»   » ಪುನೀತ್ ಜೊತೆ ಸುಗ್ರಾಸಭೋಜನಕ್ಕೆ ಸುವರ್ಣಾವಕಾಶ

ಪುನೀತ್ ಜೊತೆ ಸುಗ್ರಾಸಭೋಜನಕ್ಕೆ ಸುವರ್ಣಾವಕಾಶ

Posted By:
Subscribe to Filmibeat Kannada

ತಮ್ಮ ನೆಚ್ಚಿನ ತಾರೆಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವುದು, ಅವರ ಹಸ್ತಾಕ್ಷರ ಪಡೆಯುವುದು, ಕೈಕುಲುಕುವುದು, ಸಾಧ್ಯವಾದರೆ ಒಂದು ಹಾಯ್ ಹೇಳುವುದು ಅಭಿಮಾನಿಗಳ ಪಾಲಿಗೆ ಮರೆಯಲಾಗದ ಸಂಭ್ರಮದ ಕ್ಷಣಗಳು. ಆದರೆ ತಾರೆಗಳ ಜೊತೆ ಎಂದಾದರೂ ಸುಗ್ರಾಸಭೋಜನ ಸವಿದಿದ್ದೀರಾ?

ಈ ರೀತಿಯ ಸುವರ್ಣಾವಕಾಶವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ timescity.com ಒದಗಿಸುತ್ತಿದೆ. ಕೇವಲ ಪುನೀತ್ ಜೊತೆ ಭೋಜನ ಮಾಡುವುದಷ್ಟೇ ಅಲ್ಲ. ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಬಹುದು, ಹಸ್ತಾಕ್ಷರ ಪಡೆಯಬಹುದು, ಹರಟೆ ಹೊಡೆಯಬಹುದು.


ಪುನೀತ್ ಜೊತೆ ಊಟ ಮಾಡಬೇಕಾದರೆ ಮಾಡಬೇಕಾದದ್ದಿಷ್ಟೇ. timescity.com ವೆಬ್ ಸೈಟ್ ಗೆ ಲಾಗಿನ್ ಆಗಿ ಬಿಡ್ ಮಾಡಬೇಕು. ಬಿಡ್ ನ ಆರಂಭಿಕ ಮೊತ್ತ ರು.3,000. ಈಗಾಗಲೆ ಸಾಕಷ್ಟು ಅಭಿಮಾನಿಗಳು ಬಿಡ್ ಮಾಡಿದ್ದಾರೆ, ಮಾಡುತ್ತಿದ್ದಾರೆ.

ಸುಮಾರು ಆರು ಮಂದಿಯ ಬಿಡ್ಡರ್ಸ್ ಗ್ರೂಪ್ ಜೊತೆ ಪುನೀತ್ ಮಾತನಾಡುತ್ತಾರೆ. ಅಂತಿಮವಾಗಿ ಗೆದ್ದವರಿಗೆ ವಿಶೇಷ ಆತಿಥ್ಯ ನೀಡಲಾಗುತ್ತದೆ. ಅವರು ಪುನೀತ್ ಜೊತೆ ಊಟ ಮಾಡಿ, ಫೋಟೋ ಕ್ಲಿಕ್ಕಿಸಿ, ಹಸ್ತಾಕ್ಷರ ಪಡೆಯಬಹುದು. ಜೊತೆಗೆ ಪುನೀತ್ ಅವರ ಮರೆಯಲಾಗದ ಅನುಭವಗಳನ್ನು, ಅವರ ವೃತ್ತಿಜೀವನದ ಏರಿಳಿತಗಳನ್ನು, ತಮಾಷೆ ಪ್ರಸಂಗಗಳನ್ನು ಅವರಿಂದಲೇ ಕೇಳಿ ತಿಳಿದುಕೊಳ್ಳಬಹುದು.

ಇದಿಷ್ಟನ್ನು ಪುನೀತ್ ಅವರು ತಮ್ಮ ಸ್ವಾರ್ಥಕ್ಕಾಗಿ ಮಾಡುತ್ತಿಲ್ಲ. ಬೆಂಗಳೂರು ಕೇರ್ಸ್ ಎಂಬ ಸರ್ಕಾರೇತರ ಸಂಸ್ಥೆಗೆ ನಿಧಿ ಸಂಗ್ರಹಿಸುವ ಸಲುವಾಗಿ ಅದರೊಂದಿಗೆ ಕೈಜೋಡಿಸುತ್ತಿದ್ದಾರೆ. ಅಕ್ಟೋಬರ್ 2ರಿಂದ ಬಿಡ್ಡಿಂಗ್ ಆರಂಭವಾಗಿದ್ದು ಅಕ್ಟೋಬರ್ 7, 2013ರವರೆಗೆ ಇರುತ್ತದೆ. (ಒನ್ಇಂಡಿಯಾ ಕನ್ನಡ)

English summary
As a part of the Joy of Giving Week, for the first time in Bangalore, Kannada superstar Puneeth Rajkumar comes forward to offer his fans an opportunity to meet with him over lunch, with all proceeds benefiting NGOs of his choice. The auction starts Oct 2, 2013 and ends on to 7th October 2013.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada