»   » ಬಿಗ್ ಬಾಸ್ ಪ್ರಥಮ್ ಗೆ ಸಿಕ್ತು ಷರತ್ತುಬದ್ಧ ಜಾಮೀನು

ಬಿಗ್ ಬಾಸ್ ಪ್ರಥಮ್ ಗೆ ಸಿಕ್ತು ಷರತ್ತುಬದ್ಧ ಜಾಮೀನು

Posted By:
Subscribe to Filmibeat Kannada

ಸಹ ನಟ ಭುವನ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು 2ನೇ ಎಸಿಜೆಎಂ ಕೋರ್ಟ್ ಬಿಗ್ ಬಾಸ್ ಪ್ರಥಮ್ ಗೆ ಷರತ್ತುಬದ್ಧ ಜಾಮೀನು ನೀಡಿದೆ.

'ನಾನು ಮತ್ತು ಸಂಜು' ಧಾರವಾಹಿ ಚಿತ್ರೀಕರಣದ ವೇಳೆ ಸಹ ನಟ ಭುವನ್ ಅವರ ತೊಡೆಯನ್ನ ಕಚ್ಚಿ ಹಲ್ಲೆ ಮಾಡಿರುವುದಾಗಿ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ನಟ ಭುವನ್ ನಿನ್ನೆ (ಜುಲೈ 23) ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರ ಕೈಗೆ ಸಿಗದ ಪ್ರಥಮ್ ಇಂದು (ಜುಲೈ 24) ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಿ ನಿರೀಕ್ಷಣ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ತೊಡೆ ಕಚ್ಚಿದ್ದ 'ಬಿಗ್ ಬಾಸ್' ಪ್ರಥಮ್ ನ್ಯಾಯಾಲಯಕ್ಕೆ ಹಾಜರು

Banglore 2nd ACJM Courte Granted Bail to Bigg Boss Pratham

ಪ್ರಥಮ್ ಜಾಮೀನು ಅರ್ಜಿಯನ್ನ ವಿಚಾರಣೆ ನಡೆಸಿದ 2ನೇ ಎಸಿಜೆಎಂ ಕೋರ್ಟ್ ನ್ಯಾಯಧೀಶರಾದ ಪೃಥ್ವಿರಾಜ್ ವರ್ಣೀಕರ್, ಪ್ರಥಮ್ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಸಮಾಜಕ್ಕೆ ನೀವು ಮಾದರಿ ಆಗಬೇಕು, ಈ ರೀತಿಯಾದ ಪ್ರಕರಣಗಳು ನಡೆಯಬಾರದು ಎಂದು ಬುದ್ಧಿವಾದ ಹೇಳಿದ್ದಾರೆ ಎನ್ನಲಾಗಿದೆ. ಇನ್ನು 5 ಸಾವಿರ ಶ್ಯೂರಿಟಿ ನೀಡುವಂತೆ ಷರತ್ತು ವಿಧಿಸಿ, ಜುಲೈ 31 ರಂದು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಪ್ರಥಮ್ ಸೂಚಿಸಿದೆ ಎನ್ನಲಾಗಿದೆ.

ಭುವನ್ ಮೇಲೆ ಪ್ರಥಮ್ ಹಲ್ಲೆ: ದೂರು ದಾಖಲು

English summary
Banglore 2nd ACJM Courte Granted Bail to Bigg Boss Pratham

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada