For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗೆ ಕಪಾಳಮೋಕ್ಷ ಮಾಡಿದ ತೆಲುಗು ನಟ ಬಾಲಕೃಷ್ಣ

  By Bharath Kumar
  |

  ತೆಲುಗು ನಟ ಹಾಗೂ ರಾಜಕಾರಣಿ ನಂದಮೂರಿ ಬಾಲಕೃಷ್ಣ, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ಕಪಾಳ ಮೋಕ್ಷ ಮಾಡಿರುವ ಘಟನೆ ನಿನ್ನೆ (ಆಗಸ್ಟ್ 16) ಆಂಧ್ರ ಪ್ರದೇಶದ ನಂದ್ಯಾಳ್ ದಲ್ಲಿ ನಡೆದಿದೆ.

  ನಂದ್ಯಾಳ್ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣಾ ಪ್ರಚಾರದ ವೇಳೆ ಟಿಡಿಪಿ ಅಭ್ಯರ್ಥಿ ಪರ ಮತಯಾಚನೆಗೆ ಬಂದಿದ್ದ ನಟ ಬಾಲಕೃಷ್ಣರ ಬಳಿ, ಬಂದ ಅಭಿಮಾನಿಯೊಬ್ಬರು ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದರು. ಈ ವೇಳೆ ರೊಚ್ಚಿಗೆದ್ದ ಬಾಲಕೃಷ್ಣ, ಸಾರ್ವಜನಿಕವಾಗಿ ಆ ಅಭಿಮಾನಿಗೆ ಕಪಾಳಕ್ಕೆ ಹೊಡೆದು ಮುಂದೆ ಸಾಗಿದ್ದಾರೆ.

  ಬಾಲಕೃಷ್ಣ ಅವರು ಅಭಿಮಾನಿಗಳ ಮೇಲೆ ಈ ರೀತಿ ವರ್ತನೆ ಮಾಡಿರುವುದು ಇದೇ ಮೊದಲಲ್ಲ. ಇದಕ್ಕು ಮುಂಚೆ ಅನೇಕ ಬಾರಿ ಇಂತಹ ವಿವಾದಗಳನ್ನ ಮೈಮೇಲೆ ಎಳೆದುಕೊಂಡಿದ್ದಾರೆ.

  ಇತ್ತೀಚೆಗಷ್ಟೇ ಚಿತ್ರೀಕರಣ ವೇಳೆ ತಮ್ಮ ಸಹಾಯಕ, ಕಾಲಿಗೆ ಸರಿಯಾಗಿ ಚಪ್ಪಲಿ ಹಾಕಿಲ್ಲವೆಂಬ ಕಾರಣಕ್ಕೆ ತಲೆಯ ಮೇಲೆ ಹೊಡೆದು ಟೀಕೆಗೆ ಗುರಿಯಾಗಿದ್ದರು. ಅದಕ್ಕೂ ಮುಂಚೆ ಶಿವರಾಜ್ ಕುಮಾರ್ ಅಭಿನಯದ 'ಮಾಸ್ ಲೀಡರ್' ಚಿತ್ರದ ಆಡಿಯೋ ಬಿಡುಗಡೆಗೆ ಆಗಮಿಸಿದ್ದ ವೇಳೆಯೂ ಕೂಡ ಅಭಿಮಾನಿಯೊಬ್ಬರನ್ನ ಹೊಡೆಯಲು ಮುಂದಾಗಿದ್ದ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

  English summary
  Nandamuri Balakrishna is in the news for slapping a fan who was attempting to click a selfie. A video that went viral online shows Balakrishna hitting the fan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X