು ,ಮಹೇಶ್ ಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

  English summary
  Actor Sathish Neenasam and Rachita Ram's 'Ayogya' movie 1st song was released by Dhruva Sarja.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X