»   » ಭಜರಂಗಿ ಟ್ರೇಲರ್ ಸಕತ್ ಥ್ರಿಲ್ಲಿಂಗ್ ಗುರೂ

ಭಜರಂಗಿ ಟ್ರೇಲರ್ ಸಕತ್ ಥ್ರಿಲ್ಲಿಂಗ್ ಗುರೂ

Posted By:
Subscribe to Filmibeat Kannada

ಹಲವು ಹೊಸತನಗಳನ್ನು ಮೈಗೂಡಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಭಾರಿ ಕುತೂಹಲ ಕೆರಳಿಸಿರುವ ಶಿವರಾಜ ಕುಮಾರ್ ಅಭಿನಯದ ಭಜರಂಗಿ ಚಿತ್ರದ ಟ್ರೇಲರ್ ಗುರುವಾರ ಬೆಳಗ್ಗೆ ಅಭಿಮಾನಿಗಳಿಗೆ ಅರ್ಪಣೆಯಾಗಿದೆ.

ಪ್ರೇಕ್ಷಕರನ್ನು ತಲುಪಲು ಅಭಿಮಾನಿಗಳನ್ನು ಆಕರ್ಷಿಸಲು ವಿನೂತನ ತಂತ್ರಗಳ ಹೆಣೆಯುತ್ತಿರುವ ಚಿತ್ರಕರ್ಮಿಗಳು ಈ ಚಿತ್ರಕ್ಕೂ ವಿಭಿನ್ನ ರೀತಿ ಪ್ರಚಾರ ನೀಡುತ್ತಾ ಬಂದಿದ್ದಾರೆ. ಒಟ್ಟಾರೆ ಭಜರಂಗಿ ಟ್ರೇಲರ್ ಕೂಡಾ ಅದೇ ರೀತಿ ವಿಶಿಷ್ಟವಾಗಿ ಅನಾವರಣಗೊಂಡಿದೆ.

ಶಿವರಾಜ್ ಅವರ ಚಿತ್ರದ ಟ್ರೇಲರ್ ವೊಂದು ಮೊದಲ ಬಾರಿಗೆ ಚಿತ್ರಮಂದಿರದಲ್ಲಿ ರಿಲೀಸ್ ಆಗಿದೆ. ಗುರುವಾರ(ಸೆ.26) ಬೆಳಗ್ಗೆ ತ್ರಿವೇಣಿ ಚಿತ್ರಮಂದಿರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಶಿವರಾಜ್ ಕುಮಾರ್ ಅವರು ಕುಳಿತು ಟ್ರೇಲರ್ ವೀಕ್ಷಿಸಿದರು.

ಚಿತ್ರಮಂದಿರದಲ್ಲಿ ಟ್ರೇಲರ್ ಮೊದಲಿಗೆ ರಿಲೀಸ್ ಮಾಡುವ ಪದ್ಧತಿ ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಕ್ಲಿಕ್ ಆಗಿದೆ. ಆದರೆ, ಭಜರಂಗಿ ಟ್ರೇಲರ್ ವಿಶಿಷ್ಟವಾಗಿದ್ದು, ಶಿವಣ್ಣ ಅವರ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ. ಚಿತ್ರದ ಬಗ್ಗೆ ಕುತೂಹಲ ಇನ್ನಷ್ಟು ಹೆಚ್ಚಿಸಿರುವ ಜನರ ಮನಸ್ಸಿನಲ್ಲಿ ಹೆಚ್ಚು ಪ್ರಶ್ನೆಗಳು ಏಳುವಂತೆ ಮಾಡುವ ಟ್ರೇಲರ್ ಹೇಗಿದೆ ಮುಂದೆ ನೋಡಿ

ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಭಜರಂಗಿ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮದ ಇನ್ನಷ್ಟು ವಿವರ ಮುಂದೆ ಇದೆ ಓದಿ...

ಕಾರ್ಯಕ್ರಮದಲ್ಲಿ ಅತಿಥಿಗಳು

ಶಿವರಾಜ್ ಕುಮಾರ್ ಹಾಗೂ ಚಿತ್ರತಂಡದ ಜತೆಗೆ ಯುವನಟ ಯಶ್ ಹಾಗೂ ನಾಯಕಿ ಐಂದ್ರಿತಾ ರೇ, ಧ್ರುವ ಸರ್ಜಾ ಟ್ರೇಲರ್ ರಿಲೀಸ್ ಗಾಗಿ ಬಂದಿದ್ದರು. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಗಿಣಿ ಯಾಕೋ ಬಂದಿರಲಿಲ್ಲ.

ಶಿವಣ್ಣ ಸಿಕ್ಸ್ ಪ್ಯಾಕ್ಸ್

50 ರ ಪ್ರಾಯದ ಶಿವರಾಜ್ ಕುಮಾರ್ ಅವರಿಗೆ ಇಂದಿಗೂ ಚಿಗುರು ಮೀಸೆ ಹುಡುಗನ ಉತ್ಸಾಹವಿದೆ. ಪಾತ್ರಕ್ಕೆ ಅಗತ್ಯವಿರುವುದರಿಂದ ಸಿಕ್ಸ್ ಪ್ಯಾಕ್ ಗಾಗಿ ಸಿದ್ಧ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದ ಶಿವಣ್ಣ ಟ್ರೇಲರ್ ನಲ್ಲಿ ಸಿಕ್ಸ್ ಪ್ಯಾಕ್ ಝಲಕ್ ತೋರಿಸಿದ್ದಾರೆ.

ಹೊಸ ಖಳನಟ

ನಾಟಕರಂಗದಿಂದ ಕನ್ನಡದ ಹೊಸ ಪ್ರತಿಭೆ ಬಂದಿರುವ ಸೌರವ್ ಲೋಕೇಶ್ ಅವರು ತಮ್ಮ ಉತ್ತಮ ಅಂಗಸೌಷ್ಟವ ಪ್ರದರ್ಶನದ ಜತೆಗೆ ಶಿವರಾಜ್ ಎದುರಾಗಿ ನಿಲ್ಲಲಿದ್ದಾರೆ.

ಐಂದ್ರಿತಾ ಕೈಲೂ ಲಾಂಗ್

ಕಡ್ಡಿ ಪುಡಿ ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆ ಸಣ್ಣ ಪಾತ್ರ ಹಾಗೂ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದ ಐಂದ್ರಿತಾ ರೇ ಮತ್ತೊಮ್ಮೆ ಶಿವಣ್ಣನ ಜೊತೆ ನಟಿಸುತ್ತಿರುವುದಕ್ಕ್ ಥ್ರಿಲ್ ಆಗಿದ್ದಾರೆ. ನೆರೆ ಮನೆ ಹುಡುಗಿ ರೀತಿ ಪಾತ್ರ ಸಿಕ್ಕಿದೆ. ಪೂರ್ಣ ಪ್ರಮಾಣದ ನಾಯಕಿಯಾಗಿ ಶಿವಣ್ಣನ ಜೊತೆ ನಟಿಸುತ್ತಿರುವುದು ಖುಷಿ ಕೊಟ್ಟಿದೆ. ಅವರಿಂದ ನಟನೆ ಕಲಿಯುವುದು ಬಹಳಷ್ಟಿದೆ ಎಂದಿರುವ ಐಂದ್ರಿತಾ ಕೈಲೂ ಲಾಂಗ್

ರುದ್ರ ತಾಂಡವ' ನೃತ್ಯ

ಚಿತ್ರದಲ್ಲಿ 'ರುದ್ರ ತಾಂಡವ' ನೃತ್ಯವೂ ಇರುತ್ತದೆ. ಮೊಳಕಾಲಿನಲ್ಲೇ ಶಿವಣ್ಣ ನೃತ್ಯ ಮಾಡಲಿದ್ದಾರೆ. ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಇದೂ ಒಂದಾಗಲಿದೆ ಎನ್ನುತ್ತಾರೆ ಹರ್ಷಾ.

"ಚಿತ್ರದಲ್ಲಿ ಶಿವಣ್ಣ ಅವರು ಎರಡು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಲಿದ್ದಾರೆ. ಎರಡೂ ಪಾತ್ರಗಳ ಬಾಡಿ ಲಾಂಗ್ವೇಜ್ ಹಾಗೂ ಲುಕ್ ವಿಭಿನ್ನವಾಗಿದೆ" ಎಂದು ಚಿತ್ರತಂಡ ಹೇಳಿದೆ. ಆದರೆ, ಟ್ರೇಲರ್ ನಲ್ಲಿ ಎದ್ದು ಕಾಣುವುದು ಬಿಳಿವಸ್ತ್ರಧಾರಿ ಯುವತಿಯ ನೃತ್ಯ ಭಂಗಿ

ತಾಂತ್ರಿಕವರ್ಗದಲ್ಲಿ

ತಾಂತ್ರಿಕವರ್ಗದಲ್ಲಿ ಪ್ರಮುಖವಾಗಿ ಸಂಗೀತ ಅರ್ಜುನ್ ಜನ್ಯಾ, ಚಿತ್ರಕಥೆ ವಿಕ್ಟರಿ ಚಿತ್ರ ಖ್ಯಾತಿಯ ನಂದಕಿಶೋರ್, ನಿರ್ದೇಶನ ಎ. ಹರ್ಷ, ಯೋಗಾನಂದ ಸಂಭಾಷಣೆ

ಟ್ರೇಲರ್ ಇಲ್ಲಿದೆ ನೋಡಿ

ಟ್ರೇಲರ್ ನಲ್ಲಿ ಯಾವುದೇ ಸಂಭಾಷಣೆ ಇಲ್ಲ, ಮೊದಲ ನೋಟಕ್ಕೆ ಟೀಸರ್ ರೀತಿ ಕಾಣುತ್ತದೆ. ವಿಲನ್ ಮುಖ, ನರ್ತಕಿ, ಶಿವರಾಜ್ ಕ್ಲೋಸ್ ಅಪ್ ಬೇಗ ಮನಸ್ಸಿನಲ್ಲಿ ರಿಜಿಸ್ಟರ್ ಆಗುತ್ತದೆ. ಹಿನ್ನೆಲೆ ಸಂಗೀತ ಎಲ್ಲೋ ಕೇಳಿದಂತೆ ಅನ್ನಿಸುತ್ತದೆ. ಆದರೆ, ಭಾರಿ ನಿರೀಕ್ಷೆ ಹುಟ್ಟಿಸುವಂತೆ ಟ್ರೇಲರ್ ಕಾಣಿಸುತ್ತದೆ.

ಇದೇ ಮೊದಲಾ?

ಈ ಮುಂಚೆ ಸುದೀಪ್ ಅಭಿನಯದ ಬಚ್ಚನ್, ಪಿಸಿ ಶೇಖರ್ ಅವರ ಗಣೇಶ್ ಅಭಿನಯದ ರೋಮಿಯೋ ಹಾಗೂ ತೀರಾ ಇತ್ತೀಚೆಗೆ ಸಾಧು ಕೋಕಿಲ, ರಂಗಾಯಣ ರಘು ಇನ್ನಿತರ ಕಲಾವಿದರುಗಳ ಚಡ್ಡಿ ದೋಸ್ತ್ ಚಿತ್ರದ ಟ್ರೇಲರ್ ಕೂಡಾ ಚಿತ್ರಮಂದಿರದಲ್ಲೆ ಮೊದಲಿಗೆ ರಿಲೀಸ್ ಮಾಡಲಾಗಿತ್ತು. ಆದರೆ, ಶಿವರಾಜ್ ಅವರ ಚಿತ್ರದ ಟ್ರೇಲರ್ ಇದೇ ಮೊದಲು ಈ ರೀತಿ ರಿಲೀಸ್ ಆಗುತ್ತಿದೆ.

English summary
As expected Shivarajkumar Starrer Bajarangi movie trailer enthralls Triveni Talkies audience and Shivaraj's fans. To reach the audience, Kannada movie makers came up with unique promotional strategy by releasing the trailer on the silver screen today
Please Wait while comments are loading...