For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್‌ಗೆ ಬಾಲಯ್ಯ, ಅಲ್ಲು ಅರ್ಜುನ್‌ಗೆ ಚಿರಂಜೀವಿ ಸವಾಲು?

  |

  ಎರಡು ವರ್ಷದಿಂದ ಕಾದು ಕುಳಿತಿದ್ದ ಚಿತ್ರರಂಗ ಮತ್ತೆ ಚುರುಕಾಗಿದೆ. ದಸರಾ ಹಬ್ಬದಿಂದಲೇ ಸಿನಿಮಾ ಇಂಡಸ್ಟ್ರಿ ಸಹ ಹಬ್ಬ ಮಾಡುತ್ತಿದೆ. ನವರಾತ್ರಿ, ದೀಪಾವಳಿ, ಕ್ರಿಸ್‌ಮಸ್ ಹಾಗೂ ಸಂಕ್ರಾಂತಿ ಹಬ್ಬಕ್ಕೆ ಸ್ಟಾರ್ ನಟರ ದೊಡ್ಡ ದೊಡ್ಡ ಚಿತ್ರಗಳು ಸರದಿ ಸಾಲಿನಲ್ಲಿ ನಿಂತಿವೆ. ಯಾವ ಸಿನಿಮಾ ನೋಡೋದು ಯಾವ ಸಿನಿಮಾ ಬಿಡೋದು ಎನ್ನುವ ಮಟ್ಟಿಗೆ ಚಿತ್ರಪ್ರೇಮಿಗಳು ಗೊಂದಲದಲ್ಲಿದ್ದಾರೆ.

  ಸ್ಟಾರ್ ನಟರ ಚಿತ್ರಗಳ ಬಿಡುಗಡೆ ಕುರಿತು ಒಮ್ಮೆ ನೋಡುವುದಾದರೆ ದಸರಾ ಹಬ್ಬಕ್ಕೆ ಕನ್ನಡದಲ್ಲಿ ಕೋಟಿಗೊಬ್ಬ 3, ದುನಿಯಾ ವಿಜಯ್ ನಿರ್ದೇಶನದ ಸಲಗ ಬರ್ತಿದೆ. ದೀಪಾವಳಿ ಹಬ್ಬಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಅಣ್ಣಾತ್ತೆ ಸಿನಿಮಾ ಸಜ್ಜಾಗಿದೆ. ಕ್ರಿಸ್‌ಮಸ್‌ಗೂ ಒಂದು ವಾರ ಮುಂಚಿತವಾಗಿ ಅಲ್ಲು ಅರ್ಜುನ್ ನಟನೆಯ ಪುಷ್ಪ ಬರಲಿದೆ. ಸಂಕ್ರಾಂತಿ ಹಬ್ಬಕ್ಕೆ ಮಹೇಶ್ ಬಾಬು, ವೆಂಕಟೇಶ್, ಪ್ರಭಾಸ್, ಪವನ್ ಕಲ್ಯಾಣ್ ನಟನೆಯ ನಿರೀಕ್ಷೆಯ ಚಿತ್ರಗಳು ರಿಲೀಸ್ ದಿನಾಂಕ ಘೋಷಣೆ ಮಾಡಿದೆ. ದೇಶದ ಭಾರಿ ನಿರೀಕ್ಷೆಯ ಚಿತ್ರ ಆರ್‌ಆರ್‌ಆರ್ ಸಹ ಸಂಕ್ರಾಂತಿ ಹಬ್ಬಕ್ಕೂ ಒಂದು ವಾರದ ಮುಂಚೆ ಬರುವುದಾಗಿ ಪ್ರಕಟಿಸಿದೆ.

  ಕ್ರಿಸ್‌ಮಸ್‌ಗೂ ಮುಂಚೆಯೇ ಬರ್ತಿದೆ ಅಲ್ಲು ಅರ್ಜುನ್ 'ಪುಷ್ಪ'ಕ್ರಿಸ್‌ಮಸ್‌ಗೂ ಮುಂಚೆಯೇ ಬರ್ತಿದೆ ಅಲ್ಲು ಅರ್ಜುನ್ 'ಪುಷ್ಪ'

  ಹೀಗೆ, ಹಬ್ಬಗಳೆಲ್ಲವೂ ಸ್ಟಾರ್ ನಟರ ಚಿತ್ರಗಳೊಂದಿಗೆ ತುಂಬಿವೆ. ಈ ನಡುವೆ ಮತ್ತೆರಡು ಚಿತ್ರಗಳು ಸೇರಿಕೊಳ್ಳುತ್ತಿರುವುದು ಮತ್ತಷ್ಟು ಮೆರಗು ತಂದಿದೆ. ಮುಂದೆ ಓದಿ...

  ದೀಪಾವಳಿಗೆ ಅಖಂಡ?

  ದೀಪಾವಳಿಗೆ ಅಖಂಡ?

  ಲೆಜೆಂಡ್ ಬಾಲಕೃಷ್ಣ ನಟನೆಯ ಅಖಂಡ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಬಯೋಪಟಿ ಶ್ರೀನು ನಿರ್ದೇಶನದಲ್ಲಿ ತಯಾರಾಗಿರುವ ಈ ಸಿನಿಮಾ ದೀಪಾವಳಿ ಹಬ್ಬದ ಪ್ರಯುಕ್ತ ಥಿಯೇಟರ್‌ ಬರಲು ಚಿಂತಿಸಿದೆ. ಈ ಹಿಂದೆ ಸಂಕ್ರಾಂತಿ ಹಬ್ಬಕ್ಕೆ ಬರಲು ಮುಂದಾಗಿದ್ದರು. ಆದರೆ, ಆ ದಿನಕ್ಕೆ ಹೆಚ್ಚು ಸಿನಿಮಾಗಳು ಲೈನ್‌-ಅಪ್ ಆಗಿರುವ ಕಾರಣ ಅದಕ್ಕೂ ಮುಂಚೆಯೇ ಪ್ರೇಕ್ಷಕರೆದುರು ಬರುವ ಲೆಕ್ಕಾಚಾರ ಮಾಡಿದೆ. ಅಂದ್ಹಾಗೆ, ಸಿಂಹ ಮತ್ತು ಲೆಜೆಂಡ್ ಚಿತ್ರಗಳ ನಂತರ ಬಯೋಪಟಿ ಶ್ರೀನು ಮತ್ತು ಬಾಲಯ್ಯ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದ್ದು, ಸಹಜವಾಗಿ ಕುತೂಹಲ ಹೆಚ್ಚಿಸಿದೆ.

  ಅಣ್ಣಾತ್ತೆ ಎದುರು ಪೈಪೋಟಿ?

  ಅಣ್ಣಾತ್ತೆ ಎದುರು ಪೈಪೋಟಿ?

  ಒಂದು ವೇಳೆ ಬಾಲಕೃಷ್ಣರ ಅಖಂಡ ಸಿನಿಮಾ ದೀಪಾವಳಿಗೆ ಬರುವುದಾದರೆ ಅಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರದೊಂದಿಗೆ ಪೈಪೋಟಿ ಎದುರಿಸಬೇಕಾಗುತ್ತದೆ. ಏಕಂದ್ರೆ, ರಜನಿ ನಟನೆಯ ಅಣ್ಣಾತ್ತೆ ಚಿತ್ರ ಈಗಾಗಲೇ ನವೆಂಬರ್ 4ಕ್ಕೆ ದಿನಾಂಕ ಲಾಕ್ ಮಾಡಿಕೊಂಡಿದೆ. ಸಿರುತೈ ಶಿವ ನಿರ್ದೇಶನದ ಈ ಚಿತ್ರ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ಯಿದೆ. ಹೀಗಿರುವಾಗ ರಜನಿ ಸಿನಿಮಾದ ಎದುರು ಬಾಲಯ್ಯನ ಅಖಂಡ ಬರುತ್ತಾ ಎನ್ನುವುದು ಸಹ ಅನುಮಾನ ಉಂಟು ಮಾಡಿದೆ.

  2021-22ರಲ್ಲಿ ರಿಲೀಸ್ ದಿನಾಂಕ ಘೋಷಿಸಿರುವ ಭಾರತೀಯ ಚಿತ್ರಗಳ ವಿವರ2021-22ರಲ್ಲಿ ರಿಲೀಸ್ ದಿನಾಂಕ ಘೋಷಿಸಿರುವ ಭಾರತೀಯ ಚಿತ್ರಗಳ ವಿವರ

  ಆಚಾರ್ಯಗೂ ಹೆಚ್ಚಿದ ತಲೆನೋವು

  ಆಚಾರ್ಯಗೂ ಹೆಚ್ಚಿದ ತಲೆನೋವು

  ಹಾಗ್ನೋಡಿದ್ರೆ ಮೆಗಾಸ್ಟಾರ್ ಚಿರಂಜೀವಿ ನಟನೆಯ ಆಚಾರ್ಯ ಚಿತ್ರಕ್ಕೂ ಸರಿಯಾದ ದಿನಾಂಕ ಸಿಕ್ಕಿಲ್ಲ. ಕ್ರಿಸ್‌ಮಸ್, ಸಂಕ್ರಾಂತಿ, ಸಮ್ಮರ್ ಎಂದು ಇನ್ನು ಯೋಚಿಸುತ್ತಲೇ ಇದ್ದಾರೆ. ಇಷ್ಟು ದಿನ ಸಂಕ್ರಾಂತಿ ಹಬ್ಬಕ್ಕೆ ಆಚಾರ್ಯ ಫಿಕ್ಸ್ ಎನ್ನಲಾಗುತ್ತಿತ್ತು. ಈಗ ಸಂಕ್ರಾಂತಿ ರೇಸ್‌ನಿಂದ ಹಿಂದೆ ಸರಿದಿರುವ ಬಗ್ಗೆ ವರದಿಯಾಗಿದ್ದು, ಕ್ರಿಸ್‌ಮಸ್‌ ಹಬ್ಬವನ್ನು ಟಾರ್ಗೆಟ್ ಮಾಡಲು ಮುಂದಾಗಿದ್ದಾರಂತೆ.

  ಪುಷ್ಪ ಜೊತೆ ಆಚಾರ್ಯ

  ಪುಷ್ಪ ಜೊತೆ ಆಚಾರ್ಯ

  ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಡಿಸೆಂಬರ್ 17ಕ್ಕೆ ತೆರೆಗೆ ಬರಲಿದೆ. ಕ್ರಿಸ್‌ಮಸ್ ಹಬ್ಬಕ್ಕೆ ಒಂದು ವಾರ ಮುಂಚಿತವಾಗಿ ಥಿಯೇಟರ್‌ಗೆ ಬರ್ತಿದೆ. ಇದೀಗ, ಕ್ರಿಸ್‌ಮಸ್ ವಾರ ಖಾಲಿಯಿರುವ ಕಾರಣ ಆ ದಿನಕ್ಕೆ ಆಚಾರ್ಯ ಬರಲು ನಿರ್ಧರಿಸಿರುವ ಬಗ್ಗೆ ಮಾಹಿತಿ ಇದೆ. ಒಂದು ವೇಳೆ ಕ್ರಿಸ್‌ಮಸ್‌ಗೆ ಆಚಾರ್ಯ ಫಿಕ್ಸ್ ಆದರೆ ಪುಷ್ಪ ಮತ್ತು ಆಚಾರ್ಯ ಬಾಕ್ಸ್ ಆಫೀಸ್‌ನಲ್ಲಿ ಮುಖಾಮುಖಿಯಾಗಬೇಕಿದೆ. ಆಚಾರ್ಯ ಮತ್ತು ಅಖಂಡ ಚಿತ್ರಗಳು ರಿಲೀಸ್ ದಿನಾಂಕದ ಬಗ್ಗೆ ಈಗ ಎಲ್ಲರ ಕಣ್ಣಿದೆ.

  English summary
  Telugu Actor Balakrishna Akhanda movie Set To Release opposite with Superstar Rajinikanth Starrer Annaatthe movie on Deepavali?.
  Tuesday, October 5, 2021, 11:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X