»   » ಟಾಲಿವುಡ್ ಬಾಲಯ್ಯನ ಲೆಜೆಂಡ್ ಬೈಕ್ ನೋಡಿ

ಟಾಲಿವುಡ್ ಬಾಲಯ್ಯನ ಲೆಜೆಂಡ್ ಬೈಕ್ ನೋಡಿ

By: ಜೀವನರಸಿಕ
Subscribe to Filmibeat Kannada

ನಂದಮೂರಿ ಬಾಲಕೃಷ್ಣ 2014ಕ್ಕೆ ತೆಲುಗು ಚಿತ್ರರಂಗದಲ್ಲಿ ಲೆಜೆಂಡ್ ಆಗ್ತಿದ್ದಾರೆ. 'ಲೆಜೆಂಡ್' ಚಿತ್ರದ ಮೂಲಕ ಒಂದು ಹೊಸ ಗೆಟಪ್ ನಲ್ಲಿ ಹೊಸ ವರ್ಷಕ್ಕೆ ಕಾಲಿಡ್ತಿದ್ದಾರೆ ಬಾಲಯ್ಯ. ಅದು ಅಂತಿಂತಾ ಎಂಟ್ರಿ ಅಲ್ಲ. ಬಾಲಯ್ಯ ಎಂಟ್ರಿಕೊಡ್ತಿರೋದು ರು.20 ಲಕ್ಷದ ಲೆಜೆಂಡ್ ಬೈಕ್ ನಲ್ಲಿ. ಆ ಬೈಕೇ ಚಿತ್ರದ ಜೀವಾಳ.

ಚಿತ್ರದ ಪೂರ್ತಿ ಬಾಲಕೃಷ್ಣ ಜೊತೆ ಆ ಬೈಕು ರಾರಾಜಿಸಲಿದೆಯಂತೆ. ಅದೀಗ ಬಾಲಯ್ಯ ಕುಳಿತು ಸವಾರಿ ಮಾಡಲು ತಯಾರಾಗಿ ನಿಂತಿದೆ. ಹೊಸ ವರ್ಷಕ್ಕೆ ಭಿನ್ನವಾಗಿ ಎಂಟ್ರಿ ಕೊಡ್ತಿದ್ದಾರೆ ಟಾಲಿವುಡ್ ಸ್ಟಾರ್ ನಂದಮೂರಿ ಬಾಲಕೃಷ್ಣ.

ಅದು ಬರೋಬ್ಬರಿ 20 ಲಕ್ಷದ ಬೈಕ್ ನಲ್ಲಿ. ಅದ್ಯಾವುದಪ್ಪಾ ಅಷ್ಟು ಕಾಸ್ಟ್ ಲಿ ಬೈಕ್ ಅಂತ ಹುಬ್ಬೇರಿಸಬೇಡಿ. ಆ ಬೈಕ್ ನ ಹೆಸರೇ 'ಲೆಜೆಂಡ್'. ಅರೇ ಆ ಹೆಸರೇ ಕೇಳಿಲ್ವಲ್ಲ ಅಂತ ತಲೆಕೆಡಿಸಿಕೊಬೇಡಿ. ಅದು ಹಾರ್ಲೆ ಡೇವಿಡ್ಸನ್ ಬೈಕ್. ಅದಕ್ಕೆ ಚಿತ್ರಕ್ಕೋಸ್ಕರ ಮರುನಾಮಕರಣ ಮಾಡ್ಲಾಗಿದೆ ಅಷ್ಟೆ.

ಮಾಡಿಫೈ ಮಾಡಲಾಗಿರುವ ಬೈಕ್

ವಾರ್ಡೆಂಚಿ ಅನ್ನೊ ಹೆಸರಿನ ರೀಸ್ಟೋರ್ ಗ್ಯಾರೇಜ್ ನವರು ಈ ಕಾಸ್ಟ್ಲಿ ಬೈಕನ್ನ ಮಾಡಿಫೈ ಮಾಡಿದ್ದಾರೆ. ಅದಕ್ಕೆ 'ಲೆಜೆಂಡ್' ಅಂತ ಹೆಸರಿಟ್ಟಿರೊ ಚಿತ್ರತಂಡ ಲೆಜೆಂಡ್ ಕ್ರಿಯೇಟ್ ಮಾಡಲು ಹೊರಟಿದೆ.

ಈ ಬೈಕ್ 500 ಸಿಸಿ ಪವರ್ ಹೊಂದಿದೆ

ಈ ಬೈಕ್ 500 ಸಿಸಿ ಪವರ್ ಹೊಂದಿರೊ ಹಳದಿ ಕಲರ್ 'ಲೆಜೆಂಡ್' ಬೈಕ್ ಚಿತ್ರಕ್ಕಾಗಿಯೇ ವಿಶೇಷವಾಗಿ ಸಿದ್ಧವಾಗಿದೆ.

ಬಾಲಯ್ಯನ ಸಿಗ್ನೇಚರ್ ಡಿಸೈನ್ ಸಹ ಇದೆ

ನಾಯಕನ ರೈಡಿಂಗ್ ಬ್ಯಾಲೆನ್ಸ್ ಗಾಗಿ ಬೈಕ್ ಗೆ ದೊಡ್ಡ ದೊಡ್ಡ ಟೈರ್ ಗಳನ್ನ ಅಳವಡಿಸಿಲಾಗಿದೆ. ಬಾಲಯ್ಯನ ಸಿಗ್ನೇಚರ್ ಡಿಸೈನ್ ಸಹ ಬೈಕ್ ಮೇಲ್ಮೈಯಲ್ಲಿರೋದು ಒಂದು ವಿಶೇಷ.

ಟಾಲಿವುಡ್ ನಲ್ಲಿ ಇದೇ ಮೊದಲ ಬಾರಿಗೆ ಪ್ರಯೋಗ

ಟಾಲಿವುಡ್ ನಲ್ಲಿ ಇದೇ ಮೊದಲ ಬಾರಿ ಈ ರೀತಿಯ ಪ್ರಯೋಗವಾಗಿದ್ದು, ನಾಲ್ಕು ವರ್ಷಗಳ ನಂತರ ಬಾಲಯ್ಯ ಮತ್ತು ಬೋಯಪಾಟಿ ಶ್ರೀನು ಕಾಂಬಿನೇಷನ್ ನಲ್ಲಿ 'ಲೆಜೆಂಡ್' ಚಿತ್ರ ಬರುತ್ತಿದೆ.

ಬೈಕನ್ನು ಹರಾಜು ಹಾಕಲಾಗುತ್ತದೆ

ಇವೆಲ್ಲದ್ದಕ್ಕಿಂತ ಒಂದು ಇಂಟರೆಸ್ಟಿಂಗ್ ವಿಚಾರ ಏನಪ್ಪಾ ಅಂದ್ರೆ, ಚಿತ್ರೀಕರಣ ಮುಗಿಯುತ್ತಿದ್ದಂತೆ ಬಾಲಯ್ಯ ಸಹಿ ಇರೊ ಈ ಲೆಜೆಂಡ್ ಬೈಕನ್ನ ಹರಾಜು ಮಾಡಲಿದ್ದಾರಂತೆ.

English summary
Balakrishna's upcoming entertainer ‘Legend’ is attracting the attention of all for the specially designed bike. The bike has many specialties. According to the latest, film makers are planning to place the bike for auction after the completion of shooting.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada