For Quick Alerts
  ALLOW NOTIFICATIONS  
  For Daily Alerts

  ಬಾಂಗ್ಲಾದೇಶ ಅಭಿಮಾನಿಯ ಈ ಕಾಮೆಂಟ್ ನೋಡಿದ್ರೆ ಯಶ್ ಖುಷ್ ಆಗೋದು ಪಕ್ಕಾ!

  |

  'ಕೆಜಿಎಫ್' ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್ ಅವರ ಇಮೇಜ್ ಬಹಳ ಎತ್ತರಕ್ಕೆ ಹೋಗಿದೆ. ಸ್ಯಾಂಡಲ್ ವುಡ್ ಹೊರಗು ರಾಕಿ ಭಾಯ್ ಹವಾ ಹೆಚ್ಚಾಯಿತು. ನಮ್ಮ ದೇಶದಲ್ಲಿ ಮಾತ್ರವಲ್ಲ, ಹೊರದೇಶದಲ್ಲೂ ರಾಜಾಹುಲಿಯ ಘರ್ಜನೆ ಕೇಳಿಬಂತು.

  ಕೆಜಿಎಫ್ ಸಿನಿಮಾ ಬಳಿಕ ಕನ್ನಡ ಸಿನಿಮಾಗಳ ಮಾರುಕಟ್ಟೆ ವಿಸ್ತರಿಸಿದೆ. ಬಾಕ್ಸ್ ಆಫೀಸ್ ನಲ್ಲಿ ನೂರು ಕೋಟಿ ಗಳಿಸಿದ ಮೊದಲ ಸಿನಿಮಾ ಎಂಬ ದಾಖಲೆ ಬರೆಯಿತು.

  ಮನೆ ಮುಂದೆ ನೆರೆದಿದ್ದ ಕೇರಳ ಅಭಿಮಾನಿಗಳನ್ನು ನೋಡಿ ರಾಕಿ ಭಾಯ್ ಮಾಡಿದ್ದೇನು?ಮನೆ ಮುಂದೆ ನೆರೆದಿದ್ದ ಕೇರಳ ಅಭಿಮಾನಿಗಳನ್ನು ನೋಡಿ ರಾಕಿ ಭಾಯ್ ಮಾಡಿದ್ದೇನು?

  ಕೆಜಿಎಫ್ ಚಾಪ್ಟರ್ 1 ಯಶಸ್ಸಿನ ಬಳಿಕ ಚಾಪ್ಟರ್ 2 ಕುರಿತು ನಿರೀಕ್ಷೆ ಹೆಚ್ಚಿದೆ. ಯಶ್ ಮನೆ ಬಳಿ ತಮಿಳು, ತೆಲುಗು, ಮಲಯಾಳಂ ಅಭಿಮಾನಿಗಳು ಬಂದು ಹೋಗುತ್ತಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ಮಧ್ಯೆ ಬಾಂಗ್ಲಾದೇಶದ ಅಭಿಮಾನಿಯೊಬ್ಬರು ಮಾಡಿರುವ ಕಾಮೆಂಟ್ ಈಗ ಗಮನ ಸೆಳೆಯುತ್ತಿದೆ. ಮುಂದೆ ಓದಿ....

  ಚಾಪ್ಟರ್ 2 ನೋಡಲು ಭಾರತಕ್ಕೆ ಬರುತ್ತೇನೆ

  ಚಾಪ್ಟರ್ 2 ನೋಡಲು ಭಾರತಕ್ಕೆ ಬರುತ್ತೇನೆ

  ಬಾಂಗ್ಲಾದೇಶ ಮೂಲದ ಶಕೀಲಾ ಎಂಬ ಯುವತಿಯೊಬ್ಬರು, ಯಶ್ ಅವರ ಪೋಸ್ಟ್ ಗೆ ಕಾಮೆಂಟ್ ಮಾಡಿದ್ದು, ''ನಿಮ್ಮ ಕೆಜಿಎಫ್ ಚಾಪ್ಟರ್ 2 ಸಿನಿಮಾ ನೋಡಲು ನಾನು ಭಾರತಕ್ಕೆ ಬರುತ್ತೇನೆ. ಅದಕ್ಕಾಗಿ ನಾನು ಕಾಯುತ್ತಿದ್ದೇನೆ. ಪ್ರೀತಿ ಮತ್ತು ಗೌರವದಿಂದ ಬಾಂಗ್ಲಾದೇಶ ಅಭಿಮಾನಿಗಳು'' ಎಂದಿದ್ದಾರೆ.

  ರಾಕಿ ಭಾಯ್ ಜೊತೆ 'ಅಧೀರ' ಸಂಜಯ್ ದತ್ ಪ್ರತ್ಯಕ್ಷರಾಕಿ ಭಾಯ್ ಜೊತೆ 'ಅಧೀರ' ಸಂಜಯ್ ದತ್ ಪ್ರತ್ಯಕ್ಷ

  ನಮ್ಮ ಹೃದಯದಲ್ಲಿ ನಿಮ್ಮ ಸ್ಥಾನ

  ನಮ್ಮ ಹೃದಯದಲ್ಲಿ ನಿಮ್ಮ ಸ್ಥಾನ

  ''ಚಾಪ್ಟರ್ 1ರ ನಂತರ ನಿಮ್ಮ ಸ್ಥಾನ ನಮ್ಮ ಹೃದಯದಲ್ಲಿದೆ. ಅಲ್ಲಾ ನಿಮಗೆ ಒಳ್ಳೆಯದು ಮಾಡಲಿ. ನಿಮ್ಮ ಕುಟುಂಬದ ಜೊತೆ ನೀವು ಸಂತೋಷವಾಗಿದ್ದೀರಿ ಎಂಬ ಭರವಸೆ ನಮಗಿದೆ. ಪ್ರೀತಿ ಮತ್ತು ಗೌರವದಿಂದ ಬಾಂಗ್ಲಾದೇಶ ಅಭಿಮಾನಿಗಳು'' ಎಂದು ಆ ಯುವತಿ ಇನ್ನೊಂದು ಕಾಮೆಂಟ್ ಮಾಡಿದ್ದಾರೆ.

  'ಕೆಜಿಎಫ್ 2' ತಂಡಕ್ಕೆ ಬೇಡಿಕೆ ಇಟ್ಟ ಯಶ್ ಅಭಿಮಾನಿಗಳು'ಕೆಜಿಎಫ್ 2' ತಂಡಕ್ಕೆ ಬೇಡಿಕೆ ಇಟ್ಟ ಯಶ್ ಅಭಿಮಾನಿಗಳು

  ಬಾಂಗ್ಲಾ ಅಭಿಮಾನಿಗೆ ವೆಲ್ ಕಮ್

  ಬಾಂಗ್ಲಾ ಅಭಿಮಾನಿಗೆ ವೆಲ್ ಕಮ್

  ಬಾಂಗ್ಲಾದೇಶದ ಆ ಯುವತಿಯ ಕಾಮೆಂಟ್ ಗೆ ಕೆಲವು ಯಶ್ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ''ವೆಲ್ ಕಮ್'' ಎಂದು ಸ್ವಾಗತಿಸಿದ್ದಾರೆ. ಕೆಲವರು ಆ ಕಾಮೆಂಟ್ ಗೆ ಲೈಕ್ಸ್ ಒತ್ತಿದ್ದಾರೆ.

  ಇಂದು 'ಕೆಜಿಎಫ್' ತಂಡದ ಅದೃಷ್ಟ ಬದಲಿಸಿದ ದಿನಇಂದು 'ಕೆಜಿಎಫ್' ತಂಡದ ಅದೃಷ್ಟ ಬದಲಿಸಿದ ದಿನ

  ಮುಂದಿನ ವರ್ಷ ಕೆಜಿಎಫ್ 2

  ಮುಂದಿನ ವರ್ಷ ಕೆಜಿಎಫ್ 2

  ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ನಡೆಯುತ್ತಿದೆ. ಪಾರ್ಟ್ 2 ಚಿತ್ರದಲ್ಲಿ ಯಶ್ ಜೊತೆ ಸಂಜಯ್ ದತ್ ಎಂಟ್ರಿಯಾಗಿದೆ. ರವೀನಾ ಟಂಡನ್ ಕೂಡ ಇರಲಿದ್ದಾರೆ ಎನ್ನಲಾಗಿದೆ. ಉಳಿದಂತೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಮುಂದುವರಿದಿದ್ದಾರೆ. ವಿಜಯ್ ಕಿರಗಂಧೂರ್ ನಿರ್ಮಾಣ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಬರುತ್ತಿರುವ ಈ ಚಿತ್ರ ಮುಂದಿನ ವರ್ಷದ ಮಧ್ಯದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

  English summary
  Bangladesh fan has commented about rocking star yash's Kgf Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X