For Quick Alerts
  ALLOW NOTIFICATIONS  
  For Daily Alerts

  ಬನಾರಸ್ ಕಲೆಕ್ಷನ್: ಇಲ್ಲಿಯವರೆಗೂ ಬಜೆಟ್‌ನ ಅರ್ಧ ದುಡ್ಡು ಮಾತ್ರ ಬಂದಿದೆ ಎಂದ ನಿರ್ದೇಶಕ ಜಯತೀರ್ಥ!

  |

  ರಾಜಕಾರಣಿಗಳ ಮಕ್ಕಳು ತಮ್ಮ ಪೋಷಕರ ರೀತಿ ರಾಜಕೀಯ ಕ್ಷೇತ್ರಕ್ಕೆ ಧುಮುಕದೇ ಮನರಂಜನಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ನಟರಾಗುವುದು ಇತ್ತೀಚಿನ ದಿನದ ಟ್ರೆಂಡ್ ಆಗಿಬಿಟ್ಟಿದೆ. ಈ ಟ್ರೆಂಡ್‌ಗೆ ಹೊಸ ಸೇರ್ಪಡೆ ರಾಜಕಾರಣಿ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್. ಹೌದು, ಝೈದ್ ಖಾನ್ ತಮ್ಮ ತಂದೆಯ ಹಾಗೆ ರಾಜಕೀಯದ ಕಡೆ ಮುಖ ಮಾಡುವ ಬದಲಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ.

  ನವೆಂಬರ್ 4ರ ಶುಕ್ರವಾರದಂದು ತೆರೆಕಂಡ ಬನಾರಸ್ ಚಿತ್ರ ಇನ್ನೂ ಸಹ ಕೆಲ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಇನ್ನು ಸೆಟ್ಟೇರಿದಾಗಿನಿಂದಲೂ ಸುದ್ದಿಗೀಡಾಗಿದ್ದ ಬನಾರಸ್ ವಿರುದ್ಧ ಕೆಲ ರಾಜಕೀಯ ಕಾರಣಗಳಿಗೆ ಬಾಯ್‌ಕಾಟ್ ಟ್ರೆಂಡ್ ಕೂಡ ನಡೆದಿತ್ತು. ಝೈದ್ ಖಾನ್ ಅಭಿನಯದ ಬನಾರಸ್ ಚಿತ್ರವನ್ನು ಖಡಾಖಂಡಿತವಾಗಿ ವೀಕ್ಷಿಸುವುದಿಲ್ಲ ಎಂದು ಹಲವರು ತಿರಸ್ಕರಿಸಿದ್ದರು.

  ಹೀಗಿದ್ದರೂ ಬನಾರಸ್ ಚಿತ್ರ ಮೊದಲ ದಿನ ವಿಶ್ವದಾದ್ಯಂತ ಒಟ್ಟು ಮೂರು ಕೋಟಿ ಕಲೆಕ್ಷನ್ ಮಾಡಿದೆ ಎಂಬುದನ್ನು ಚಿತ್ರತಂಡ ಬಿಚ್ಚಿಟ್ಟಿತ್ತು. ಆದರೆ ಚಿತ್ರತಂಡದ ಈ ಬಾಕ್ಸ್ ಆಫೀಸ್ ವರದಿಯನ್ನು ಬಹುತೇಕರು ನಂಬಲಿಲ್ಲ. ಇದೆಲ್ಲಾ ಪ್ರಚಾರದ ಗಿಮಿಕ್ ಎಂದರು. ನಂತರ ಚಿತ್ರತಂಡ ಅಧಿಕೃತವಾಗಿ ಎಲ್ಲಿಯೂ ಬಾಕ್ಸ್ ಆಫೀಸ್‌ನಲ್ಲಿ ಬನಾರಸ್ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದನ್ನು ಬಹಿರಂಗಪಡಿಸಲಿಲ್ಲ ಹಾಗೂ ಚಿತ್ರ ಎಷ್ಟು ಹಣವನ್ನು ಗಳಿಸಿದೆ ಎಂಬ ಕುತೂಹಲ ಹಾಗೂ ಪ್ರಶ್ನೆ ಸಿನಿರಸಿಕರಲ್ಲಿತ್ತು. ಆದರೆ ಸದ್ಯ ಫಿಲ್ಮಿಬೀಟ್ ಕನ್ನಡ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ಜಯತೀರ್ಥ ಚಿತ್ರದ ಕಲೆಕ್ಷನ್ ಕುರಿತು ಮಾತನಾಡಿದ್ದು ಚಿತ್ರ ಎಷ್ಟು ಗಳಿಸಿದೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ.

  ಅರ್ಧದಷ್ಟು ಕಲೆಕ್ಷನ್ ಆಗಿದೆ

  ಅರ್ಧದಷ್ಟು ಕಲೆಕ್ಷನ್ ಆಗಿದೆ

  ಸಂದರ್ಶನದಲ್ಲಿ ಕಲೆಕ್ಷನ್ ಕುರಿತ ಪ್ರಶ್ನೆಗೆ ಉತ್ತರಿಸಿದ ಜಯತೀರ್ಥ 'ಚಿತ್ರ ಪ್ಯಾನ್ ಇಂಡಿಯಾ ಬಿಡುಗಡೆಯಾಗಿದ್ದ ಕಾರಣ ಮೊದಲ ದಿನ ಮೂರು ಕೋಟಿ ಗಳಿಕೆ ಮಾಡಿದೆ ಅಂತಾರೆ, ಆದರೆ ಅದೇನು ದೊಡ್ಡದಲ್ಲ. ಆನಂತರ ಎಲ್ಲೆಲ್ಲಿ ಎಷ್ಟೆಷ್ಟು ಗಳಿಕೆ ಮಾಡಿದೆ ಎಂಬುದನ್ನು ಲೆಕ್ಕ ಹಾಕಿದರೆ ಇಲ್ಲಿಯವರೆಗೆ ( ನವೆಂಬರ್‌ 13 ) ನಿರ್ಮಾಪಕರು ಖರ್ಚು ಮಾಡಿದ್ದರ ಅರ್ಧದಷ್ಟು ಗಳಿಕೆಯನ್ನು ಮಾಡಿದ್ದಾರೆ. ಇನ್ನುಳಿದಂತೆ ಓಟಿಟಿ, ಸ್ಯಾಟಲೈಟ್ ಮುಂತಾದ ಹಕ್ಕು ಬಾಕಿ ಇರುವುದರಿಂದ ಮತ್ತಷ್ಟು ಹಣ ಬರಲಿದೆ' ಎಂದು ಹೇಳಿದರು.

  ನಮ್ಮ ಮೂಲ ಉದ್ದೇಶ ಕಲೆಕ್ಷನ್ ಅಲ್ಲ

  ನಮ್ಮ ಮೂಲ ಉದ್ದೇಶ ಕಲೆಕ್ಷನ್ ಅಲ್ಲ

  ಹೀಗೆ ಕಲೆಕ್ಷನ್ ಕುರಿತು ಮಾಹಿತಿ ನೀಡಿದ ಬೆನ್ನಲ್ಲೇ 'ಈ ಚಿತ್ರದ ಮೂಲ ಉದ್ದೇಶ ಝೈದ್ ಖಾನ್ ಅವರನ್ನು ಸರಿಯಾಗಿ ಲಾಂಚ್ ಮಾಡಬೇಕು ಎನ್ನುವುದು ಅದನ್ನೂ ಮಾಡಿದ್ದೇವೆ ಹಾಗೂ ಒಳ್ಳೆಯ ಕತೆ ಹೇಳಬೇಕು ಎನ್ನುವುದು ಅದನ್ನೂ ಮಾಡಿದ್ದೇವೆ. ನನ್ನ ಬಳಿ ಇದ್ದ ಈ ಕತೆಗೆ ಝೈದ್ ಖಾನ್ ಸರಿಯಾಗಿ ಹೊಂದಿಕೊಳ್ಳುತ್ತಾರೆ ಎಂದು ತೀರ್ಮಾನಿಸಿ ಬನಾರಸ್ ಕತೆ ಹೇಳಿದೆ. ಎಲ್ಲರೂ ಮೆಚ್ಚಿಕೊಂಡ ನಂತರ ಚಿತ್ರ ಮಾಡಿದೆವು' ಎಂದು ತಿಳಿಸಿದರು.

  ಬೆಲ್ ಬಾಟಂ 2 ಅಪ್‌ಡೇಟ್ ಕೊಟ್ಟ ಜಯತೀರ್ಥ

  ಬೆಲ್ ಬಾಟಂ 2 ಅಪ್‌ಡೇಟ್ ಕೊಟ್ಟ ಜಯತೀರ್ಥ

  ಸದ್ಯ ಬನಾರಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ಜಯತೀರ್ಥ ತಮ್ಮ ಹಿಂದಿನ ಚಿತ್ರ ಬೆಲ್ ಬಾಟಂ ಮೂಲಕ ಬೃಹತ್ ಹಿಟ್ ನೀಡಿದ್ದರು. ಈಗ ಕಾಂತಾರ ಚಿತ್ರದ ಮೂಲಕ ಅಬ್ಬರಿಸುತ್ತಿರುವ ರಿಷಬ್ ಶೆಟ್ಟಿ ನಾಯಕನಾಗಿದ್ದ ಬೆಲ್ ಬಾಟಮ್ ಚಿತ್ರದ ಎರಡನೇ ಭಾಗದ ಮುಹೂರ್ತ ಕಾರ್ಯಕ್ರಮ ಕೂಡ ಬರುಗಿತ್ತು. ಈ ಚಿತ್ರದ ಬಗ್ಗೆಯೂ ಇದೇ ಸಂದರ್ಶನದಲ್ಲಿ ಜಯತೀರ್ಥ ಮಾಹಿತಿ ನೀಡಿದರು. 'ಬೆಲ್ ಬಾಟಂ 2 ಚಿತ್ರದ ಮುಹೂರ್ತ ಮುಗಿದ ನಂತರ ಕೊರೊನಾ ಬಂತು ಹಾಗೂ ಚಿತ್ರದ ನಟ ರಿಷಬ್ ಶೆಟ್ಟಿ ಕಾಂತಾರ ಚಿತ್ರದಲ್ಲಿ ನಿರತರಾದ ಕಾರಣ ಚಿತ್ರದ ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ ಎಂದರು. ಇನ್ನು ಸದ್ಯ ಕಾಂತಾರ ಚಿತ್ರದ ಸಂದರ್ಶನ ಹಾಗೂ ಇತರೆ ಕೆಲಸಗಳಲ್ಲಿ ಬ್ಯುಸಿ ಆಗಿದ್ದು, ಅವರು ಈ ಕೆಲಸಗಳನ್ನೆಲ್ಲಾ ಮುಗಿಸಿ ಡೇಟ್ ಕೊಡ್ತಾ ಇದ್ದ ಹಾಗೆ ಬೆಲ್ ಬಾಟಮ್ 2 ಚಿತ್ರದ ಚಿತ್ರೀಕರಣ ಆರಂಭವಾಗಲಿದೆ' ಎಂದು ಜಯತೀರ್ಥ ತಿಳಿಸಿದರು.

  English summary
  Banaras has collected half of it's budget amount till now says director Jayatheertha. Read on
  Tuesday, November 15, 2022, 18:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X