»   » ಕರ್ನಾಟಕದಲ್ಲೂ ಇತಿಹಾಸ ನಿರ್ಮಿಸಿದ 'ಬಾಹುಬಲಿ'

ಕರ್ನಾಟಕದಲ್ಲೂ ಇತಿಹಾಸ ನಿರ್ಮಿಸಿದ 'ಬಾಹುಬಲಿ'

Posted By:
Subscribe to Filmibeat Kannada

ಇಡೀ ಭಾರತದಾದ್ಯಂತ ಸೆನ್ಸೇಷನ್ ಹುಟ್ಟುಹಾಕಿರುವ ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರ ಬಿಡುಗಡೆಗೆ ರೆಡಿಯಾಗಿದೆ.

'ಬಾಹುಬಲಿ' ಚಿತ್ರದ ಕರ್ನಾಟಕ ವಿತರಣಾ ಹಕ್ಕುಗಳನ್ನು ದಾಖಲೆ ಮೊತ್ತಕ್ಕೆ ಮಾಜಿ ಮುಖ್ಯಮಂತ್ರಿ ಕಮ್ ನಿರ್ಮಾಪಕ ಎಚ್.ಡಿ.ಕುಮಾರಸ್ವಾಮಿ ಪಡೆದುಕೊಂಡಿದ್ದಾರೆ ಅಂತ ಗಾಂಧಿನಗರದಲ್ಲಿ ಗುಲ್ಲೆದ್ದಿತ್ತು. ಅದನ್ನೆಲ್ಲಾ ಎಚ್.ಡಿ.ಕೆ ಅಲ್ಲಗೆಳೆದಿದ್ದರು ಕೂಡ. ['ಬಾಹುಬಲಿ' ವಿತರಣಾ ಹಕ್ಕು ; ಎಚ್.ಡಿ.ಕೆ ಹೊಸ ಡೀಲ್.?]

'Baahubali' Distribution rights of Karnataka is sold for record price

ಈಗ ಅದೇ 'ಬಾಹುಬಲಿ' ಚಿತ್ರದ ವಿತರಣಾ ಹಕ್ಕುಗಳನ್ನ ಪಡೆದುಕೊಳ್ಳುವಲ್ಲಿ ಆರ್.ಎಸ್.ಪ್ರೊಡಕ್ಷನ್ಸ್ ಯಶಸ್ವಿ ಆಗಿದೆ. ನಿರ್ಮಾಪಕ ಕನಕಪುರ ಶ್ರೀನಿವಾಸ್ ಮತ್ತು ಕೆ.ಪಿ.ಶ್ರೀಕಾಂತ್, ಕರ್ನಾಟಕ ವಲಯದ 'ಬಾಹುಬಲಿ' ಡಿಸ್ಟ್ರಿಬ್ಯೂಷನ್ಸ್ ರೈಟ್ಸ್ ಪಡೆದುಕೊಂಡಿದ್ದಾರೆ. [ಗಾಸಿಪ್ ಪಂಡಿತರ ಬಾಯಿಗೆ ಬೀಗ ಹಾಕಿದ ನಿಖಿಲ್ ಗೌಡ]

ಅದು ಎಷ್ಟು ದುಡ್ಡು ಕೊಟ್ಟು ಅಂತ ಕೇಳಿ. ಬರೋಬ್ಬರಿ 20 ಕೋಟಿ ರೂಪಾಯಿ ನೀಡಿ 'ಬಾಹುಬಲಿ' ವಿತರಣಾ ಹಕ್ಕುಗಳನ್ನ ಗಿಟ್ಟಿಸಿದ್ದಾರೆ. ಪರಭಾಷಾ ಚಿತ್ರವೊಂದಕ್ಕೆ 20 ಕೋಟಿ ರೂಪಾಯಿ ನೀಡಿ, ಡಿಸ್ಟ್ರಿಬ್ಯೂಷನ್ ರೈಟ್ಸ್ ಪಡೆದುಕೊಂಡಿರುವುದು ಇದೇ ಮೊದಲು.! ಈ ಹಿಂದೆ ರಜನಿಕಾಂತ್ ಸಿನಿಮಾಗಳಿಗೂ ಇಷ್ಟು ದುಬಾರಿ ಮೊತ್ತ ಸಿಕ್ಕಿರಲಿಲ್ಲ. ಅಲ್ಲಿಗೆ, ಕರ್ನಾಟಕದಲ್ಲೂ 'ಬಾಹುಬಲಿ' ಇತಿಹಾಸ ನಿರ್ಮಿಸಿದ್ಹಂಗಾಯ್ತು. [ಮೈನವೀರೇಳಿಸುವ ಡೈಲಾಗ್ ನಲ್ಲಿ ಬಾಹುಬಲಿ ನ್ಯೂ ಟ್ರೈಲರ್]

'Baahubali' Distribution rights of Karnataka is sold for record price

ಪರಭಾಷಾ ಚಿತ್ರಗಳಿಗೆ ಕರ್ನಾಟಕದಲ್ಲಿ ಡಿಮ್ಯಾಂಡ್ ಇರುವುದು ನಿಜ. ಅಂತಹ ಚಿತ್ರಗಳಿಗೆ ಬಂಡವಾಳ ಹಾಕಿದರೆ, ಲಾಭ ಖಂಡಿತ ಅನ್ನುವ ಗ್ಯಾರೆಂಟಿ ಮೇಲೆ ಇಷ್ಟು ಹಣ ಸುರಿದಿದೆ ಆರ್.ಎಸ್.ಪ್ರೊಡಕ್ಷನ್ಸ್ ಸಂಸ್ಥೆ.

ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಬರುವ ಈ ಚಿತ್ರವನ್ನು ರಾಜ್ಯದಲ್ಲಿ ವಿತರಣೆ ಮಾಡುವ ಹಕ್ಕು ಇದೀಗ ಆರ್.ಎಸ್.ಪ್ರೊಡಕ್ಷನ್ಸ್ ಪಾಲಾಗಿದೆ. ಜುಲೈ 10 ರಂದು 'ಬಾಹುಬಲಿ' ರಿಲೀಸ್ ಆಗುತ್ತಿದೆ.

English summary
SS Rajamouli directorial 'Baahubali The Beginning's distribution rights for Karnataka region is sold for record price of Rs.20 crore. R.S.Productions has acquired the distribution rights. 'Baahubali' features Prabhas, Rana Daggubati, Anushka Shetty and Tamannaah in the lead roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada