For Quick Alerts
  ALLOW NOTIFICATIONS  
  For Daily Alerts

  ಬನಾರಸ್ ಟ್ರೈಲರ್ ಲಾಂಚ್ ಮಾಡಲಿದ್ದಾರೆ ಸ್ಯಾಂಡಲ್‌ವುಡ್ ಮತ್ತು ಬಾಲಿವುಡ್ ನಟ

  |

  ರಾಜಕಾರಣಿ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಹಾಗೂ ಪಂಚತಂತ್ರ ಮತ್ತು ರಾಬರ್ಟ್ ಚಿತ್ರಗಳ ಫೇಮ್‍ನ ನಟಿ ಸೋನಾಲ್ ಮೊಂಟೆರೋ ಅಭಿನಯಿಸಿರುವ ಬನಾರಸ್ ಚಿತ್ರದ ಟ್ರೈಲರ್ ನಾಳೆ ( ಸೆಪ್ಟೆಂಬರ್ 26 ) ಬಿಡುಗಡೆಯಾಗಲಿದೆ.

  ಈ ಚಿತ್ರದ ಹಾಡುಗಳು ಈಗಾಗಲೇ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು ಈಗಾಗಲೇ ಮಾಯಗಂಗೆ ಹಾಗೂ ಹೆಣ್ಣು ಹಡೆಯಲು ಬೇಡ ಎಂಬ ಹಾಡುಗಳು ಸಾಕಷ್ಟು ಸದ್ದು ಮಾಡಿವೆ. ಕೊನೆಯದಾಗಿ ಬೆಲ್ ಬಾಟಮ್ ಎಂಬ ಬ್ಲಾಕ್ ಬಸ್ಟರ್ ಚಿತ್ರವನ್ನು ನಾಯಕ ರಿಷಬ್ ಶೆಟ್ಟಿ ಅವರಿಗೆ ನಿರ್ದೇಶನ ಮಾಡಿದ್ದ ನಿರ್ದೇಶಕ ಜಯತೀರ್ಥ ಬನಾರಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಈ ಚಿತ್ರ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

  ಚಿತ್ರ ನವೆಂಬರ್ 4ರಂದು ಬಿಡುಗಡೆಯಾಗಲಿದ್ದು, ಚಿತ್ರದ ಟ್ರೈಲರ್ ನಾಳೆ ( ಸೆಪ್ಟೆಂಬರ್ 26 ) ಸಂಜೆ 6.21ಕ್ಕೆ ಲಹರಿ ಮ್ಯುಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ. ಈ ಟ್ರೈಲರ್ ಅನ್ನು ಕನ್ನಡದ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ಬಾಲಿವುಡ್ ಚಿತ್ರರಂಗದ ಅರ್ಬಾಜ್ ಖಾನ್ ಬಿಡುಗಡೆ ಮಾಡಲಿದ್ದಾರೆ.

  English summary
  Banaras trailer to be launched by V Ravichandran and Arbaaz Khan on September 26
  Sunday, September 25, 2022, 23:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X