For Quick Alerts
  ALLOW NOTIFICATIONS  
  For Daily Alerts

  'ಬಾಹುಬಲಿ' ಹೆಸರಿನಲ್ಲಿ ಕರ್ನಾಟಕ ಪ್ರೇಕ್ಷಕರಿಗೆ ಅನ್ಯಾಯ!

  By Bharath Kumar
  |

  'ಮಲ್ಟಿಪ್ಲೆಕ್ಷ್'ಗಳಲ್ಲಿ ಹಾಗೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಗರಿಷ್ಠ ಟಿಕೆಟ್ ದರ 200 ರೂಪಾಯಿ ನೀತಿಯನ್ನ ಸರ್ಕಾರ ಆದೇಶ ಮಾಡಿದೆ. ಅದರ ಪ್ರತಿ ಚಲನಚಿತ್ರ ವಾಣಿಜ್ಯ ಮಂಡಳಿ ಕೈಸೇರುತ್ತಿದ್ದಂತೆ ಕರ್ನಾಟದಲ್ಲಿ ಏಕರೂಪ ಟಿಕೆಟ್ ದರ ನೀತಿ ಜಾರಿಯಾಗಲಿದೆ. ಇದನ್ನ ಅರಿತಿರುವ ಚಿತ್ರಮಂದಿರಗಳು ಕರ್ನಾಟಕದಲ್ಲಿ ಪಕ್ಕಾ ಬಿಸ್ ನೆಸ್ ಲೆಕ್ಕಾಚಾರ ಮಾಡುತ್ತಿವೆ.

  ಏಪ್ರಿಲ್ 28ಕ್ಕೆ 'ಬಾಹುಬಲಿ' ತೆರೆಕಾಣುತ್ತೆ ಎನ್ನಲಾಗಿತ್ತು. ಆದ್ರೆ, ಬೆಂಗಳೂರು ಸೇರಿದಂತೆ ಹಲವು ಕಡೆ ಒಂದು ದಿನ ಮುಂಚೆಯೇ ಬಿಡುಗಡೆಯಾಗುತ್ತಿದೆ. ಇನ್ನು ಬೆಂಗಳೂರಿನಲ್ಲಿ 'ಬಾಹುಬಲಿ'ಯ ಟಿಕೆಟ್ ಬೆಲೆ ಗಗನಕ್ಕೇರಿದೆ. ಅತ್ತ ಆಂಧ್ರ, ತಮಿಳುನಾಡಿನಲ್ಲೂ ಕೂಡ ಈ ಮಟ್ಟದ ಡಿಮ್ಯಾಂಡ್ ಇಲ್ಲ.

  'ಬಾಹುಬಲಿ' ಚಿತ್ರದ ಬಿಡುಗಡೆ ಹಿನ್ನಲೆ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಹೇಗಿದೆ ಟಿಕೆಟ್ ದರ ಎಂದು ಮುಂದೆ ನೋಡಿ.....

  'ಬಾಹುಬಲಿ' ಚಿತ್ರಕ್ಕೆ 200 ಟಿಕೆಟ್ ದರ ಕಂಟಕ!

  'ಬಾಹುಬಲಿ' ಚಿತ್ರಕ್ಕೆ 200 ಟಿಕೆಟ್ ದರ ಕಂಟಕ!

  ಕರ್ನಾಟಕದಲ್ಲಿ ಏಕರೂಪ ಟಿಕೆಟ್ ದರ ನೀತಿ, 'ಬಾಹುಬಲಿ' ಚಿತ್ರಕ್ಕೆ ಕಂಟಕವಾಗಲಿದೆ ಎಂಬ ನಿರೀಕ್ಷೆ ಮಾಡಲಾಗಿತ್ತು. ಆದ್ರೆ, ಈ ನಿರೀಕ್ಷೆ ತಲೆ ಕೆಳಗಾಗಿದ್ದು, 'ಬಾಹುಬಲಿ' ಚಿತ್ರದ ವ್ಯವಹಾರ ಮತ್ತಷ್ಟು ಹೆಚ್ಚಾಗಿದೆ.[ಏಪ್ರಿಲ್ 28ರಿಂದ ಆಂಧ್ರ, ತೆಲಂಗಾಣ ಆಗಿ ಬದಲಾಗಲಿದೆ ಕನ್ನಡದ ಗಾಂಧಿನಗರ.!]

  ಒಂದು ದಿನ ಮುಂಚೆಯೇ ಚಿತ್ರ ರಿಲೀಸ್!

  ಒಂದು ದಿನ ಮುಂಚೆಯೇ ಚಿತ್ರ ರಿಲೀಸ್!

  ಇನ್ನು ಬೆಂಗಳೂರು, ಹೈದ್ರಾಬಾದ್ ಸೇರಿದಂತೆ ಹಲವು ಕಡೆ 'ಬಾಹುಬಲಿ' ಚಿತ್ರ ಒಂದು ದಿನ ಮುಂಚೆಯೇ ಬಿಡುಗಡೆಯಾಗುತ್ತಿದೆ. ಏಪ್ರಿಲ್ 28 ರಂದು ರಾತ್ರಿ 9.45ಕ್ಕೆ ಮೊದಲ ಶೋ ಆರಂಭವಾಗುತ್ತಿದೆ.[ಇಂದು ರಾತ್ರಿಯಿಂದಲೇ ಕರ್ನಾಟಕದಲ್ಲಿ 'ಬಾಹುಬಲಿ-2' ಪ್ರದರ್ಶನ: ಟಿಕೆಟ್ ಬೆಲೆ ಅಬ್ಬಬ್ಬಾ.!]

  'ಮಲ್ಟಿಪ್ಲೆಕ್ಸ್'ಗಳಲ್ಲಿ ಬುಕ್ಕಿಂಗ್ ವಿಸ್ತರಣೆ!

  'ಮಲ್ಟಿಪ್ಲೆಕ್ಸ್'ಗಳಲ್ಲಿ ಬುಕ್ಕಿಂಗ್ ವಿಸ್ತರಣೆ!

  200 ಟಿಕೆಟ್ ದರ ನಿಗದಿಯಾಗುವ ನಿರೀಕ್ಷೆಯಲ್ಲಿರುವ 'ಮಲ್ಟಿಪ್ಲೆಕ್ಸ್'ಗಳು ಆರಂಭದಲ್ಲಿ ಕೇವಲ ಒಂದು ದಿನಕ್ಕೆ ಮಾತ್ರ ಬುಕ್ಕಿಂಗ್ ಅವಕಾಶ ನೀಡಿತ್ತು. ಆದ್ರೆ, ಇದೀಗ, ಮುಂದಿನ ದಿನಗಳಿಗೂ ಬುಕ್ಕಿಂಗ್ ಅವಕಾಶ ಕೊಟ್ಟಿದ್ದು, ರಾಜಾರೋಷವಾಗಿ ಬೆಲೆ ಹೆಚ್ಚಿಸಿವೆ.[ಬೆಂಗಳೂರಿನಲ್ಲಿ 'ಬಾಹುಬಲಿ-2' ಚಿತ್ರಕ್ಕೆ ಡಿಮ್ಯಾಂಡ್ ಎಷ್ಟಿದೆ ಗೊತ್ತಾ..?]

  'ಮಲ್ಟಿಪ್ಲೆಕ್ಸ್'ನಲ್ಲಿ ಗಗನಕ್ಕೇರಿದ ಟಿಕೆಟ್ ದರ?

  'ಮಲ್ಟಿಪ್ಲೆಕ್ಸ್'ನಲ್ಲಿ ಗಗನಕ್ಕೇರಿದ ಟಿಕೆಟ್ ದರ?

  ಬೆಂಗಳೂರಿನ 'ಮಲ್ಟಿಪ್ಲೆಕ್ಸ್'ಗಳಲ್ಲಿ ಕನಿಷ್ಟ 500 ರೂಪಾಯಿಂದ ಶುರುವಾಗುವ ಟಿಕೆಟ್ ಬೆಲೆ ಗರಿಷ್ಟ 1400 ರೂಪಾಯಿವರೆಗೂ ನಿಗದಿಯಾಗಿದೆ. ಪಕ್ಕದ ರಾಜ್ಯಗಳಿಗೆ ಹೋಲಿಸಿಕೊಂಡ್ರೆ, ಬೆಂಗಳೂರಿನಲ್ಲಿ ಹತ್ತು ಪಟ್ಟು ಹೆಚ್ಚಾಗಿದೆ.

  ಅಲ್ಲಿ ಎಷ್ಟಿದೆ ಗೊತ್ತಾ!

  ಅಲ್ಲಿ ಎಷ್ಟಿದೆ ಗೊತ್ತಾ!

  ಆಂಧ್ರದಲ್ಲಿ 'ಬಾಹುಬಲಿ' ಚಿತ್ರದ ಟಿಕೆಟ್ ಕೇವಲ 30, 60, 80 ರೂಪಾಯಿಯಾಗಿದ್ರೆ, ಚೆನ್ನೈನಲ್ಲಿ 220, 120 ಹಾಗೂ 10 ರೂಪಾಯಿಗೂ ಟಿಕೆಟ್ ದೊರೆಯುತ್ತಿದೆ.[ಚೆನ್ನೈನಲ್ಲಿ ಕೇಳೋರೇ ಇಲ್ಲ.. ಬೆಂಗಳೂರಲ್ಲಿ 'ಬಾಹುಬಲಿ'ಯೇ ಎಲ್ಲಾ.!]

  ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು 'ಡೋಂಟ್ ಕೇರ್'!

  ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು 'ಡೋಂಟ್ ಕೇರ್'!

  200 ಟಿಕೆಟ್ ದರ ಕೇವಲ 'ಮಲ್ಟಿಪ್ಲೆಕ್ಷ್'ಗೆ ಮಾತ್ರವಲ್ಲ, ಸಿಂಗಲ್ ಸ್ಕ್ರೀನ್ ಗಳಿಗೂ ಅನ್ವಯವಾಗುತ್ತೆ ಎಂದು ಸಾರಾ ಗೋವಿಂದು ಈಗಾಗಲೇ ಹೇಳಿದ್ದಾರೆ. ಹೀಗಿದ್ದರೂ, ಏಕಪರದೆ ಚಿತ್ರಗಳು 'ಬಾಹುಬಲಿ' ಚಿತ್ರಕ್ಕಾಗಿ ಒಂದು ವಾರದ ಬುಕ್ಕಿಂಗ್ ಅವಕಾಶ ನೀಡಿದೆ. ಆಶ್ಚರ್ಯ ಅಂದ್ರೆ, ಸಾಮಾನ್ಯ ಚಿತ್ರಮಂದಿರಗಳಲ್ಲೂ 500, 600, ರೂಪಾಯಿವರೆಗೂ ಟಿಕೆಟ್ ಮಾರಾಟವಾಗುತ್ತಿದೆ.[ಏಪ್ರಿಲ್ 28ರಿಂದ ಆಂಧ್ರ, ತೆಲಂಗಾಣ ಆಗಿ ಬದಲಾಗಲಿದೆ ಕನ್ನಡದ ಗಾಂಧಿನಗರ.!]

  'ಮಲ್ಟಿಪ್ಲೆಕ್ಷ್'ಗಳಿಂಗಿಂತ ಏಕಪರದೆ ಚಿತ್ರಮಂದಿಗಳೇ ದುಬಾರಿ!

  'ಮಲ್ಟಿಪ್ಲೆಕ್ಷ್'ಗಳಿಂಗಿಂತ ಏಕಪರದೆ ಚಿತ್ರಮಂದಿಗಳೇ ದುಬಾರಿ!

  ಸರ್ಕಾರದ ಆದೇಶದ ನಡುವೆಯೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಇಷ್ಟೊಂದು ದೊಡ್ಡ ಬೆಲೆಗೆ ಟಿಕೆಟ್ ಮಾರಾಟ ಮಾಡುತ್ತಿರುವದು ನಿಜಕ್ಕೂ ಬೇಸರದ ಸಂಗತಿ. ಯಾವಗಲೂ 100 ರೂ ಬೆಲೆಗೆ ಟಿಕೆಟ್ ಮಾರುವ ಬೆಂಗಳೂರಿನ ಚಿತ್ರಮಂದಿರಗಳು ದಿಢೀರ್ ಅಂತ 500, 600 ರೂಗೆ ಹೆಚ್ಚಿಸಿದೆ.

  ನಾಳೆಯೇ 200 ರೂಪಾಯಿ ಟಿಕೆಟ್ ದರ ಜಾರಿಯಾದ್ರೆ!

  ನಾಳೆಯೇ 200 ರೂಪಾಯಿ ಟಿಕೆಟ್ ದರ ಜಾರಿಯಾದ್ರೆ!

  ಸಾರಾ ಗೋವಿಂದು ಅವರ ಪ್ರಕಾರ ಈಗಾಗಲೇ ಮುಖ್ಯಮಂತ್ರಿಗಳು ಸಹಿ ಮಾಡಿದ್ದಾರೆ. ಇನ್ನೇನು ವಾಣಿಜ್ಯ ಮಂಡಳಿಗೆ ನಾಳೆಯೊಳಗೆ ಸೇರಲಿದೆ ಎಂದಿದ್ದಾರೆ. ಸಾರಾ ಗೋವಿಂದು ಅವರ ಕೈಗೆ ಪ್ರತಿ ಸಿಗುತ್ತಿದ್ದಂತೆ ಹೊಸ ನೀತಿ ಜಾರಿಯಾಗುತ್ತಂತೆ. ಒಂದು ಪಕ್ಷ ನಾಳೆಯೇ ಈ ನೀತಿ ಜಾರಿಯಾದ್ರೆ, ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ ಗಳ ನಡೆಯೇನು ಎಂಬುದು ಪ್ರಶ್ನೆಯಾಗಿದೆ.

  English summary
  South Indian Biggest Movie Baahubali the conclusion Releasing all over india at Today Night (April 27th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X