twitter
    For Quick Alerts
    ALLOW NOTIFICATIONS  
    For Daily Alerts

    ಪೂನಂ ಪಾಂಡೆಗೆ ಬೆಂಗಳೂರು ಕೋರ್ಟ್ ಸಮನ್ಸ್

    By Rajendra
    |

    ರೂಪದರ್ಶಿ ಹಾಗೂ ಬಾಲಿವುಡ್ ಚಿತ್ರರಂಗದ ತಾರೆ ಪೂನಂ ಪಾಂಡೆಗೆ ಬೆಂಗಳೂರಿನ 6ನೇ ಎಸಿಎಂಎಂ ನ್ಯಾಯಾಲಯ ಮಂಗಳವಾರ (ಫೆ.26) ಮತ್ತೆ ಸಮನ್ಸ್ ಜಾರಿ ಮಾಡಿದೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದು ಹಾಗೂ ಅಶ್ಲೀಲ ಪ್ರದರ್ಶನ ಮಾಡಿರುವ ಸಂಬಂಧ ಪೂನಂ ವಿರುದ್ಧ ದೂರು ದಾಖಲಾಗಿದ್ದು, ವಿಚಾರಣೆಗಾಗಿ ಅವರು ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು.

    ಆದರೆ ಅವರಿಗೆ ಕೋರ್ಟಿನ ನೋಟೀಸ್ ತಲುಪಿಲ್ಲವಂತೆ. ಹಾಗಾಗಿ ಇಂದು (ಫೆ.26) ನ್ಯಾಯಾಲಯಕ್ಕೆ ಅವರು ಹಾಜರಾಗಲು ಸಾಧ್ಯವಾಗಿಲ್ಲ. ಈ ಹಿನ್ನೆಯಲ್ಲಿ ಪೂನಂ ಪಾಂಡೆಗೆ ಕೋರ್ಟ್ ಮತ್ತೆ ಸಮನ್ಸ್ ಜಾರಿ ಮಾಡಿದೆ.

    ಪೂನಂ ಪಾಂಡೆ ಅವರು ಶ್ರೀಮನ್ನಾರಾಯಣನ ದೇವರ ಫೋಟೋ ಹಿಡಿದು ಅಶ್ಲೀಲ ಭಂಗಿ ಪ್ರದರ್ಶಿಸಿದ್ದಾರೆ. ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕೆಣಕಿರುವ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಫೈವ್ ಇಯರ್ಸ್ ಲಾ ಕೋರ್ಸ್ ಅಸೋಸಿಯೇಷನ್ ಅಧ್ಯಕ್ಷ ಎಸ್ ಉಮೇಶ್ ಕೋರ್ಟ್ ಮೆಟ್ಟಿಲೇರಿದ್ದರು.

    ಮೇ.22, 2012ರಲ್ಲಿ ಉಮೇಶ್ ಅವರು ಪೂನಂ ವಿರುದ್ಧ ದೂರು ನೀಡಿದ್ದರು. ಈ ಪ್ರಕರಣವನ್ನು ನವೆಂಬರ್, 2012ರಲ್ಲಿ ವಿಚಾರಣೆ ಮಾಡಿದ ನ್ಯಾಯಾಲಯ ಫೆ.26ರೊಳಗೆ ಹಾಜರಾಗುವಂತೆ ಪೂನಂ ಪಾಂಡೆಗೆ ಸೂಚಿಸಿತ್ತು.

    ಆ ಪ್ರಕಾರ ಪೂನಂ ಪಾಂಡೆ ಇಂದು ಕೋರ್ಟ್ ಗೆ ಹಾಜರಾಗಬೇಕಿತ್ತು. ಆದರೆ ಅವರಿಗೆ ಕೋರ್ಟ್ ನೋಟೀಸ್ ತಲುಪಿಲ್ಲದ ಕಾರಣ ಅವರು ಹಾಜರಾಗಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಹಾಗಾಗಿ 6ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರಾದ ಚೂರಿಖಾನ್ ಅವರು ಪೂನಂ ಪಾಂಡೆಗೆ ಇಂದು (ಫೆ.26) ಸಮನ್ಸ್ ಜಾರಿ ಮಾಡಿದ್ದಾರೆ. (ಏಜೆನ್ಸೀಸ್)

    English summary
    Bangalore Sixth Additional Chief Metropolitan Magistrate (ACMM) on Tuesday issued summons to model Poonam Pandey on a complaint filed against her by a city-based advocate, accusing her of hurting religious sentiments to gain publicity.
    Tuesday, February 26, 2013, 17:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X