»   » 'ಬಾಹುಬಲಿ-2' ದಾಖಲೆಗಳ ಪಟ್ಟಿಗೆ ಹೊಸ ಸೇರ್ಪಡೆ.! ಏನದು.?

'ಬಾಹುಬಲಿ-2' ದಾಖಲೆಗಳ ಪಟ್ಟಿಗೆ ಹೊಸ ಸೇರ್ಪಡೆ.! ಏನದು.?

Posted By:
Subscribe to Filmibeat Kannada

ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ರೆಕಾರ್ಡ್ ಗಳ ಮೇಲೆ ರೆಕಾರ್ಡ್ ಗಳನ್ನು ಕ್ರಿಯೇಟ್ ಮಾಡಿರುವ ಪ್ರಭಾಸ್, ಅನುಷ್ಕಾ ಶೆಟ್ಟಿ ಅಭಿನಯದ ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಸಿನಿಮಾ ಇಂದು ಹೊಸ ದಾಖಲೆ ಸೃಷ್ಟಿಸಿದೆ.

'ಬಾಹುಬಲಿ-2' ಇಂದು ಭರ್ಜರಿ 50 ದಿನಗಳನ್ನು ಪೂರೈಸಿ, ಯಶಸ್ವಿ ಆಗಿ ಮುನ್ನುಗ್ಗುತ್ತಿದೆ. ಇಷ್ಟೇ ಆಗಿದ್ದರೆ, ಸುದ್ದಿ ಆಗುತ್ತಿರಲಿಲ್ಲ. ಭಾರತದಲ್ಲಿ ಬರೋಬ್ಬರಿ 1050 ಸೆಂಟರ್ ಗಳಲ್ಲಿ 'ಬಾಹುಬಲಿ-2' ಸಿನಿಮಾ 50 ದಿನಗಳನ್ನು ಪೂರೈಸಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಇದು ನೂತನ ದಾಖಲೆ.! ಮುಂದೆ ಓದಿರಿ...

ನ್ಯೂ ಆಲ್ ಟೈಮ್ ರೆಕಾರ್ಡ್

ಒಂದು ವಾರದಲ್ಲಿಯೇ ಸಿನಿಮಾಗಳು ಎತ್ತಂಗಡಿ ಆಗುತ್ತಿರುವ ಈಗಿನ ಕಾಲದಲ್ಲಿ, 'ಬಾಹುಬಲಿ-2' ಸಿನಿಮಾ ಐವತ್ತು ದಿನಗಳನ್ನೂ ಪೂರೈಸಿದೆ. ಅದು 1050 ಸೆಂಟರ್ ಗಳಲ್ಲಿ ಅಂದ್ರೆ ಖಂಡಿತ ಸುಮ್ನೆ ಮಾತಲ್ಲ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದು ನ್ಯೂ ಆಲ್ ಟೈಮ್ ರೆಕಾರ್ಡ್ ಎಂದು ವ್ಯಾಖ್ಯಾನ ಮಾಡಲಾಗುತ್ತಿದೆ.

ಹೊಸ ಟ್ರೈಲರ್ ನೋಡಿರಿ...

'ಬಾಹುಬಲಿ-2' ಸಿನಿಮಾ ಐವತ್ತು ದಿನಗಳನ್ನು ಪೂರೈಸಿರುವ ಸಂಭ್ರಮದಲ್ಲಿ ಸ್ಪೆಷಲ್ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಅದನ್ನ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...

ಮೊದಲ ಭಾರತೀಯ ಸಿನಿಮಾ

ಗಲ್ಲಪೆಟ್ಟಿಗೆಯಲ್ಲಿ ಸಾವಿರ ಕೋಟಿ ಗಡಿ ದಾಟಿದ ಮೊದಲ ಭಾರತೀಯ ಸಿನಿಮಾ ಎಂಬ ಖ್ಯಾತಿಗೆ 'ಬಾಹುಬಲಿ-2' ಪಾತ್ರವಾಗಿದೆ. ಸಾಲದಕ್ಕೆ, ಕಲೆಕ್ಷನ್ ಲೆಕ್ಕಾಚಾರದಲ್ಲಿಯೂ ಅನೇಕ ರೆಕಾರ್ಡ್ ಗಳಿಗೆ 'ಬಾಹುಬಲಿ-2' ಒಡೆಯ.!

'ಬಾಹುಬಲಿ-2' ಕುರಿತು...

ಪ್ರಭಾಸ್, ರಮ್ಯಾಕೃಷ್ಣ, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಸೇಡಿನ ಕಥಾಹಂದರ ಹೊಂದಿರುವ ಸಿನಿಮಾ. ಏಪ್ರಿಲ್ 28 ರಂದು 'ಬಾಹುಬಲಿ-2' ಬಿಡುಗಡೆಗೊಂಡಿತ್ತು.

English summary
Prabhas starrer 'Baahubali-2' completes 50 days in 1050 centres in India and creates 'New All time record'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada