»   » ಕರ್ನಾಟಕದಲ್ಲಿ 'ಬಾಹುಬಲಿ 2' ಬಿಡುಗಡೆ, ಬಂದ್ ವಾಪಸ್: ವಾಟಾಳ್ ನಾಗರಾಜ್ ಸ್ಪಷ್ಟನೆ

ಕರ್ನಾಟಕದಲ್ಲಿ 'ಬಾಹುಬಲಿ 2' ಬಿಡುಗಡೆ, ಬಂದ್ ವಾಪಸ್: ವಾಟಾಳ್ ನಾಗರಾಜ್ ಸ್ಪಷ್ಟನೆ

Posted By:
Subscribe to Filmibeat Kannada

ಕರ್ನಾಟಕದಲ್ಲಿ 'ಬಾಹುಬಲಿ-2' ಚಿತ್ರವನ್ನ ಬಿಡುಗಡೆ ಮಾಡುವುದಕ್ಕೆ ಕನ್ನಡ ಹೋರಾಟಗಾರರು ಸಮ್ಮತಿಸಿದ್ದು, ಏಫ್ರಿಲ್ 28 ರಂದು ಕರೆ ನೀಡಲಾಗಿದ್ದ 'ಬೆಂಗಳೂರು ಬಂದ್' ಹಿಂಪಡೆಯಲಾಗಿದೆ.

ಈ ಕುರಿತು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾರಾ ಗೋವಿಂದು ಜಂಟಿ ಸುದ್ದಿಗೋಷ್ಟಿ ನಡೆಸಿದ್ದು, ''ನಟ ಸತ್ಯರಾಜ್ ಬಹಿರಂಗವಾಗಿ ಕ್ಷಮಾಪಣೆ ಕೇಳಬೇಕಿತ್ತು. ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬಾಹುಬಲಿ ಸಿನಿಮಾ ಬಿಡುಗಡೆಯಾಗುತ್ತೆ. ಬಾಹುಬಲಿ ಚಿತ್ರಕ್ಕೆ ಅಥವಾ ಬಾಹುಬಲಿ ನಿರ್ದೇಶಕರಿಗೆ ಯಾವುದೇ ಅಡ್ಡಿಯಿಲ್ಲ. ಬಂದ್ ಹಿಂಪಡೆಯಲಾಗಿದೆ'' ಎಂದು ತಿಳಿಸಿದ್ದಾರೆ.[ಕನ್ನಡಿಗರನ್ನ ಉದ್ದೇಶಿಸಿ ಸತ್ಯರಾಜ್ ಮಾಡಿದ ತಮಿಳು ಭಾಷಣದಲ್ಲಿ ಏನಿದೆ.?]

Bahubali 2 Releasing in Karnataka Says Vatal Nagaraj

ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ತಮಿಳು ನಟ ಸತ್ಯರಾಜ್ ಅವರ ಹೇಳಿಕೆಯನ್ನ ಖಂಡಿಸಿ ಕರ್ನಾಟಕದಲ್ಲಿ 'ಬಾಹುಬಲಿ-2' ಚಿತ್ರವನ್ನ ಬಿಡುಗಡೆ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಹೋರಾಟ ಮಾಡುತ್ತಿದ್ದರು. ನಿನ್ನೆ ಏಪ್ರಿಲ್ 21 ತಮಿಳು ನಟ ಸತ್ಯರಾಜ್ ಬಹಿರಂಗವಾಗಿ ವಿಡಿಯೋ ಮೂಲಕ ವಿಷಾದ ವ್ಯಕ್ತಪಡಿಸಿರುವ ಹಿನ್ನಲೆ ಚಿತ್ರವನ್ನ ಬಿಡುಗಡೆ ಮಾಡಲು ನಿರ್ಧರಿಸವುದಾಗಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಸ್ವಷ್ಟಪಡಿಸಿದ್ದಾರೆ.

English summary
Kannada Leader Vatal Nagraj and Karnataka Film Chamber President Sa Ra Govindu Adressing PressMeet About Baahubali 2 Release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada