»   » ಪಾಕಿಸ್ತಾನದಲ್ಲಿ ರಾಜಮೌಳಿಯ 'ಬಾಹುಬಲಿ' ಪರಾಕ್ರಮ

ಪಾಕಿಸ್ತಾನದಲ್ಲಿ ರಾಜಮೌಳಿಯ 'ಬಾಹುಬಲಿ' ಪರಾಕ್ರಮ

Posted By:
Subscribe to Filmibeat Kannada

ಭಾರತದ ಮೆಗಾ ಹಿಟ್ ಸಿನಿಮಾ 'ಬಾಹುಬಲಿ ದಿ ಬಿಗಿನಿಂಗ್' ಮತ್ತು 'ಬಾಹುಬಲಿ ದಿ ಕನ್ ಕ್ಲೂಷನ್' ಸಿನಿಮಾಗಳು ಪಾಕಿಸ್ತಾನದಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ನಿರ್ದೇಶಕ ಎಸ್ ಎಸ್ ರಾಜಮೌಳಿ ಮತ್ತು ನಿರ್ಮಾಪಕ ಶೋಭು ಎರ್ಲಗಡ್ಡಾ ಬುಧವಾರ ಪಾಕಿಸ್ತಾನಕ್ಕೆ ತೆರಳಿದ್ದಾರೆ.

ಹೌದು, ಪಾಕಿಸ್ತಾನ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದಕ್ಷಿಣ ಭಾರತದ ಬ್ಲ್ಯಾಕ್ ಬಸ್ಟರ್ ಸಿನಿಮಾ ಪ್ರದರ್ಶನವಾಗುತ್ತಿದ್ದು, ಈ ವಿಷ್ಯವನ್ನ ಖುದ್ದು ರಾಜಮೌಳಿಯೇ ಹಂಚಿಕೊಂಡಿದ್ದಾರೆ.

Baahubal screening in Pakistan

ಪಾಕಿಸ್ತಾನಕ್ಕೆ ತೆರಳುವ ಮುಂಚೆ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಸಂತಸ ಹಂಚಿಕೊಂಡಿರುವ ರಾಜಮೌಳಿ ''ಬಾಹುಬಲಿ ಸಿನಿಮಾ ನನಗೆ ಹಲವು ದೇಶಗಳಿಗೆ ಪ್ರಯಾಣ ಮಾಡಲು ಅವಕಾಶ ಮಾಡಿಕೊಟ್ಟಿತ್ತು. ಇದೀಗ ಪಾಕಿಸ್ತಾನಕ್ಕೆ ಹೋಗುವ ಅವಕಾಶ ಸಿಕ್ಕಿದೆ. ಥ್ಯಾಂಕ್ ಯೂ ಪಾಕಿಸ್ತಾನ ಚಲನಚಿತ್ರೋತ್ಸವ'' ಎಂದು ಟ್ವೀಟ್ ಮಾಡಿದ್ದಾರೆ.

'ಬಾಹುಬಲಿ ದಿ ಬಿಗಿನಿಂಗ್' ಮತ್ತು 'ಬಾಹುಬಲಿ ದಿ ಕನ್ ಕ್ಲೂಷನ್' ಎರಡು ಸಿನಿಮಾಗಳು ಪ್ರದರ್ಶನವಾಗಲಿದ್ದು, ನಿರ್ದೇಶಕ ರಾಜಮೌಳಿ ಚರ್ಚೆಯಲ್ಲೂ ಭಾಗಿಯಾಗಲಿದ್ದಾರೆ. ಮಾರ್ಚ್ 29 ರಿಂದು ನಡೆಯಲಿರುವ ಚಿತ್ರೋತ್ಸವ ಏಪ್ರಿಲ್ 1ಕ್ಕೆ ಮುಗಿಯಲಿದೆ.

ಪ್ರಭಾಸ್ ನಾಯಕನಾಗಿದ್ದ 'ಬಾಹುಬಲಿ' ಚಿತ್ರದಲ್ಲಿ ರಾಣಾ ದಗ್ಗುಬಾಟಿ, ರಮ್ಯಾ ಕೃಷ್ಣ, ಅನುಷ್ಕಾ ಶೆಟ್ಟಿ, ತಮನ್ನಾ, ಸತ್ಯರಾಜ್, ನಾಸೀರ್, ಸುದೀಪ್ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದರು.

'ಬಾಹುಬಲಿ' ಚಿತ್ರ ಸೇರಿದಂತೆ ಬಾಲಿವುಡ್ ನ ಡಿಯರ್ ಜಿಂದಗಿ, ಅಂಕೋ ದೇಖಿ, ಹಿಂದಿ ಮೀಡಿಯಂ, ಕಾದ್ವಿ ಹವಾ, ನೀಲ್ ಭತ್ತಿ ಸನ್ನತಾ, ಸಾಂಗ್ಸ್ ಆಫ್ ದ ಸ್ಕಾರ್ಪಿಯನ್ ಮತ್ತು ಮರಾಠಿ ಚಿತ್ರ 'ಸೈರಾಠ್' ಚಿತ್ರಗಳು ಪಾಕಿಸ್ತಾನ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.

English summary
SS Rajamouli will reach Pakistan's capital Karachi for the special screening of his two-part epic franchise Baahubali: The Beginning and Baahubali: The Conclusion at Pakistan International Film Festival (PIFF).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X