»   » ಪುನೀತ್ ಸಿನಿಮಾಗಾಗಿ ಮತ್ತೆ ಕ್ಯಾಮರಾ ಮುಂದೆ ಬಂದ ಬಿ.ಸರೋಜಾದೇವಿ

ಪುನೀತ್ ಸಿನಿಮಾಗಾಗಿ ಮತ್ತೆ ಕ್ಯಾಮರಾ ಮುಂದೆ ಬಂದ ಬಿ.ಸರೋಜಾದೇವಿ

Posted By:
Subscribe to Filmibeat Kannada

ಹಿರಿಯ ನಟಿ ಬಿ.ಸರೋಜಾದೇವಿ ಇತ್ತೀಚಿಗೆ ಯಾವುದೇ ಸಿನಿಮಾದಲ್ಲಿ ನಟಿಸುತ್ತಿರಲಿಲ್ಲ. ಆದರೆ ಈಗ ಅವರ ಮತ್ತೆ ಕ್ಯಾಮರಾ ಮುಂದೆ ಬಂದಿದ್ದಾರೆ. ಅದು ಕೂಡ ಅವರು ಈಗ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರ ಹೊಸ ಸಿನಿಮಾ ಈಗ ಸುದ್ದಿ ಮೇಲೆ ಸುದ್ದಿ ಮಾಡುತ್ತಿದೆ. ಈ ಸಿನಿಮಾದಲ್ಲಿ ನಟಿಯಾಗಿ ಪ್ರಿಯಾಂಕ ಜ್ವಾಲಕರ್ ಆಯ್ಕೆ ಆಗಿದ್ದರು. ಅದರ ಹಿಂದೆಯೇ ಈಗ ಪುನೀತ್ ಜೊತೆಗೆ ಹಿರಿಯ ನಟಿ ಬಿ.ಸರೋಜಾದೇವಿ ಅವರು ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೆಲವು ವರ್ಷ ನಟನೆಯಿಂದ ಬ್ರೇಕ್ ಪಡೆದಿದ್ದ ಸರೋಜಾದೇವಿ ಅಪ್ಪುಗಾಗಿ ಮತ್ತೆ ಸಿನಿಮಾ ಮಾಡುತ್ತಿದ್ದಾರೆ.

ಅಣ್ಣವ್ರ ಜೊತೆ ಸಾಕಷ್ಟು ಸಿನಿಮಾದಲ್ಲಿ ನಟನೆ ಮಾಡಿದ್ದ ಬಿ.ಸರೋಜಾದೇವಿ ಈಗ ಅಪ್ಪು ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಈ ಹಿಂದೆ ಪುನೀತ್ ಬಾಲನಟರಾಗಿದ್ದಾಗ ಸಹ ಬಿ.ಸರೋಜಾದೇವಿ ಜೊತೆಗೆ ನಟಿಸಿದ್ದರು.

B Saroja Devi will play a important lead role in Puneeth Rajkumar new movie

ಸದ್ಯಕ್ಕೆ ಬಿ.ಸರೋಜಾದೇವಿ ಅವರು ಪುನೀತ್ ರಾಜ್ ಕುಮಾರ್ ಅವರ ಹೊಸ ಸಿನಿಮಾದಲ್ಲಿ ನಟಿಸುವುದು ಪಕ್ಕಾ ಆಗಿದೆ. ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಪವನ್ ಒಡೆಯರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪುನೀತ್ ಜೊತೆಗೆ ಪವನ್ ಒಡೆಯರ್ ಮಾಡುತ್ತಿರುವ ಎರಡನೇ ಸಿನಿಮಾ ಇದಾಗಿದೆ. ರಾಕ್ ಲೈನ್ ವೆಂಕಟೇಶ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.

ಪುನೀತ್ ರಾಜ್ ಕುಮಾರ್ ಹೊಸ ಸಿನಿಮಾಗೆ ನಾಯಕಿ ಸಿಕ್ಕಳ್ಳು

English summary
Actress B Saroja Devi will play a important lead role in Puneeth Rajkumar new movie. The movie directed by pawan wodeyar and produced by rockline venkatesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada