For Quick Alerts
  ALLOW NOTIFICATIONS  
  For Daily Alerts

  ಹೇಗಿದೆ ಲೀಲಾವತಿ ಆರೋಗ್ಯ? ಮನೆಗೆ ಭೇಟಿ ನೀಡಿದ ನಂತರ ಮಾಹಿತಿ ಕೊಟ್ಟ ಬಾ.ಮಾ ಹರೀಶ್

  |

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಬಾ.ಮಾ ಹರೀಶ್ ಅವರು ಹಿರಿಯ ನಟಿ ಲೀಲಾವತಿ ಅವರ ಮನೆಗೆ ಭೇಟಿ ನೀಡಿದ್ದು, ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ನಟಿ ಲೀಲಾವತಿ ತಮ್ಮ ಮಗ ವಿನೋದ್ ರಾಜ್ ಜತೆಗೆ ನೆಲಮಂಗಲದಲ್ಲಿನ ತಮ್ಮ ತೋಟದ ಮನೆಯಲ್ಲಿ ವಾಸವಿದ್ದು ಇತ್ತೀಚೆಗೆ ವ್ಯವಸಾಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

  ಇನ್ನು ಲೀಲಾವತಿ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮಕ್ಕೆ ಹಿರಿಯ ನಟಿ ಲೀಲಾವತಿ ಅವರನ್ನು ಆಹ್ವಾನಿಸಲು ಅವರ ಮನೆಗೆ ತೆರಳಿದ್ದಾಗಿ ಫಿಲ್ಮಿಬೀಟ್ ಜೊತೆ ಮಾತನಾಡಿದ ಬಾ. ಮಾ ಹರೀಶ್ ತಿಳಿಸಿದ್ದಾರೆ. ಇದೇ ವೇಳೆ ಅವರ ಜತೆ ಮಾತನಾಡಿದ್ದಾಗಿ ಮತ್ತು ಅವರ ಆರೋಗ್ಯ ವಿಚಾರಿಸಿದ್ದಾಗಿ ಬಾ. ಮಾ ಹರೀಶ್ ಹೇಳಿಕೊಂಡಿದ್ದಾರೆ. ಹಾಗೂ ಅವರು ಕೊಂಚ ನಿತ್ರಾಣರಾಗಿದ್ದು, ಆರೋಗ್ಯವಾಗಿಯೇ ಇದ್ದಾರೆ ಭಯಪಡುವ ಅಗತ್ಯವಿಲ್ಲ ಎಂದಿದ್ದಾರೆ. ಈ ಮೂಲಕ ಲೀಲಾವತಿ ಅವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದಾರೆ ಎಂಬ ಸುದ್ದಿಗಳಿಗೆ ಬಾ. ಮಾ ಹರೀಶ್ ತೆರೆ ಎಳೆದಿದ್ದಾರೆ.

  ಇನ್ನು ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿಯೇ ನಡೆಯಬೇಕಾಗಿತ್ತು. ಆದರೆ ಉಮೇಶ್ ಕತ್ತಿ ಅವರ ನಿಧನದ ಕಾರಣದಿಂದಾಗಿ ಈ ಕಾರ್ಯಕ್ರಮ ರದ್ದಾಗಿದೆ.

  1949ರಲ್ಲೇ ಚಿತ್ರರಂಗ ಪ್ರವೇಶಿಸಿದ್ದ ಲೀಲಾವತಿ

  1949ರಲ್ಲೇ ಚಿತ್ರರಂಗ ಪ್ರವೇಶಿಸಿದ್ದ ಲೀಲಾವತಿ

  ಇನ್ನು ನಟಿ ಲೀಲಾವತಿ 1949ರಲ್ಲಿ ತೆರೆಕಂಡಿದ್ದ ಶಂಕರ್ ಸಿಂಗ್ ಅವರ ನಾಗಕನ್ನಿಕಾ ಎಂಬ ಚಿತ್ರದಲ್ಲಿ ಚಿಕ್ಕ ಪಾತ್ರವೊಂದನ್ನು ಮಾಡುವುದರ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ನಂತರ 1958ರಲ್ಲಿ ತೆರೆಕಂಡ ಸುಬ್ಬಯ್ಯನಾಯ್ಡು ಅವರ ಭಕ್ತ ಪ್ರಹ್ಲಾದ ಚಿತ್ರದಲ್ಲಿಯೂ ಬಣ್ಣ ಹಚ್ಚಿದ್ದ ನಟಿ ಲೀಲಾವತಿ ಮಾಂಗಲ್ಯ ಯೋಗದಲ್ಲೂ ನಟಿಸಿದ್ದರು. ರಾಣಿ ಹೊನ್ನಮ್ಮ ಚಿತ್ರದ ಮೂಲಕ ನಟಿ ಲೀಲಾವತಿ ಪೂರ್ಣ ಪ್ರಮಾಣದ ನಟಿಯಾಗಿ ಬಡ್ತಿ ಪಡೆದರು.

  600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ

  600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ

  ಇನ್ನು ವಿಂಟೇಜ್ ಕನ್ನಡ ಚಿತ್ರಗಳಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚಿದ ಲೀಲಾವತಿ ಬಹುಬೇಗನೆ ಪೋಷಕ ಪಾತ್ರಗಳಲ್ಲಿಯೂ ಸಹ ಅಭಿನಯಿಸಲು ಆರಂಭಿಸಿದರು. ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿರುವ ಲೀಲಾವತಿ 400ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

   ಸಿನಿಮಾ ರಂಗದ ಸೇವೆಗಾಗಿ ಡಾಕ್ಟರೇಟ್

  ಸಿನಿಮಾ ರಂಗದ ಸೇವೆಗಾಗಿ ಡಾಕ್ಟರೇಟ್

  ನಟಿ ಲೀಲಾವತಿ ದಕ್ಷಿಣ ಭಾರತ ಚಿತ್ರರಂಗಕ್ಕೆ ಅಪಾರವಾದ ಸೇವೆ ಸಲ್ಲಿಸಿದ್ದಕ್ಕಾಗಿ 2008ರಲ್ಲಿ ತುಮಕೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿತ್ತು. ಅಷ್ಟೇ ಅಲ್ಲದೆ ಕರ್ನಾಟಕ ಸರ್ಕಾರ 2000ದಲ್ಲಿ ಡಾ. ರಾಜ್ ಕುಮಾರ್ ಲೈಫ್ ಟೈಮ್ ಅಚೀವ್ ಮೆಂಟ್ ಅವಾರ್ಡ್ ಅನ್ನು ಕೂಡ ನೀಡಿತ್ತು.

   ಯಾರದು ಕೊನೆ ಚಿತ್ರ

  ಯಾರದು ಕೊನೆ ಚಿತ್ರ

  ಇಷ್ಟು ದೊಡ್ಡ ಮಟ್ಟದ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಲೀಲಾವತಿ ಕೊನೆಯದಾಗಿ ಬಣ್ಣ ಹಚ್ಚಿದ್ದು ತಮ್ಮ ಮಗ ವಿನೋದ್ ರಾಜ್ ನಾಯಕನಟನಾಗಿ ಅಭಿನಯಿಸಿದ್ದಂತಹ ಯಾರದು ಚಿತ್ರಕ್ಕಾಗಿ. ಹಾಗೂ ಈ ಚಿತ್ರಕ್ಕೆ ಲೀಲಾವತಿ ಬಂಡವಾಳವನ್ನು ಹೂಡಿದ್ದರು.

  English summary
  Ba Ma Harish visited actress Leelavathi's house and inquired about her health
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X