»   » 'ಲೀಡರ್' ಆಡಿಯೋ ಕಾರ್ಯಕ್ರಮದಲ್ಲಿ ಕನ್ನಡ ಅಭಿಮಾನ ಮೆರೆದ ಬಾಲಯ್ಯ

'ಲೀಡರ್' ಆಡಿಯೋ ಕಾರ್ಯಕ್ರಮದಲ್ಲಿ ಕನ್ನಡ ಅಭಿಮಾನ ಮೆರೆದ ಬಾಲಯ್ಯ

Posted By:
Subscribe to Filmibeat Kannada

ಶಿವರಾಜ್ ಕುಮಾರ್ ಅಭಿನಯದ 'ಮಾಸ್ ಲೀಡರ್' ಸಿನಿಮಾದ ಆಡಿಯೋ ರಿಲೀಸ್ ನಿನ್ನೆ (ಜುಲೈ 09) ನಡೆಯಿತು. ಈ ಕಾರ್ಯಕ್ರಮಕ್ಕೆ ಟಾಲಿವುಡ್ ನಟ ಬಾಲಕೃಷ್ಣ ಆಗಮಿಸಿ ಆಡಿಯೋ ಬಿಡುಗಡೆ ಮಾಡಿದ್ದರು. ಇಡೀ ಕಾರ್ಯಕ್ರಮದ ಹೈಲೈಟ್ ಅಂದರೆ ನಟ ಬಾಲಕೃಷ್ಣ ಅವರ ಮಾತು.

ನಟ ಬಾಲಯ್ಯ ಅವರಿಗೆ ರಾಜ್ ಕುಟುಂಬ, ಅದರಲ್ಲೂ ಶಿವಣ್ಣ ಅಂದರೆ ಅಪಾರ ಪ್ರೀತಿ. ಇನ್ನೂ ಕನ್ನಡದ ಮೇಲೆ ಬಾಲಕೃಷ್ಣ ಅವರಿಗೆ ತುಂಬ ಗೌರವ ಇದೆ. ಇದು ಮತ್ತೊಮ್ಮೆ ಸಾಬೀತು ಆಗಿದ್ದು 'ಮಾಸ್ ಲೀಡರ್' ಆಡಿಯೋ ಬಿಡುಗಡೆಯ ಕಾರ್ಯಕ್ರಮದಲ್ಲಿ.

ಆಡಿಯೋ ಲಾಂಚ್ ನಲ್ಲಿ ಮಾತನಾಡುವುದಕ್ಕೆ ಶುರು ಮಾಡಿದ ಬಾಲಯ್ಯ ಕನ್ನಡ ನಾಡಿನ ಬಗ್ಗೆ ತಮ್ಮ ಅಭಿಮಾನವನ್ನು ತೋರಿದರು. 'ಮಾಸ್ ಲೀಡರ್' ಕಾರ್ಯಕ್ರಮದಲ್ಲಿ ಬಾಲಯ್ಯ ಕನ್ನಡದಲ್ಲೇ ಮಾತನಾಡಿದರು. ಮುಂದೆ ಓದಿ...

ರಾಜ್ ಕುಮಾರ್ ಅಂದರೆ ಕನ್ನಡ

''ಬಿಸಿನೆಸ್ ಇಂದ ಪಾಲಿಟಿಕ್ಸ್ ವರೆಗೂ, ವಿಧಾನ ಸೌಧ ಇಂದ ಕೆಂಪುಕೋಟೆವರೆಗೂ ಗಲ್ಲಿ ಗಲ್ಲಿಯಿಂದ ಗೂಗಲ್ ವರೆಗೂ ಕನ್ನಡ ಅಂದರೆ ರಾಜ್ ಕುಮಾರ್, ರಾಜ್ ಕುಮಾರ್ ಅಂದರೆ ಕನ್ನಡ'' ಎಂದು ನಂದಮೂರಿ ಬಾಲಕೃಷ್ಣ ಉದ್ಗಾರ ಮಾಡಿದರು.

ನನ್ನ ತಮ್ಮಂದಿರು

''ಪ್ರತಿ ಸರಿ ಕನ್ನಡ ಅಂತ ಹೇಳಿದಾಗ ನನಗೆ ಹೆಮ್ಮೆ ಆಗುತ್ತದೆ. ಪಾರ್ವತಿ ಪುತ್ರ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್... ಮೂವರೂ ನನಗೆ ತಮ್ಮಂದಿರ ರೀತಿ. ಅವರ ಕಷ್ಟ ಸುಖ ಎಲ್ಲದರಲ್ಲೂ ನಾನು ಇರುತ್ತೇನೆ'' - ನಂದಮೂರಿ ಬಾಲಕೃಷ್ಣ, ನಟ

ನನ್ನ ಚಿತ್ರದಲ್ಲಿ ಶಿವರಾಜ್ ಕುಮಾರ್

''ನನ್ನ 'ಗೌತಮಿ ಪುತ್ರ ಶಾತಕರಣಿ' ಸಿನಿಮಾದ ಒಂದೇ ಒಂದು ಹಾಡಿಗಾಗಿ ಶಿವರಾಜ್ ಕುಮಾರ್ ನಟಿಸಿದ್ದರು. ಅದು ಇಡೀ ಸಿನಿಮಾದಲ್ಲಿ ತುಂಬ ಮುಖ್ಯವಾದ ಹಾಡು. ಅದಕ್ಕೆ ಅವರಿಗೆ ಕನ್ನಡ ಮತ್ತು ತೆಲುಗು ಜನತೆಯ ಪರವಾಗಿ ಧನ್ಯವಾದ ಹೇಳುತ್ತೇನೆ'' - ನಂದಮೂರಿ ಬಾಲಕೃಷ್ಣ, ನಟ

ಅಪ್ಪ- ಚಿಕ್ಕಪ್ಪ

''ನಮ್ಮ ಅಪ್ಪ ತಾರಕ್ ರಾಮ್ ರಾವ್ 'ರಾಮು'... ಆದರೆ ನಮ್ಮ ಚಿಕ್ಕಪ್ಪ ರಾಜ್ ಕುಮಾರ್ 'ಸಿಪಾಯಿ ರಾಮು'. ನಮ್ಮ ಅಪ್ಪ 'ಕೊಂಡವೀಟಿ ಸಿಂಹಂ', ನಮ್ಮ ಚಿಕ್ಕಪ್ಪ 'ಕೆರಳಿದ ಸಿಂಹ'. ನಾನು 'ಬೊಬ್ಬುಲಿ ಸಿಂಹಂ'.. ನನ್ನ ತಮ್ಮ ಶಿವರಾಜ್ ಕುಮಾರ್ 'ಸಿಂಹದ ಮರಿ'. ನಾನು 'ಲೆಜೆಂಡ್' ನನ್ನ ತಮ್ಮ 'ಲೀಡರ್'' - ನಂದಮೂರಿ ಬಾಲಕೃಷ್ಣ, ನಟ

ಸಿನಿಮಾ ಗೆಲ್ಲಲಿ...

''ಲೀಡರ್' ಸಿನಿಮಾ ಹಿಟ್ ಆಗಲಿ. ಇಡೀ ತಂಡಕ್ಕೆ ನಾನು ಶುಭ ಕೋರುತ್ತೇನೆ. ಸಂಗೀತ ಕೂಡ ಗೆದ್ದು, ಸಿನಿಮಾ ರಿಲೀಸ್ ಆಗಿ ಪೈಸಾ ವಸೂಲ್ ಆಗಲಿ'' ನಂದಮೂರಿ ಬಾಲಕೃಷ್ಣ, ನಟ

ಡೈಲಾಗ್ ಧಮಾಕಾ

ಕಾರ್ಯಕ್ರಮದಲ್ಲಿ ಹಾಜರಾಗಿದ್ದ ಅಭಿಮಾನಿಗಳಿಗಾಗಿ ತಮ್ಮ ಸಿನಿಮಾದ ಡೈಲಾಗ್ ಹೇಳಿ ಬಾಲಯ್ಯ ರಂಜಿಸಿದರು. 'ಬಾಲಯ್ಯ ಅಂದರೆ ಡೈಲಾಗ್, ಡೈಲಾಗ್ ಅಂದರೆ ಬಾಲಯ್ಯ' ಅಂತ ತಮ್ಮ ಖದರ್ ತೋರಿಸಿದರು.

English summary
Tollywood Actor Balakrishna launched Shivarajkumar’s 'Mass Leader' audio.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada