For Quick Alerts
  ALLOW NOTIFICATIONS  
  For Daily Alerts

  ನಿಮ್ಮಲ್ಲು ಬದಲಾವಣೆ ತರಬಹುದು 'ಮುಂದಿನ ಬದಲಾವಣೆ' ಕಿರುಚಿತ್ರ

  |

  ಬೆಳ್ಳಗೆ ಆಫೀಸ್ ಗೆ ಹೋದ ಮಗನಿಗಾಗಿ ಅಮ್ಮ ಕಾಯುತ್ತಿರುತ್ತಾಳೆ. ಮೊದಲು ಮಗ ಊಟ ಮಾಡಬೇಕು ಅಂತ ತಟ್ಟೆ ಹಿಡಿದು ಕುಳಿತಿರುತ್ತಾಳೆ. ಆದರೆ ರಾತ್ರಿ ಮನೆಗೆ ಮರಳುವ ಮಗ 'ನಂದು ಹೊರಗೆ ಊಟ ಆಯ್ತು..' ಅಂತ ಹೇಳಿ ಸೀದಾ ಮಲಗುತ್ತಾನೆ. ಮಗನಿಗಾಗಿ ಕಾಯುತ್ತಿದ್ದ ತಾಯಿ ಕೂಡ ಬೇಸರದಿಂದ ಮಲಗುತ್ತಾಳೆ.

  ಈ ರೀತಿಯ ದೃಶ್ಯ ಪ್ರತಿ ಮನೆಯಲ್ಲಿ ನಡೆದಿರುತ್ತದೆ. ಇಂತಹ ಸೂಕ್ಷ್ಮ ವಿಷಯಗಳನ್ನು ಒಳಗೊಂಡ ಒಂದು ಕಿರುಚಿತ್ರ ಇದೀಗ ಬಿಡುಗಡೆಯಾಗಿದೆ. ಇದೇ 'ಮುಂದಿನ ಬದಲಾವಣೆ'. ಈ ಕಿರುಚಿತ್ರ ಒಬ್ಬ ತಾಯಿ ಮತ್ತು ಮಗನ ನಡುವೆ ನಡೆಯುತ್ತದೆ. ಇದರ ಮೂಲಕ ಅನೇಕ ಒಳ್ಳೆಯ ವಿಷಯಗಳನ್ನು ಹೇಳಿದ್ದಾರೆ.

  ತಂದೆ ತಾಯಿ ಮಕ್ಕಳನ್ನು ಸ್ನೇಹಿತರ ರೀತಿ ಕಾಣಬೇಕು ಎನ್ನುವ ಒಂದು ಮಾತಿದೆ ಆದರೆ, ಸ್ನೇಹಿತರು ಬೇಕಾದಷ್ಟು ಜನ ಸಿಗುತ್ತಾರೆ, ತಾಯಿ ಮಾತ್ರ ಒಬ್ಬಳೆ ಎನ್ನುವುದನ್ನು ಇಲ್ಲಿ ಹೇಳಲಾಗಿದೆ. ಅಂದಹಾಗೆ, ಈ ಕಿರುಚಿತ್ರವನ್ನು ಸಾತ್ವಿಕ್ ನಿರ್ದೇಶನ ಮಾಡಿದ್ದಾರೆ. ಧೇರಿ ಮಿರಾಂಡ ಕಥೆ ಬರೆದಿದ್ದಾರೆ.


  ಬಿ ಸುರೇಶ್, ವೀಣಾ ಸುಂದರ್, ಸಂದೀಪ್ ಸುಂಕದ, ಪವನ್ ಕೋಟೆ ಹಾಗೂ ಮೋನಿಷ್ ನಾಡ್ಗಿರ್ ನಟಿಸಿದ್ದಾರೆ. ವಿಕಾಸ್ ವಸಿಷ್ಠ ಸಂಗೀತದ ಇಂಪು ತುಂಬ ಚೆನ್ನಾಗಿದೆ. ಇಡೀ ಕಿರುಚಿತ್ರ ಕ್ವಾಲಿಟಿ ಇಷ್ಟ ಆಗುತ್ತಿದೆ. ಯೂ ಟ್ಯೂಬ್ ನಲ್ಲಿ 'ಮುಂದಿನ ಬದಲಾವಣೆ' ಕಿರುಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.

  English summary
  B Suresh's 'Mundina Badalaavane' short film released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X