twitter
    For Quick Alerts
    ALLOW NOTIFICATIONS  
    For Daily Alerts

    'ಬಾಹುಬಲಿ' ಅಭಿಮಾನಿಗಳ ಹುಚ್ಚು, ಅಚ್ಚು ಮೆಚ್ಚು

    By ಜೇಮ್ಸ್ ಮಾರ್ಟಿನ್
    |

    ಎಸ್. ಎಸ್. ರಾಜಮೌಳಿ ಎಂಬ ಅದ್ಭುತ ಕನಸುಗಾರನ 10ನೇ ಮಹೋನ್ನತ ಚಿತ್ರ ಮೂರು ವರ್ಷಗಳ ಪರಿಶ್ರಮಕ್ಕೆ ಬೆಲೆ ಸಿಕ್ಕಿದೆ. ವಿಶ್ವದೆಲ್ಲೆಡೆ 4 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಾಹುಬಲಿ ರಿಲೀಸ್ ಆಗಿದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣ ಪರಸ್ಪರ ವೈರತ್ವ ಮರೆತು ಸಿನಿಮಾವನ್ನು ಆಸ್ವಾದಿಸಿದ್ದಾರೆ.

    ಉಭಯ ರಾಜ್ಯಗಳಲ್ಲೂ ಶೇ.99ರಷ್ಟು ಥಿಯೇಟರ್ ಗಳಲ್ಲಿ ಬಾಹುಬಲಿ ತೆರೆ ಕಂಡಿದೆ. ಶಾಲಾ ಕಾಲೇಜು ಕಚೇರಿಗಳು ಅಘೋಷಿತ ಬಂದ್ ಆಚರಿಸುತ್ತಿವೆ. ಟಿಕೆಟ್ ಸಿಗದ ಕಾರಣ ಹಲವಾರು ಫ್ಯಾನ್ಸ್ ವಿಪರೀತವಾಗಿ ವರ್ತಿಸುತ್ತಿದ್ದಾರೆ. ಕರ್ನಾಟಕದಲ್ಲಿ ಸರಿ ಸುಮಾರು 150 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನ ಮಲ್ಟಿಪ್ಲೆಕ್ಸ್ ಗಳಲ್ಲೇ 35 ಸ್ಕ್ರೀನ್ ಗಳಲ್ಲಿ ದಾಖಲೆಯ ಪ್ರದರ್ಶನ ಭಾಗ್ಯ ಸಿಕ್ಕಿದೆ. [ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ಬಾಹುಬಲಿ]

    ರಾಯಚೂರು ಮೂಲದ ಎಸ್.ಎಸ್.ರಾಜಮೌಳಿ ನಿರ್ದೇಶನದ ತೆಲುಗು ಸಿನೆಮಾ ಬಾಹುಬಲಿಗೆ ರಾಯಚೂರಿನಲ್ಲಿ ಅದ್ಬುತ ಪ್ರತಿಕ್ರಿಯೆ ಸಿಕ್ಕಿದೆ. ಜೊತೆಗೆ ಟಿಕೆಟ್ ಸಿಗದ ಹಿನ್ನೆಲೆ ಇಲ್ಲಿನ ಪೂರ್ಣಿನಾ ಚಿತ್ರಮಂದಿರದ ಕಲ್ಲುತೂರಾಟ ಮಾಡಿದ ಹುಚ್ಚು ಅಭಿಮಾನಿಗಳಿಗೆ ಪೊಲೀಸರ ಲಾಠಿ ರುಚಿ ಕೂಡಾ ಸಿಕ್ಕಿದೆ. ಬಾಹುಬಲಿ ಚಿತ್ರದ ಬಗ್ಗೆ ಮಾರುಕಟ್ಟೆ ವಿಶ್ಲೇಷಕರು, ಅಭಿಮಾನಿಗಳು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಏನು ಹೇಳುತ್ತಿದ್ದಾರೆ ನೋಡೋಣ ಬನ್ನಿ..

    ಬಹು ತಾರಾಗಣವಿದ್ದರೂ ಎಲ್ಲರಿಗೂ ಬೆಲೆ ಸಿಕ್ಕಿದೆ.

    ಬಹು ತಾರಾಗಣವಿದ್ದರೂ ಎಲ್ಲರಿಗೂ ಬೆಲೆ ಸಿಕ್ಕಿದೆ.

    ರೆಬೆಲ್ ಸ್ಟಾರ್ ಪ್ರಭಾಸ್, ರಾಣಾ ದಗ್ಗುಭಾತಿ, ಅನುಷ್ಕಾ ಶೆಟ್ಟಿ, ತಮನ್ನಾ, ರಮ್ಯಕೃಷ್ಣ, ನಾಸಿರ್, ಕಿಚ್ಚ ಸುದೀಪ, ಸತ್ಯರಾಜ್, ಸುಬ್ಬರಾಜು, ಭರಣಿ, ಅಡವಿ ಶೇಷ್ ಮುಂತಾದವರಿರುವ ಈ ಚಿತ್ರಕ್ಕೆ ಎಂಎಂ ಕೀರವಾಣಿ ಸಂಗೀತ, ಕೆಕೆ ಸೆಂಥಿಲ್ ಕುಮಾರ್ ಸಿನಿಮಾಟೋಗ್ರಾಫಿ, ರಾಜಮೌಳಿ ಅವರ ತಂದೆ ವಿ ವಿಜಯೇಂದ್ರ ಪ್ರಸಾದ್ ಅವರ ಕಥೆ ಇದೆ.

    ಬಾಹುಬಲಿ ಕನ್ನಡಿಗರ ಬಾಂಧವ್ಯ

    ಬಾಹುಬಲಿ ಕನ್ನಡಿಗರ ಬಾಂಧವ್ಯ

    ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಅಮರೇಶ್ವರ ಟೆಂಟ್ ಎಸ್ ಎಸ್ ರಾಜಮೌಳಿ. ಇವರ ತಂದೆ ವಿಜಯೇಂದ್ರ ಪ್ರಸಾದ್ ಅವರೇ ರಾಜಮೌಳಿಗೆ ಮೊದಲ ಗುರು. ಚಿಕ್ಕಪ್ಪ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಗಂಗಾವತಿಯವರು. ನಟಿ ಅನುಷ್ಕಾ ಶೆಟ್ಟಿ ಮಂಗಳೂರು ಕಮ್ ಬೆಂಗಳೂರಿನವರು, ನಟ ಸುದೀಪ್ ಬಗ್ಗೆ ಹೇಳಬೇಕಾಗಿಲ್ಲ ‘ಬಾಹುಬಲಿ' ಆಡಿಯೋ ಹಕ್ಕು ಖರೀದಿಸಿದ್ದು ಕರ್ನಾಟಕದ ಲಹರಿ ಸಂಸ್ಥೆ. ಆಂಧ್ರದ ಕರ್ನೂಲ್ ಹಾಗೂ ಅನಂತಪುರ ಜಿಲ್ಲೆಗಳಲ್ಲಿ ಸಿನಿಮಾ ಹಂಚಿಕೆ ಮಾಡುತ್ತಿರುವುದು ಕನ್ನಡಿಗರಾದ ಕನಕಪುರ ಶ್ರೀನಿವಾಸ್ ಮತ್ತು ಕೆ.ಪಿ.ಶ್ರೀಕಾಂತ್.

    #BaahubaliStorm ಟ್ರೆಂಡಿಂಗ್

    ಟ್ವಿಟ್ಟರ್ ನಲ್ಲಿ #BaahubaliStorm ಟ್ರೆಂಡಿಂಗ್

    ಚಿತ್ರ ನೋಡಿ ಮಜಾ ಬಂತು ಎಂದ ಹಿಂದಿಭಾಷಿಗರು

    ಬಾಹುಬಲಿ ಚಿತ್ರ ನೋಡಿ ಮಜಾ ಬಂತು ಎಂದ ಹಿಂದಿಭಾಷಿಗರು.

    ಭಾರತ ಸಿನಿಮಾರಂಗ ಮಹೋನ್ನತ ಚಿತ್ರ

    ಭಾರತ ಸಿನಿಮಾರಂಗ ಮಹೋನ್ನತ ಚಿತ್ರ ಎಂದು ಮಾರುಕಟ್ಟೆ ತಜ್ಞ ತರಣ್ ಆದರ್ಶ್ ವಿಮರ್ಶೆ

    ವಿಶ್ವದೆಲ್ಲೆಡೆ ಏಕಕಾಲಕ್ಕೆ ತೆರೆ ಕಂಡಿದೆ.

    ಕನ್ನಡ ಬಿಟ್ಟು ದಕ್ಷಿಣದ ತೆಲುಗು, ತಮಿಳು, ಮಲಯಾಳಂನಲ್ಲಿ ಹಾಗೂ ಹಿಂದಿ ಭಾಷೆಯಲ್ಲಿ ಬಾಹುಬಲಿ ಚಿತ್ರದ ಮೊದಲ ಭಾಗ ಜುಲೈ 10ರಂದು ವಿಶ್ವದೆಲ್ಲೆಡೆ ಏಕಕಾಲಕ್ಕೆ ತೆರೆ ಕಂಡಿದೆ.

    ಬೇರೆ ಬೇರೆ ದೇಶ, ಬೇರೆ ಭಾಷೆಗಳಲ್ಲೂ

    ಬೇರೆ ಬೇರೆ ದೇಶ, ಬೇರೆ ಭಾಷೆಗಳಲ್ಲೂ ಚಿತ್ರದ ಬಗ್ಗೆ ಕ್ರೇಜ್ ಹುಟ್ಟುಕೊಂಡಿದೆ.

    English summary
    WHOA! the big day is finally here. The first ever screening of Baahubali is over and the reports from early shows have been pouring in. Here are the Twitter reactions and First day first show craze.
    Friday, July 10, 2015, 13:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X