For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬದ ದಿನ 'ಬ್ಯಾಡ್ ಮ್ಯಾನರ್ಸ್' ಆಗಿ ಬಂದ ಅಭಿಷೇಕ್

  |

  ಸ್ಯಾಂಡಲ್ ವುಡ್ ನಟ, ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 27ನೇ ವಸಂತಕ್ಕೆ ಕಾಲಿಟ್ಟಿರುವ ಅಭಿಷೇಕ್ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕಳೆದ ವರ್ಷವೂ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಅಭಿಷೇಕ್ ಈ ವರ್ಷ ಕೊರೊನಾ ಹಾವಳಿಯ ಪರಿಣಾಮ ಸಿಂಪಲ್ ಆಗಿ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ.

  Abhishek Ambarish ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ಕೊಟ್ಟ ದುನಿಯಾ ಸೂರಿ | Bad Manners | Oneindia Kannada

  ವಿಶೇಷ ಅಂದರೆ ಈ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅಭಿಷೇಕ್ 'ಬ್ಯಾಡ್ ಮ್ಯಾನರ್ಸ್' ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಭಿಷೇಕ್ ಅಭಿನಯದ ಬಹುನಿರೀಕ್ಷೆಯ 'ಬ್ಯಾಡ್ ಮ್ಯಾನರ್ಸ್' ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದೆ.

  'ಎಣ್ಣೆ ಹೊಡೀತೀರಾ?' ಅಭಿಮಾನಿಯ ಪ್ರಶ್ನೆಗೆ ಅಭಿಷೇಕ್ ಅಂಬರೀಶ್ ಉತ್ತರ'ಎಣ್ಣೆ ಹೊಡೀತೀರಾ?' ಅಭಿಮಾನಿಯ ಪ್ರಶ್ನೆಗೆ ಅಭಿಷೇಕ್ ಅಂಬರೀಶ್ ಉತ್ತರ

  ಅಭಿಷೇಕ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಅಂಬಿ ಪುತ್ರ ಈ ಬಾರಿ ಮಾಸ್ ಲುಕ್ ನಲ್ಲಿ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಅಂದರೆ ಲಾಕ್ ಡೌನ್ ಸಮಯದಲ್ಲಿ ಫಸ್ಟ್ ಲುಕ್ ರಿಲೀಸ್ ಮಾಡಲಾಗಿತ್ತು ಇದೀಗ ಹುಟ್ಟುಹಬ್ಬದ ಪ್ರಯುಕ್ತ ಪುಟ್ಟ ಟೀಸರ್ ಬಿಡುಗಡೆ ಮಾಡಲಾಗಿದೆ.

  ಅಭಿಷೇಕ್ ವಿಭಿನ್ನ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಂದ್ಹಾಗೆ ಬ್ಯಾಡ್ ಮ್ಯಾನರ್ಸ್ ನಿರ್ದೇಶಕ ಸುಕ್ಕಾ ಸೂರಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಬಳಿಕ ಸೂರಿ ನಿರ್ದೇಶನ ಮಾಡುತ್ತಿರುವ ಚಿತ್ರವಿದು. ಅಭಿಷೇಕ್ ಮತ್ತು ಸೂರಿ ಕಾಂಬಿನೇಷನ್ ನ 'ಬ್ಯಾಡ್ ಮ್ಯಾನರ್ಸ್' ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

  ವಿಶೇಷ ಅಂದರೆ ಸೂರಿ ಅವರ 'ಪಾಪ್ ಕಾರ್ನ್ ಮಂಕಿ ಟೈಗರ್‌'ನಲ್ಲಿ ಕೆಲಸ ಮಾಡಿದ್ದ ತಂಡವೇ ಇಲ್ಲಿಯೂ ಕೆಲಸ ಮಾಡಲಿದೆ. ಸ್ಟುಡಿಯೋ 18 ಬ್ಯಾನರ್ ಅಡಿ ಸುಧೀರ್ ಕೆಎಂ ನಿರ್ಮಾಣ ಮಾಡುತ್ತಿದ್ದಾರೆ. ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ. ಶೇಖರ್ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ ಇರಲಿದೆ. ದುನಿಯಾ ಸೂರಿ ಜತೆಗೂಡಿ ಅಮೃತ್ ಭಾರ್ಗವ್ ಕಥೆ ಹಾಗೂ ಚಿತ್ರಕಥೆ ಕೆಲಸ ನಿರ್ವಹಿಸುತ್ತಿದ್ದಾರೆ. ಉಳಿದಂತೆ ಚಿತ್ರದ ನಾಯಕಿ, ವಿಲನ್ ಹಾಗೂ ಇತರ ಕಲಾವಿದರ ಆಯ್ಕೆ ಬಹಿರಂಗವಾಗಿಲ್ಲ. ಅಭಿಷೇಕ್ ಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  English summary
  Abhishek Ambareesh starrer Bad Manners movie promo release for occasion of his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X