For Quick Alerts
  ALLOW NOTIFICATIONS  
  For Daily Alerts

  ಪುರಂದರ ಟ್ರಸ್ಟ್ ವತಿಯಿಂದ ನಟ ರಜನಿಕಾಂತ್ ಗೆ ಸನ್ಮಾನ

  By Srinath
  |

  ಬೆಂಗಳೂರು, ಜುಲೈ20: ಶ್ರೀ ಪುರಂದರ ಇಂಟರ್ ನ್ಯಾಷನಲ್ ಟ್ರಸ್ಟ್ ವತಿಯಿಂದ ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ನಗರದ ಟೌನ್ ಹಾಲ್ ನಲ್ಲಿ ಪ್ರಥಮ ಏಕಾದಶಿ ದಿನವಾದ ಶನಿವಾರ ಆತ್ಮೀಯ ಸನ್ಮಾನ ನಡೆಯಿತು.

  ಏನಪ್ಪಾ ಇದು ಸೂಪರ್ ಸ್ಟಾರ್ ರಜನಿಕಾಂತ್ ಯಾನೆ ಅಂದಕಾಲತ್ತಿಲ್ ಬಿಟಿಎಸ್ ಕಂಡಕ್ಟರ್ ನಮ್ಮ ಶಿವಾಜಿರಾವ್ ಗಾಯಕ್ವಾಡ ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದರಾ? ಮೊದಲೇ ಹೇಳಿದ್ದರೆ ನಾವು ಬಂದು ನೋಡಬಹುದಿತ್ತಲ್ವಾ ಎಂದು ಕೇಳಬೇಡಿ. ಏಕೆಂದರೆ ಸಮಾರಂಭಕ್ಕೆ 63 ವರ್ಷದ ರಜನಿ ಸರ್ ಬಂದಿರಲಿಲ್ಲ. (ಇದನ್ನೂ ನೋಡಿ)

  ಬದಲಿಗೆ ಅವರ ಕೊರಳ ಗೆಳೆಯ ರಾಜ್ ಬಹದ್ದೂರ್ ಅವರು ಸಮಾರಂಭಕ್ಕೆ ಆಗಮಿಸಿ ರಜನಿಕಾಂತ್ ಪರವಾಗಿ ಸನ್ಮಾನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ರಜನಿಕಾಂತ್ ಅವರ ಸಂಬಂಧಿ ಗೋಪಿನಾಥ್ ರಾವ್ ಅವರು ಸಹ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಿರುಮಲ ತಿರುಪತಿ ದೇವಸ್ಥಾನದ ವಿಶೇಷಾಧಿಕಾರಿ ಆನಂದತೀರ್ಥಾಚಾರ್ ಅವರು ಸನ್ಮಾನ ಮಾಡಿದರು. (ಕಾರ್ಯಕ್ರಮದ ಚಿತ್ರ ಮಾಲಿಕೆಗಾಗಿ ಇಲ್ಲಿ ಕ್ಲಿಕ್ಕಿಸಿ)

  ಹಿನ್ನೆಲೆ

  ಹಿನ್ನೆಲೆ

  ಶ್ರೀ ಪುರಂದರ ಇಂಟರ್ ನ್ಯಾಷನಲ್ ಟ್ರಸ್ಟ್ ಕಳೆದ 10 ವರ್ಷಗಳಿಂದ ಸಂಗೀತ ಸೇವೆಯಲ್ಲಿ ತೊಡಗಿದೆ. ದಂಪತಿಗಳಾದ ಮೋಹನ್ ಕುಮಾರ್ ಮತ್ತು ಸುವರ್ಣ ಮೋಹನ್ ಇದರ ಸಾರಥ್ಯ ವಹಿಸಿದ್ದಾರೆ.

  ಟ್ರಸ್ಟ್ ವತಿಯಿಂದ ಶನಿವಾರ ಪುರಂದರ ಗುರುವಂದನಾ ಸಮರ್ಪಣೆ ಮತ್ತು 2013ರ ಪುರಂದರ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಇದೇ ಸಮಾರಂಭದಲ್ಲಿ ಟ್ರಸ್ಟ್ ಹೊರತಂದಿರುವ ನವರತ್ನ ಮಾಲಿಕೆ ಸಿ.ಡಿ. ಮತ್ತು ಕಿರುಹೊತ್ತಿಗೆಯನ್ನು ಬಿಡಗಡೆ ಮಾಡಲಾಯಿತು.

  ಪುರಂದರದಾಸರ ರೂಪದಲ್ಲಿರುವ ನಟ ರಜನಿಕಾಂತ್

  ಪುರಂದರದಾಸರ ರೂಪದಲ್ಲಿರುವ ನಟ ರಜನಿಕಾಂತ್

  ಆನಂತರ ನಟ ರಜನಿಕಾಂತ್ ಅವರಿಗೆ ಸನ್ಮಾನ ನಡೆಸಿದ ಬಗ್ಗೆ ಮಾತನಾಡಿದ ಟ್ರಸ್ಟ್ ಕಾರ್ಯದರ್ಶಿ ಸುವರ್ಣ ಮೋಹನ್ ಅವರು ಸುಮಾರು ಮೂರು ವರ್ಷಗಳ ಹಿಂದೆ ಬೆಳಗಿನ ಜಾವ 4 ಗಂಟೆಯಲ್ಲಿ ಖ್ಯಾತ ನಟ ರಜನಿಕಾಂತ್ ಅವರು ಪುರಂದರದಾಸರ ವೇಷದಲ್ಲಿ ಬಂದಿದ್ದನ್ನು ಕಲಾವಿದರೊಬ್ಬರ ಹೇಳಿಕೊಂಡೆ. ಅವರು ಅದನ್ನು ಕೃತಿಗೆ ಇಳಿಸಿ, ಪುರಂದರದಾಸರ ರೂಪದಲ್ಲಿರುವ ನಟ ರಜನಿಕಾಂತ್ ಅವರ ಸುಂದರ ತೈಲವರ್ಣ ಚಿತ್ರವನ್ನು ರಚಿಸಿ ಕೊಟ್ಟರು.

  ರಜನಿಕಾಂತ್ ಅವರಿಗೆ ಗೌರವ

  ರಜನಿಕಾಂತ್ ಅವರಿಗೆ ಗೌರವ

  ಆ ಕೃತಿಯನ್ನು ನಮ್ಮೆಲ್ಲರ ನೆಚ್ಚಿನ ನಟ ರಜನಿಕಾಂತ್ ಅವರಿಗೆ ನೀಡಿ, ಗೌರವಿಸಬೇಕು ಎಂದು ಆಸೆಪಟ್ಟೆ. ಅದರಂತೆ ನಟ ರಜನಿಕಾಂತ್ ಅವರು ಕೆಲಸದ ಒತ್ತಡದಿಂದಾಗಿ ಖುದ್ದಾಗಿ ತಮಗೆ ಬರಲು ಆಗುವುದಿಲ್ಲ ಎಂದು ಹೇಳಿದರು. ಆದರೆ ತಮ್ಮ ಆತ್ಮೀಯ ಸ್ನೇಹಿತನನ್ನು ಸಮಾರಂಭಕ್ಕೆ ಕಳುಹಿಸುವುದಾಗಿ ತಿಳಿಸಿದರು. ಅದರಂತೆ ಗೆಳೆಯ ರಾಜ್ ಬಹಾದ್ದೂರ್ ಅವರನ್ನು ಸನ್ಮಾನಿಸುತ್ತಿರುವುದಾಗಿ ಸುವರ್ಣ ಮೋಹನ್ ಅವರು ತಿಳಿಸಿದರು.

  ನಾನೇನಿದ್ದರೂ ನಿಮಿತ್ತ ಮಾತ್ರ

  ನಾನೇನಿದ್ದರೂ ನಿಮಿತ್ತ ಮಾತ್ರ

  ರಜನೀಕಾಂತ್ ಪರ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜ್ ಬಾದ್ದೂರ್ ಅವರು 'ರಜನಿ ಒಬ್ಬ ನಟ ಅಷ್ಟೇ ಅಲ್ಲ. ಭಕ್ತ ಶ್ರೇಷ್ಠನೂ ಹೌದು ಎಂಬುದನ್ನು ಸುವರ್ಣ ಮೋಹನ್ ಅವರು ಹೇಳಿದ ಮಾತುಗಳನ್ನು ಕೇಳಿದರೆ ಅರಿವಾಗುತ್ತದೆ. ನೋಡಿ ಆತ ಒಬ್ಬ ನಟನಾಗಿ ಪ್ಯಾಂಟು, ಷರ್ಟು ಹಾಕಿಕೊಂಡೋ ಅಥವಾ ಅವರ ನೆಚ್ಚಿನ ಜುಬ್ಬಾ ಧರಿಸಿ, ದರ್ಶನ ಕೊಡಬಹುದಿತ್ತು. ಆದರೆ ಕಲೆ ಸಂಗೀತ ಸಂಸ್ಕೃತಿ ಅವರಲ್ಲಿ ಮೂರ್ತೀಭವಿಸಿದಂತೆ ಪುರಂದರದಾಸರ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಗೌರವ/ಸನ್ಮಾನಗಳೆಲ್ಲವೂ ಆ ನಟನಿಗೆ ಸಲ್ಲುತ್ತದೆ. ನಾನೇನಿದ್ದರೂ ನಿಮಿತ್ತ ಮಾತ್ರ. ಇದನ್ನೆಲ್ಲಾ ಆತನಿಗೆ ತಲುಪಿಸುವೆ. ಮತ್ತು ಪುರಂದರದಾಸರ ಪಾತ್ರದಲ್ಲಿ ಒಂದು ಸಿನಿಮಾ ಮಾಡುವಂತೆಯೂ ನಿಮ್ಮೆಲ್ಲರ ಪರವಾಗಿ ಆತನಿಗೆ ಮನವಿ ಮಾಡುವೆ' ಎಂದು ಹೇಳಿದರು.

  ಆರ್ ಕೆ ಶ್ರೀಕಂಠನ್ ಅವರಿಗೆ ಪುರಂದರ ಪ್ರಶಸ್ತಿ

  ಆರ್ ಕೆ ಶ್ರೀಕಂಠನ್ ಅವರಿಗೆ ಪುರಂದರ ಪ್ರಶಸ್ತಿ

  ಇದೇ ಸಂದರ್ಭದಲ್ಲಿ ಖ್ಯಾತ ಸಂಗೀತ ವಿದ್ವಾಂಸ ಆರ್ ಕೆ ಶ್ರೀಕಂಠನ್ ಅವರಿಗೆ ಪುರಂದರ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ತೇಜಸ್ವಿನಿ ಅನಂತಕುಮಾರ್, ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ಅವರು ಉಪಸ್ಥಿತರಿದ್ದರು.

  English summary
  Bangalore- Sri Purandara International Trust facilitated super star Rajinikanth at Town Hall on July 19. Mr Raj Bahadur, a close friend of the actor received the award on behalf of Rajinikanth. Founder President of the trust Mohan Kumar and Secreatary Suvarna Mohan were present on the occasion.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X