Don't Miss!
- Automobiles
ವೇಗವಾಗಿ ಮುನ್ನುಗ್ಗುತ್ತಿವೆ ಹೀರೋ, ಹೋಂಡಾ... ಹಿಂದೆಯೇ ಬಂತು ಟಿವಿಎಸ್!
- News
World Cancer Day 2023: ವಿಶ್ವ ಕ್ಯಾನ್ಸರ್ ದಿನ- ನಿಮ್ಮ ಜೀವನಶೈಲಿಯಲ್ಲಿರಲಿ ಈ ಬದಲಾವಣೆಗಳು
- Technology
ನಿಮ್ಮ ಮೊಬೈಲ್ನಲ್ಲಿ ಹೀಗೆ ಮಾಡಿ, ಸುಲಭವಾಗಿ ತಿಂಗಳ ಆದಾಯ ಗಳಿಸಿ!
- Sports
ಭಾರತ vs ಆಸ್ಟ್ರೇಲಿಯಾ: ಸುಂದರ್ ಸೇರಿ ನಾಲ್ವರು ಸ್ಪಿನ್ನರ್ಗಳು ನೆಟ್ ಬೌಲರ್ಗಳಾಗಿ ತಂಡಕ್ಕೆ ಸೇರ್ಪಡೆ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಡಿಯೋ ಕಾಲ್ ಮಾಡಿ ಆತ್ಮಹತ್ಯೆ ಮಾಡಿಕೊಂಡ 'ಬಾಹುಬಲಿ' ನಟನ ಪತ್ನಿ
ತೆಲುಗು ಕಿರುತೆರೆ ನಟ ಮಧು ಪ್ರಕಾಶ್ ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದ್ರಾಬಾದ್ ನಲ್ಲಿ ನಡೆದಿದೆ. ಬಾಹುಬಲಿ ಸಿನಿಮಾದಲ್ಲಿ ಪೋಷಕ ನಟನಾಗಿ ನಟಿಸಿದ್ದ ಮಧು ಪ್ರಕಾಶ್, ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು.
ಕೌಟುಂಬಿಕ ಕಲಹದಿಂದ ಮನನೊಂದು ಮಧು ಪ್ರಕಾಶ್ ಅವರ ಪತ್ನಿ ಭಾರತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ವರದಿ ತಿಳಿಸಿದೆ. ಮತ್ತೊಂದೆಡೆ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಗಂಡನಿಗೆ ವಿಡಿಯೋ ಕಾಲ್ ಮಾಡಿದ್ದರು ಎಂದು ತಿಳಿದು ಬಂದಿದೆ.
ತಮಿಳು
ನಟಿ
ರಿಯಾಮಿಕಾ
ಆತ್ಮಹತ್ಯೆಗೆ
ನಿಜವಾದ
ಕಾರಣವೇನು?
ಮತ್ತೊಂದೆಡೆ ಮಧು ಪ್ರಕಾಶ್ ಮೇಲೆ ಗಂಭೀರ ಆರೋಪ ಮಾಡಿರುವ ಭಾರತಿ ಮನೆಯವರು, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಹೇಳುತ್ತಿದ್ದಾರೆ. ಮುಂದೆ ಓದಿ....

ಕೌಟುಂಬಿಕ ಕಲಹವೇ ಮುಖ್ಯ ಕಾರಣ
ಮಧು ಪ್ರಕಾಶ್ ಮತ್ತು ಭಾರತಿ ಅವರು 2015ರಲ್ಲಿ ವಿವಾಹವಾಗಿದ್ದರು. ಕಳೆದ ಎರಡು ವರ್ಷದಿಂದ ಇಬ್ಬರ ದಾಂಪತ್ಯದಲ್ಲಿ ವೈಮನಸ್ಸು ಮೂಡಿದೆಯಂತೆ. ಶೂಟಿಂಗ್, ಜಿಮ್ ಎಂಬ ಕಾರಣ ನೀಡಿ ಮಧು ಪ್ರಕಾಶ್ ಪತ್ನಿಯನ್ನ ನಿರ್ಲಕ್ಷಿಸುತ್ತಿದ್ದರಂತೆ. ಮನೆಗೆ ಬೇಗ ಬರ್ತಿರಲಿಲ್ಲವಂತೆ. ಇದರಿಂದ ತೀವ್ರವಾಗಿ ನೊಂದು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ತಮಿಳು
ನಟನ
ಪತ್ನಿ
ನೇಣಿಗೆ
ಶರಣು:
ಕಾರಣವೇನು.?

ವಿಡಿಯೋ ಕಾಲ್ ಮಾಡಿ ಎಚ್ಚರಿಕೆ
ಮಂಗಳವಾರ ಬೆಳಿಗ್ಗೆ ಮಧು ಪ್ರಕಾಶ್ ಜಿಮ್ ಗೆ ಹೋಗಿ, ಹಾಗೆ ಶೂಟಿಂಗ್ ಗೆ ಹೋಗುತ್ತೇನೆ ಎಂದು ತಿಳಿಸಿ ಹೊರಗೆ ಹೋದರಂತೆ. ನಂತರ ಪತ್ನಿ ಮಧು ಪ್ರಕಾಶ್ ಅವರಿಗೆ ವಿಡಿಯೋ ಕಾಲ್ ಮಾಡಿ, ತಾನು ಸಾಯುವುದಾಗಿ ಎಚ್ಚರಿಸಿದರಂತೆ. ಆದರೆ, ಇದನ್ನ ಗಂಭೀರವಾಗಿ ತೆಗೆದುಕೊಳ್ಳದ ಮಧು ನಿರ್ಲಕ್ಷ ಮಾಡಿದರು. ಬಳಿಕ ಸಂಜೆ 7.30ರ ಸಮಯಕ್ಕೆ ಮನೆಗೆ ಬಂದು ನೋಡಿದಾಗ ಪತ್ನಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ನಂತರ ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಬೆಂಗಾಲಿ
ನಟಿ
ಪಾಯಲ್
ಆತ್ಮಹತ್ಯೆಗೆ
ಮಾನಸಿಕ
ಖಿನ್ನತೆಯೇ
ಕಾರಣ?

ಅಕ್ರಮ ಸಂಬಂಧದ ಆರೋಪ
ಮಧು ಪ್ರಕಾಶ್ ಗೆ ಧಾರಾವಾಹಿ ನಟಿಯೊಬ್ಬರ ಜೊತೆ ಅಕ್ರಮ ಸಂಬಂಧ ಇದೆ. ಈ ವಿಷ್ಯ ಗೊತ್ತಾಗಿ ಮನೆಯಲ್ಲಿ ಪತಿ ಮತ್ತು ಪತ್ನಿ ನಡುವೆ ಯಾವಾಗಲೂ ಗಲಾಟೆ ನಡೆಯುತ್ತಿತ್ತು. ಇದರ ಪರಿಣಾಮ ಈಗ ಭಾರತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಮಹಿಳೆಯ ಪೋಷಕರು ಆರೋಪಿಸಿದ್ದಾರೆ.

ಯಾರು ಈ ಮಧು ಪ್ರಕಾಶ್?
ಕುಂಕುಮಪುವ್ವೆ ಧಾರಾವಾಹಿಯಲ್ಲಿ ಮಧು ಪ್ರಕಾಶ್ ನಟಿಸಿದ್ದಾರೆ. ಜೊತೆಗೆ ಬಾಹುಬಲಿ ಸಿನಿಮಾದಲ್ಲಿ ಸಣ್ಣದೊಂದು ಪಾತ್ರ ಮಾಡಿದ್ದರು. ಪತ್ನಿ ಹೈದ್ರಾಬಾದ್ ನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.