»   » ಭೈರತಿ ರಣಗಲ್ಲು ಬಲಗೈ ಭಂಟ ಶಬರಿ ಯಾರು ಗೊತ್ತಾ?

ಭೈರತಿ ರಣಗಲ್ಲು ಬಲಗೈ ಭಂಟ ಶಬರಿ ಯಾರು ಗೊತ್ತಾ?

Posted By:
Subscribe to Filmibeat Kannada
ಮಫ್ತಿ ಸಿನಿಮಾದ ಭೈರತಿ ರಣಗಲ್ಲು ಬಲಗೈ ಬಂಟ ಶಬರಿ ಯಾರು ಗೊತ್ತಾ? | FIlmibeat Kannada

ಶಿವರಾಜ್ ಕುಮಾರ್ ನಟನೆಯ 'ಮಫ್ತಿ' ಸಿನಿಮಾ ಸೂಪರ್ ಹಿಟ್ ಆಗಿದೆ. ಕಳೆದ ವರ್ಷ ರಿಲೀಸ್ ಆದ ಯಶಸ್ವಿ ಸಿನಿಮಾಗಳ ಪೈಕಿ 'ಮಫ್ತಿ' ಕೂಡ ಒಂದಾಗಿದೆ. 'ಮಫ್ತಿ' ಸಿನಿಮಾ ನೋಡಿದಾಗ ಅದರ ಅನೇಕ ಪಾತ್ರಗಳು ಪ್ರೇಕ್ಷಕರ ಗಮನ ಸೆಳೆದಿದೆ. ಭೈರತಿ ರಣಗಲ್ಲು, ಗಣ, ಶಬರಿ, ಸಿಂಗ, ಕಾಶಿ ಹೀಗೆ ಚಿತ್ರದ ಅನೇಕ ಪಾತ್ರಗಳು ಇಷ್ಟ ಆಗುತ್ತದೆ.

ಅದರಲ್ಲಿ ಶಬರಿ ಪಾತ್ರ ತೆರೆ ಮೇಲೆ ಕಡಿಮೆ ಅವಧಿ ಇದ್ದರೂ ಹೆಚ್ಚು ಪರಿಣಾಮಕಾರಿ ಆಗಿದೆ. ಭೈರತಿ ರಣಗಲ್ಲು ಆಗಿರುವ ಶಿವಣ್ಣನ ಬಲ ಗೈ ಭಂಟನಾಗಿದ್ದ ಶಬರಿ ನಂತರ ಅವನಿಗೆ ಮೋಸ ಮಾಡುತ್ತಾನೆ. ಈ ಪಾತ್ರ ಸಿನಿಮಾ ನೋಡುಗರಿಗೆ ಥ್ರಿಲ್ ನೀಡುತ್ತದೆ. ಆದರೆ ಸಿನಿಮಾದಲ್ಲಿ ಇಷ್ಟ ಆಗುವ ಈ ಪಾತ್ರಧಾರಿಯ ಬಗ್ಗೆ ಅನೇಕರಿಗೆ ತಿಳಿದಿಲ್ಲ.

Baabu Hirannayya played a villain role 'Mufti' movie

ಅಂದಹಾಗೆ, 'ಮಫ್ತಿ' ಚಿತ್ರದ ಶಬರಿ ಪಾತ್ರದಲ್ಲಿ ನಟಿಸಿರುವುದು ಬಾಬು ಹಿರಣಯ್ಯ. ಇವರು ಖ್ಯಾತ ರಂಗಕರ್ಮಿ ಮಾಸ್ಟರ್ ಹಿರಣಯ್ಯ ಅವರ ಪುತ್ರ. ಈಗಾಗಲೇ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಇವರು 'ಮಫ್ತಿ' ಸಿನಿಮಾದಲ್ಲಿಯೂ ಗಮನ ಸೆಳೆದಿದ್ದರು. ಇತ್ತೀಚಿಗಷ್ಟೆ ಬಂದ 'ಲೂಸ್ ಕನೆಕ್ಷನ್' ವೆಬ್ ಸೀರಿಸ್ ನಲ್ಲಿಯೂ ಪ್ರಮುಖ ಪಾತ್ರದಲ್ಲಿ ಬಾಬು ಹಿರಣಯ್ಯ ನಟಿಸಿದ್ದರು.

ಅಂದಹಾಗೆ, ಸದ್ಯ ಬಾಬು ಹಿರಣಯ್ಯ ಅವರಿಗೆ ಪೋಷಕ ಪಾತ್ರದಲ್ಲಿ ನಟಿಸುವಂತೆ ಹೆಚ್ಚು ಅವಕಾಶಗಳು ಸಿಗುತ್ತಿದೆ. ನಟ ರಕ್ಷಿತ್ ಶೆಟ್ಟಿ ನಿರ್ಮಾಣದ 'ಕಥೆಯೊಂದು ಶುರುವಾಗಿದೆ' ಸಿನಿಮಾದಲ್ಲಿಯೂ ಬಾಬು ಹಿರಣಯ್ಯ ನಟಿಸುತ್ತಿದ್ದಾರೆ.

English summary
Master Hirannaiah son Baabu Hirannayya played a villain role 'Mufti' movie kannada movie. 'Mufti' movie starring Shiva Rajkumar and Srimurali.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X