Don't Miss!
- Sports
U-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪನೋರಮಾ ವಿವಾದ : ಸಿಡಿದೆದ್ದ ನಿರ್ದೇಶಕ ಬಿ.ಎಸ್.ಲಿಂಗದೇವರು!
ಎರಡು ರಾಷ್ಟ್ರ ಪ್ರಶಸ್ತಿ ಪಡೆದು ಕನ್ನಡದ ಹೆಮ್ಮೆಯ ಕೀರ್ತಿ ಪತಾಕೆ ಹಾರಿಸಿದ್ದ 'ನಾನು ಅವನಲ್ಲ...ಅವಳು' ಸಿನಿಮಾ ಇದೀಗ ವಿವಾದದಿಂದ ಸದ್ದು ಮಾಡುತ್ತಿದೆ.
ಶಿವಮೊಗ್ಗದಲ್ಲಿ ಆಗಸ್ಟ್ 25 ರಿಂದ 27 ರವರೆಗೂ ನಡೆಯಲಿರುವ 'ಭಾರತೀಯ ಪನೋರಮಾ ಚಲನಚಿತ್ರೋತ್ಸವ'ದಲ್ಲಿ 'ನಾನು ಅವನಲ್ಲ...ಅವಳು' ಚಿತ್ರದ ಪ್ರದರ್ಶನಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಸರ್ಕಾರ ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ನಿರ್ದೇಶಕ ಬಿ.ಎಸ್.ಲಿಂಗದೇವರು ಸಿಟ್ಟಾಗಿದ್ದಾರೆ.
ವಿವಾದದ ಬಗ್ಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಸ್ಪಷ್ಟನೆ ನೀಡುತ್ತಿದ್ದಂತೆ, ಅವರಿಗೆ ತಮ್ಮ ಬರಹದ ಮುಖಾಂತರ ಚಾಟಿ ಏಟು ಕೊಟ್ಟಿದ್ದಾರೆ ಬಿ.ಎಸ್.ಲಿಂಗದೇವರು. [ಲಿಂಗದೇವರು ಕೊಟ್ಟ ಏಟಿಗೆ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ತಿರುಗೇಟು]
ರಾಜೇಂದ್ರ ಸಿಂಗ್ ಬಾಬು ನೀಡಿರುವ ಸ್ಪಷ್ಟನೆಗೆ ಬಿ.ಎಸ್.ಲಿಂಗದೇವರು ನೀಡಿರುವ ಖಾರವಾದ ಪ್ರತಿಕ್ರಿಯೆಯ ಯಥಾವತ್ ರೂಪ ಇಲ್ಲಿದೆ. ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

ಆಶ್ಚರ್ಯ!
''ಶ್ರೀಯುತ ಎಸ್.ವಿ.ರಾಜೇಂದ್ರಸಿಂಗ್ ಬಾಬು ರವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಕ್ತಾರರೂ ಕೂಡ ಅನ್ನುವುದು ತಿಳಿದು ಆಶ್ಚರ್ಯ'' - ನಿರ್ದೇಶಕ ಬಿ.ಎಸ್.ಲಿಂಗದೇವರು [ಚಲನಚಿತ್ರ ಅಕಾಡೆಮಿ ನಡೆಗೆ 'ಛೀ! ಅಸಹ್ಯ' ಎಂದ ಬಿ.ಎಸ್.ಲಿಂಗದೇವರು]

ವಿಷಾದನೀಯ!
''ಶೇಕಡ 100/- ಮನರಂಜನೆಯ ವಿನಾಯಿತಿಯನ್ನು ಅರ್ಹತೆ ಇಲ್ಲದಿದ್ದರೂ ಇಲಾಖೆಯು ತನ್ನ ಉದಾರ ನೀತಿ ಅನುಸರಿಸಿ ಕೊಟ್ಟಿದೆ ಅನ್ನುವ ರೀತಿಯ ಸಮರ್ಥನೆ ದುರದೃಷ್ಟಕರ ಹಾಗೂ ವಿಷಾದನೀಯ. ಇಲ್ಲಿ ಅವರು ಮರೆಮಾಚಿರುವುದು ಏನಂದರೆ 'ಕಾಕಮೊಟ್ಟೈ' ಎಂಬ ತಮಿಳು ಚಿತ್ರಕ್ಕೆ ಕೇವಲ ಒಂದು ವಾರದಲ್ಲಿ ಅನುಮತಿ ಕೊಟ್ಟಿರುವ ವಿಚಾರ. ನಮ್ಮ ಸಿನಿಮಾದ ಕೇವಲ ಎರಡು ನಿಮಿಷದ ಒಂದು ದೃಶ್ಯವನ್ನ ಹೊರರಾಜ್ಯದ ಚಿತ್ರನಗರಿಯಲ್ಲಿ ಚಿತ್ರೀಕರಣ ಮಾಡಿದ್ದಾರೆ ಅನ್ನುವ ಕಾರಣ ಸಮಂಜಸವಾದದ್ದಲ್ಲ ಹಾಗೂ ನಾವೂ ಹೋರಾಟ ಮಾಡುತ್ತೇವೆ ಎಂಬ ವಿಷಯ ತಿಳಿದು 'ಒಂದು ವರ್ಷದ ನಂತರ ಅನುಮತಿ ಕೊಟ್ಟಿದ್ದು'. ಇದೊಂದು ಉದಾಹರಣೆ ಸಾಕು ತಾವು ಮತ್ತು ಇಲಾಖೆ ಎಷ್ಟೊಂದು ಅಭಿಮಾನದಿಂದ ಶೋಷಣೆ ಮಾಡಿದ್ದೀರೀ ಎನ್ನವುದಕ್ಕೆ'' - ನಿರ್ದೇಶಕ ಬಿ.ಎಸ್.ಲಿಂಗದೇವರು [ನಟಿ ತಾರಾ ವಿರುದ್ಧ ಲಿಂಗದೇವರು ಫೇಸ್ ಬುಕ್ ಬಾಂಬ್]

ಅನಿವಾರ್ಯತೆ ತಿಳಿಸಿದ್ವಿ!
''ಚಿತ್ರೀಕರಣ ಪ್ರಾರಂಭ ಮಾಡುವ ಮುನ್ನವೇ, ಹೊರರಾಜ್ಯದ ಚಿತ್ರನಗರಿಯಲ್ಲಿ ಚಿತ್ರೀಕರಣ ಮಾಡಬೇಕಾದ ಅನಿವಾರ್ಯತೆಯನ್ನೂ ಇಲಾಖೆಗೆ ಪತ್ರದ ಮೂಲಕ ತಿಳಿಸಿದ್ದೆವು ಕೂಡ'' - ನಿರ್ದೇಶಕ ಬಿ.ಎಸ್.ಲಿಂಗದೇವರು [ವಿಮರ್ಶೆ: ನೋಡುಗರ ಪರಿಕಲ್ಪನೆ ಬದಲಾಯಿಸುವ 'ನಾನು ಅವನಲ್ಲ...ಅವಳು']

ಕಾರಣ ಯಾರು?
''ಈ ಚಿತ್ರದ ಪ್ರಸಾದನ ಕಲಾವಿದರನ್ನು ಗೌರವಿಸುವ ಸಲುವಾಗಿ ಪ್ರಸಾದನ ಕಲಾವಿದರಿಗೆ ಸರ್ಕಾರದಿಂದ ವಿಶೇಷ ಅನುಮತಿ ಪಡೆದು ಇಬ್ಬರು ಪ್ರಸಾದನ ಕಲಾವಿದರಿಗೆ ತಲಾ 1.00 ಲಕ್ಷ ರೂ. ಪ್ರಶಸ್ತಿ ನೀಡಿ ಇಲಾಖೆಯು ಗೌರವಿಸಿದೆ ಎಂಬ ವಿಷಯದಲ್ಲಿ ನನಗೂ ಅಭಿಮಾನ ಇದೆ. ಆದರೆ ಅದು ಅವರ ಅರ್ಹತೆಯ ಆಧಾರದ ಮೇಲೆ ಕೊಟ್ಟಿರುವುದು ಮತ್ತು ಅವಕಾಶವಿಲ್ಲದಿದ್ದರೆ ಕೊಡಲು ಬರುವುದಿಲ್ಲ. ವಿಶೇಷ ಅನುಮತಿ ಯಾಕೆ ಪಡೆದದ್ದು ಮತ್ತು ಆ ಸಂದರ್ಭ ಎದುರಿಸುವುದಕ್ಕೆ ಕಾರಣ ಯಾರು? ವಿಶೇಷ ಪ್ರೋತ್ಸಾಹ ಧನ ನೀಡುವಾಗ ಅನುಸರಿಸಿಬೇಕಾದ ಮಾನದಂಡವನ್ನು ಮತ್ತೊಮ್ಮೆ ಓದಬೇಕಾಗಿ ವಿನಂತಿ'' - ನಿರ್ದೇಶಕ ಬಿ.ಎಸ್.ಲಿಂಗದೇವರು

ಸತ್ಯ ಗೊತ್ತಿದೆ!
''ಶಿವಮೊಗ್ಗದಲ್ಲಿ ನಡೆಯುವ ಭಾರತೀಯ ಪನೋರಮಾದ ಚಿತ್ರಗಳ ಆಯ್ಕೆಯು ತಾವು ಖುದ್ದು ಮಾಡಿದ್ದು ಎಂಬ ವಿಷಯವನ್ನ DFF ಅಧಿಕಾರಿಗಳೇ ನನಗೆ ದೂರವಾಣಿಯ ಮೂಲಕ ತಿಳಿಸಿದ್ದಾರೆ ಹಾಗೂ ತಾವು ಕನ್ನಡ ಚಲನಚಿತ್ರವನ್ನು ಆ ಪಟ್ಟಿಯಿಂದ ಬಿಡಲು ಮತ್ತು ಅದಕ್ಕೆ ಕೊಟ್ಟ ಕಾರಣವನ್ನೂ ಹೇಳಿದ್ದಾರೆ'' - ನಿರ್ದೇಶಕ ಬಿ.ಎಸ್.ಲಿಂಗದೇವರು

ನಿರೀಕ್ಷೆ ಮಾಡಿರಲಿಲ್ಲ!
''ನೀವು ನೀಡಿರುವ ಕಾರಣ ಆಘಾತ ತಂದಿದೆ ಮತ್ತು ಪರ್ಯಾಯ/ ಸದಭಿರುಚಿಯ ಕನ್ನಡ ಚಲನಚಿತ್ರಗಳಿಗೆ ಅಪಾಯ ಕೂಡ. ನಿಮ್ಮಂತಹ ಹಿರಿಯರಿಂದ ಆ ಮಾತನ್ನ ನಿರೀಕ್ಷಿಸಿರಲಿಲ್ಲ. ಈ ಹಿನ್ನೆಲೆಯಲ್ಲಿಯೇ ನಾನು ಕೇಂದ್ರ ಮಂತ್ರಿಗಳಿಗೆ ಪತ್ರ ಬರೆದಿರುವುದು ಮತ್ತು DFF ನಿಂದ ಲಿಖಿತ ಉತ್ತರ ನಿರೀಕ್ಷೆಯಲ್ಲಿ ಇದ್ದೇನೆ'' - ನಿರ್ದೇಶಕ ಬಿ.ಎಸ್.ಲಿಂಗದೇವರು

ಪ್ರೋತ್ಸಾಹ ಧನ ಬಂದಿಲ್ಲ
''ಈಗಲೂ ಇಲಾಖೆಯಿಂದ 'ನಾನು ಅವನಲ್ಲ..ಅವಳು' ಚಲನಚಿತ್ರಕ್ಕೆ ಬರಬೇಕಾದ ಪ್ರೋತ್ಸಾಹ ಧನ ಬಂದಿಲ್ಲ. ಇದರಿಂದ ಯಾವ ಸದಾಶಯ ಇದೆ ಅನ್ನುವುದನ್ನ ತಾವು ಹೇಳಲು ಮರೆತಿದ್ದೀರಿ ಅನ್ನುವುದನ್ನ ಜ್ಞಾಪಿಸುತ್ತಾ, ನಮ್ಮ ಸದರಿ ಚಲನಚಿತ್ರವು ಎಲ್ಲಾ ಅಗತ್ಯ, ಅರ್ಹತೆ ಹೊಂದಿದ್ದು ಮತ್ತು ಇದಕ್ಕೆ ಯಾವ ವಿಶೇಷ ಅನುಮತಿ ಬೇಕಾಗಿಲ್ಲ. ಇದು ತಮ್ಮ ಇಲಾಖೆ ಕನ್ನಡ ಚಲನಚಿತ್ರಗಳಿಗೆ ಮಾಡುತ್ತಿರುವ ಪ್ರೋತ್ಸಾಹ !'' - ನಿರ್ದೇಶಕ ಬಿ.ಎಸ್.ಲಿಂಗದೇವರು

ಮಾರ್ಗದರ್ಶಿ ಆಗ್ಬೇಕು!
''ತಾವು ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು, ನಾನೂ ಕೂಡ ಮುಂದಿನ ದಿನಗಳಲ್ಲಿ ಅಧ್ಯಕ್ಷ ಆಗಬಹುದು. ಹಾಗಾಗಿ ನನ್ನಂತ ಯುವಕರಿಗೆ ನೀವು ನಿಮ್ಮ ವರ್ತನೆ ಮತ್ತು ನಡವಳಿಕೆಯ ಮೂಲಕ ಆಗ್ರಾ ಪಂಕ್ತಿ ಹಾಕಿಕೊಡಬೇಕು. ಅಲ್ಲದೆ ನಿಮ್ಮ ಕ್ರಿಯಾಶೀಲತೆಯನ್ನು ಅಕಾಡೆಮಿಯ ಕೆಲಸಗಳಿಗೆ ಮಿತಿಗೊಳಿಸುವ ಮೂಲಕ ನಮಗೆ ಮಾರ್ಗದರ್ಶಿಗಳಾಗಬೇಕು. ಇಲಾಖೆಯ ಕುರಿತು ಮಾತಾಡುವುದಕ್ಕೆ ಬೇರೆ ವಕ್ತಾರರಿದ್ದಾರೆ. ಇದು ನನ್ನ ಆಶಯ.'' - ನಿರ್ದೇಶಕ ಬಿ.ಎಸ್.ಲಿಂಗದೇವರು