»   » ಅಲಕ್ ಬುಲಕ್ 'ಬಹುಪರಾಕ್': ಕಿಟ್ಟಿ ಝಲಕ್

ಅಲಕ್ ಬುಲಕ್ 'ಬಹುಪರಾಕ್': ಕಿಟ್ಟಿ ಝಲಕ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಬಹುನಿರೀಕ್ಷೆ ಹುಟ್ಟಿಸಿರುವ ಚಿತ್ರ ಬಹುಪರಾಕ್. ಸರಿಸುಮಾರು ಈ ಚಿತ್ರ 150 ಚಿತ್ರಮಂದಿರಗಳಲ್ಲಿ ಇದೇ ಶುಕ್ರವಾರ (ಜು.25) ತೆರೆಕಾಣುತ್ತಿದೆ. ಚಿತ್ರದಲ್ಲಿ ಶ್ರೀನಗಕಿಟ್ಟಿ ಹಾಗೂ ಮೇಘನಾ ರಾಜ್ ಮುಖ್ಯ ಪಾತ್ರಧಾರಿಗಳು.

ಈಗಾಗಲೆ ಮೇಘನಾ ರಾಜ್ ಅವರು ತಮ್ಮ ಪಾತ್ರ ಹಾಗೂ ಚಿತ್ರದ ಬಗೆಗಿನ ಅನುಭವಗಳನ್ನು ಒನ್ಇಂಡಿಯಾ ಜೊತೆ ಹಂಚಿಕೊಂಡಿದ್ದನ್ನು ಓದಿರುತ್ತೀರಿ. ಮೇಘನಾ ಅವರದು ಎರಡು ಶೇಡ್ ಗಳುಳ್ಳ ಪಾತ್ರವಾದರೆ, ಕಿಟ್ಟಿ ಅವರದು ಮೂರು ಶೇಡ್ ಗಳುಳ್ಳ ಪಾತ್ರ. ['ಬಹುಪರಾಕ್'ನ ಸ್ನೇಹ ಮತ್ತು ಪ್ರೀತಿ ಮೇಘನಾ ರಾಜ್]

ಕಿಟ್ಟಿ ಅವರ ಮಟ್ಟಿಗೆ ಇದೊಂದು ತುಂಬಾ ಸವಾಲಿನ ಪಾತ್ರ. ತಮ್ಮ ವೃತ್ತಿ ಬದುಕಿನಲ್ಲಿ ಇದು 25ನೇ ಚಿತ್ರವಾಗಿದ್ದರೂ ಇದುವರೆಗೂ ಮಾಡಿರದಂತಹ, ಮುಂದೆ ಮಾಡುತ್ತೇನೋ ಇಲ್ಲವೋ ಎಂಬಂತಹ ಪಾತ್ರ. ಒನ್ಇಂಡಿಯಾ ಜೊತೆಗೆ ಶ್ರೀನರಕಿಟ್ಟಿ ಸಂದರ್ಶನದ ಆಯ್ದ ಭಾಗ ಸ್ಲೈಡ್ ನಲ್ಲಿ ಓದಿ.

ಈ ಹಿಂದಿನ ನಿಮ್ಮ ಚಿತ್ರಳಿಗೆ ಹೋಲಿಸಿದರೆ ಬಹುಪರಾಕ್ ಹೇಗೆ ಭಿನ್ನ?

ಬಹುಮುಖ್ಯವಾಗಿ ಕಥೆ ತುಂಬಾ ಇಷ್ಟವಾಯಿತು. ಸಾಮಾನ್ಯವಾಗಿ ಯಾವುದೇ ಚಿತ್ರದಲ್ಲಿ ಒಂದು ಅಥವಾ ಎರಡು ಶೇಡ್ ಗಳುಳ್ಳ ಪಾತ್ರಗಳಿರುತ್ತವೆ. ಆದರೆ ಇಲ್ಲಿ ಮೂರು ಶೇಡ್ ಗಳುಳ್ಳ ಪಾತ್ರ ನನ್ನದು. ಇಪ್ಪತ್ತು, ಇಪ್ಪತ್ತೈದರಿಂದ ಹಿಡಿದು ಎಪ್ಪತ್ತೈದರವರೆಗಿನ ಜರ್ನಿ ನೋಡಬಹುದು. ಬದುಕಿನಲ್ಲಿ ಪ್ರತಿಯೊಂದನ್ನೂ ಗೆಲ್ಲಲೇಬೇಕು. ಹೇಗಾದರೂ ಆಗಲಿ ಗೆಲ್ಲಲೇಬೇಕು ಎಂಬ ಉದ್ದೇಶ ಇಟ್ಟುಕೊಂಡಿರುವಂತಹ ಪಾತ್ರ.

ಗೆಲುವೇ ಮುಖ್ಯವಾದಾಗ ಪ್ರೀತಿ, ಸ್ನೇಹಕ್ಕೆಲ್ಲಿದೆ ಜಾಗ

ಪ್ರೀತಿಯಲ್ಲಿ ಅವನು ಗೆಲ್ತಾನೆ. ಅಂಡರ್ ವರ್ಲ್ಡ್ ಆಕ್ಟಿವಿಟೀಸ್ ನಲ್ಲೂ ಅವನೇ ಗೆಲ್ತಾನೆ. ರಾಜಕೀಯವಾಗಿಯೂ ಗೆಲ್ತಾನೆ. ಈ ಎಲ್ಲಾ ಗೆಲವುಗಳನ್ನು ಹೇಗೆ ಸಾಧಿಸುತ್ತಾನೆ. ಯಾವ ದಾರಿಯಲ್ಲಿ ಹೋಗುತ್ತಾನೆ ಎಂಬುದೇ ಚಿತ್ರದ ಕಥಾವಸ್ತು.

ಸತ್ಯದ ಅರಿವಾದಾಗ ಅವನ ಪರಿಸ್ಥಿತಿ ಏನಾಗುತ್ತದೆ

ತನ್ನ ಗೆಲುವಿಗಾಗಿ ಪ್ರೀತಿ ಪಾತ್ರರನ್ನು, ಸ್ನೇಹಿತರನ್ನು ಎಲ್ಲರನ್ನೂ ಮೋಸ ಮಾಡಿಕೊಂಡು ಬಂದಾಗ. ಜೊತೆಗೆ ಹಣ ಇರುತ್ತದೆ ಎಲ್ಲವೂ ಇರುತ್ತದೆ. ಆದರೆ ಪ್ರೀತಿ ಪಾತ್ರರು ಜೊತೆಗೆ ಇಲ್ಲದಂತಹ ಸನ್ನಿವೇಶ ಸೃಷ್ಟಿಯಾಗುತ್ತದೆ. ಆಗ ಅವನು ಮುಂದಕ್ಕೆ ಹೋಗಲು ಮನಸ್ಸು ಒಪ್ಪಲ್ಲ, ಹಿಂದಕ್ಕೆ ಹೋಗಲು ವಯಸ್ಸು ಒಪ್ಪಲ್ಲ ಎಂಬಂತಹ ಸ್ಥಿತಿಯಲ್ಲಿರುತ್ತಾನೆ.

ಈ ರೀತಿಯ ಪಾತ್ರ ಸಿಕ್ಕಿಲ್ಲ, ಸಿಗುತ್ತದೆ ಎಂಬ ನಂಬಿಕೆ ಇಲ್ಲ

ಬಹುಶಃ ಇದುವರೆಗೂ ನಾನು ನೋಡಿದಂತಹ ಕನ್ನಡ, ಹಿಂದಿಯಲ್ಲಿ ಈ ರೀತಿಯ ಅಂತರಾರ್ಥ, ಸನ್ನಿವೇಶ ಇರುವಂತಹ ಚಿತ್ರ ಬಂದಿಲ್ಲ. ಇದುವರೆಗೂ ನನಗೆ ಈ ರೀತಿಯ ಪಾತ್ರ ಸಿಕ್ಕಿಲ್ಲ, ಮುಂದೆ ಸಿಗುತ್ತದೆ ಎಂಬ ನಂಬಿಕೆ ನನಗಿಲ್ಲ. ಆ ರೀತಿಯ ಒಂದು ಪಾತ್ರ ತಮ್ಮದು.

ಮೂರು ಶೇಡ್ ಗಳುಳ್ಳ ಪಾತ್ರದಲ್ಲಿ ನಿಮಗೆ ಇಷ್ಟವಾದ ಛಾಯೆ ಯಾವುದು?

ಮೂರೂ ಪಾತ್ರಗಳನ್ನು ತುಂಬಾ ನಯನಾಜೂಕಾಗಿ ಮಾಡಿದ್ದೇವೆ. ಮೂರು ಪಾತ್ರಗಳನ್ನು ಪರಿಣಾಮಕಾರಿಯಾಗಿ ತೆರೆಗೆ ತಂದಿದ್ದೇವೆ. ಪ್ರತಿ ಶೇಡ್ ನಲ್ಲೂ ಸ್ನೇಹ, ಪ್ರೀತಿ ಸಿಗುತ್ತದೆ. ಅದು ಸ್ನೇಹಿತ, ಪ್ರೇಯಸಿ, ಹೆಂಡತಿ ತಂದೆ ತಾಯಿ ರೂಪದಲ್ಲಾಗಬಹುದು. ಆದರೆ ಅವನಿಗೆ ರೀತಿಯ ಒಂದು ಸಂಬಂಧ ಕಳೆದು ಹೋದರೂ ಪರ್ವಾಗಿಲ್ಲ ತಾನು ಗೆಲ್ಲಲೇಬೇಕೆಂಬ ಹಠ ಇರುತ್ತದೆ.

ಯಾವ ಪಾತ್ರ ಇಷ್ಟವಾಯಿತು, ಯಾವುದು ಕಷ್ಟವಾಯಿತು?

ಯಾವುದನ್ನೂ ಕಷ್ಟಪಟ್ಟು ಇಷ್ಟಪಟ್ಟು ಮಾಡಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲ. ಮೂರು ಪಾತ್ರಗಳನ್ನು ಕಥೆಗೆ ತಕ್ಕಂತೆ ನಿರ್ವಹಿಸಿದ್ದೇನೆ. ಕೊನೆಯ ಎರಡು ಭಾಗದ ಪಾತ್ರಗಳಿಗೆ ಹತ್ತು ಹನ್ನೆರೆಡು ಕೆಜಿ ತೂಕ ಜಾಸ್ತಿ ಮಾಡಿಕೊಂಡಿದ್ದೆ. ಲವರ್ ಬಾಯ್ ಪಾತ್ರಕ್ಕಾಗಿ ತೂಕ ಕಡಿಮೆ ಮಾಡಿಕೊಂಡಿದ್ದೆ.

ಭಿನ್ನ ಛಾಯೆಗಳು ನಿಮಗೆ ಬೇರೆಯದೇ ಅನುಭವ ಕೊಡುತ್ತವೆ

ಈ ಚಿತ್ರದಲ್ಲಿ ತುಂಬಾ ಕಡಿಮೆ ಪಾತ್ರಗಳಿವೆ. ಆದರೆ ಚಿತ್ರ ನೋಡಿದಾಗ ಭಿನ್ನ ಛಾಯೆಗಳು ನಿಮಗೆ ಬೇರೆಯದೇ ಅನುಭವ ಕೊಡುತ್ತವೆ. ಮೇಘನಾ ಅವರದು ಸ್ನೇಹಾ ಮತ್ತು ಪ್ರೀತಿ ಎಂಬ ಡಬಲ್ ರೋಲ್. ಸ್ನೇಹಕ್ಕೆ ಯಾವತ್ತು ನಕರಾಗಳು ಇರಲ್ಲ, ಪ್ರೀತಿಗೆ ಒಂಚೂರು ಬೇಡಿಕೆ ಇರುತ್ತದೆ.

ಸುನಿಗೆ ಥ್ಯಾಂಕ್ಸ್ ಹೇಳಲೇಬೇಕು

ಈ ಡಿಫರೆಂಟ್ ಪಾತ್ರಗಳನ್ನು ಮಾಡಿದಾಗ ನನಗೆ ಏನೇನು ಅನ್ನಿಸಿರಲಿಲ್ಲ. ಆದರೆ ಆನ್ ಸ್ಕ್ರೀನ್ ಮೇಲೆ ನೋಡಿದಾಗ ನನಗೆ ನಾನೇ ಚಕಿತನಾದೆ. ಮೇಘನಾ ಅವರ ಪಾತ್ರದ ಭಿನ್ನತೆ ತೆರೆಯ ಮೇಲೆ ನೋಡಿದರೆ ನಿಮಗೇ ಗೊತ್ತಾಗುತ್ತದೆ. ಈ ರೀತಿಯ ಒಂದು ಪಾತ್ರವನ್ನು ಸೃಷ್ಟಿ ಮಾಡಿದ ಸುನಿಗೆ ಥ್ಯಾಂಕ್ಸ್ ಹೇಳಲೇಬೇಕು. ಆ ರೀತಿಯ ಪಾತ್ರವನ್ನು ನಾನು ಮಾಡ್ತೀನಿ ಎಂದು ಅವರು ಅಂದುಕೊಂಡಿದ್ದಕ್ಕೆ ನಾನು ಚಿರಋಣಿ ಎಂದರು.

ಚಿತ್ರದ ಹಾಡುಗಳು ಮಾಸ್ ಆಡಿಯನ್ಸ್ ಗೆ ತಲುಪಿವೆಯೇ?

ಎಫ್ ಎಂ ಹಾವಳಿಯಿಂದಲೇ ಈ ರೀತಿಯ ಮಾಸ್, ಕ್ಲಾಸ್ ಹಾಡುಗಳು ಎಂದು ಭೇದಭಾವ ತಲೆದೋರಿರುವುದು. ಇಲ್ಲಿಂದ ಹಾಡುಗಳನ್ನು ಬಾಂಬೆಗೆ ಕಳುಹಿಸುತ್ತಾರೆ. ಅಲ್ಲಿ ಭಾಷೆ ಗೊತ್ತಿಲ್ಲದವನೊಬ್ಬ ಇದು ರೇಡಿಯೋ ಸಾಂಗ್ ಎಂದು ಆಯ್ಕೆ ಮಾಡುತ್ತಾನೆ. ರೇಡಿಯೋದಲ್ಲಿ ಆ ಹಾಡು ಓಡುತ್ತಲೇ ಇರುತ್ತದೆ. ಜನರಿಗೆ ಬೇರೆ ಹಾಡುಗಳು ಕೇಳುವ ಸೌಭಾಗ್ಯ ಸಿಗಲ್ಲ.

ಇಂದಿನ ಹಾಡುಗಳ ಅಭಿರುಚಿ ಬದಲಾಗಿದೆ

ಇಂದಿನ ಹಾಡುಗಳ ಅಭಿರುಚಿ ಬದಲಾಗಿದೆ. ಈಗ ರೇಡಿಯೋ ಕೇಳ್ತಾರೆ, ಇಲ್ಲಾ ಡೌನ್ ಲೋಡ್ ಮಾಡ್ತಾರೆ. ಈ ಜನರೇಷನ್ ಗೆ ಮಾಧುರ್ಯದ ಅವಶ್ಯಕತೆನೇ ಇಲ್ಲ. ಮೂರು ದಿನ ಕೇಳಿದರೆ ಇನ್ನೊಂದು ಹಾಡು ಬರುತ್ತದೆ. ಅದಕ್ಕೇ ಇಂದಿಗೂ ನಾವು ರೆಟ್ರೋ ಹಾಡುಗಳನ್ನೇ ಇಷ್ಟಪಡುವುದು.

ವೈವಿಧ್ಯಭರಿತ ಹಾಡುಗಳ ಸಂಗಮವಿದೆ

ನಮ್ಮ ಚಿತ್ರದಲ್ಲಿ ಹಾಡುಗಳು ವೈವಿಧ್ಯಭರಿತವಾಗಿ ತರುವ ಪ್ರಯತ್ನ ಮಾಡಿದ್ದೇವೆ. "ಗೆದ್ದೇ ಗೆಲ್ತೇನೆ" ಎಂಬ ಹಾಡು ಪಿ ಲಂಕೇಶ್ ಅವರ 'ಸಂಕ್ರಾಂತಿ' ನಾಟಕದ್ದು. ಹಾಗೆಯೇ "ನಾನ್ಯಾರೆಂಬುದು ನಾನಲ್ಲ" ಎಂಬುದು ಷರೀಪ್ ಅವರ ಹಾಡು. ಈ ರೀತಿಯ ಹಾಡುಗಳನ್ನು ಬಳಸಿದ್ದೇವೆ. ನಮ್ಮ ಮಟ್ಟಿಗೆ ಇದೊಂದು ಭಿನ್ನ ಪ್ರಯತ್ನ.

English summary
Bahuparak actor Diamond Star Srinagara Kitty interview. Tha actor says, "This movie has a very different storyline, something I have never done so far. I had to portray three shades of characters in the movie. The characters start from the age of 22-23 year old guy to a man who is in his late 60s".
Please Wait while comments are loading...