»   » ಬರಗೂರು ರಾಮಚಂದ್ರಪ್ಪ ಪ್ರಶಸ್ತಿ ನಿರಾಕರಿಸಿದ್ದೇಕೆ?

ಬರಗೂರು ರಾಮಚಂದ್ರಪ್ಪ ಪ್ರಶಸ್ತಿ ನಿರಾಕರಿಸಿದ್ದೇಕೆ?

By: ಉದಯರವಿ
Subscribe to Filmibeat Kannada

ಸಾಮಾನ್ಯವಾಗಿ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾದಾಗ ಪ್ರತಿ ಬಾರಿಯೂ ಒಂದಿಲ್ಲೊಂದು ಸಮಸ್ಯೆಗಳು, ವಿವಾದಗಳು ತಪ್ಪಿದ್ದಲ್ಲ. ಕೆಲವರು ತಮಗೆ ಪ್ರಶಸ್ತಿ ಸಿಗಲಿಲ್ಲ ಎಂದು ಕ್ಯಾತೆ ತೆಗೆದರೆ, ಇನ್ನೂ ಕೆಲವರು ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸುವುದು ಸಾಮಾನ್ಯ.

ಆದರೆ ಪ್ರಶಸ್ತಿ ನಿರಾಕರಿಸುವಂತಹ ಸಾಹಸಕ್ಕೆ ಯಾರೂ ಕೈಹಾಕುತ್ತಿರಲಿಲ್ಲ. ಈ ರೀತಿಯ ಬೆಳವಣಿಗೆಗಳು ಅಪರೂಪ ಎಂಬಂತಿದ್ದವು. ಇದೀಗ ಡಾ.ಬರಗೂರು ರಾಮಚಂದ್ರಪ್ಪನವರು ತಮ್ಮ 'ಅಂಗುಲಿಮಾಲ' ಚಿತ್ರಕ್ಕೆ ಒಲಿದಿದ್ದ ಶ್ರೇಷ್ಠ ಕಥೆ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ. [ರಾಜ್ಯ ಪ್ರಶಸ್ತಿ: ಶ್ರೇಷ್ಠ ನಟ ದರ್ಶನ್, ನಟಿ ನಿರ್ಮಲಾ]


ಇದಕ್ಕೆ ಅವರು ಕೊಟ್ಟ ಕಾರಣವೂ ಸಮಯೋಚಿತವಾಗಿದೆ. "ಅಂಗುಲಿಮಾಲ ಚಿತ್ರದ ಮೂಲಕ ಕಥಾಹಂದರ ನನ್ನದಲ್ಲ. ಕೆಲವೊಂದು ಐತಿಹಾಸಿಕ ಮತ್ತು ಚಾರಿತ್ರಿಕ ಘಟನೆಗಳನ್ನು ಆಧರಿಸಿ ಕಥೆಯನ್ನು ಹೆಣೆದಿದ್ದೇವೆ. ಕಥೆಯು ವಿವಿಧ ಆಕರಗಳಿಗೆ ಸಂಬಂಧಿಸಿದ್ದರಿಂದ ಕಥೆಗೆ ಪ್ರಶಸ್ತಿ ಪಡೆಯುವುದು ಸರಿಯಲ್ಲ ಎಂಬ ಕಾರಣಕ್ಕೆ ನಿರಾಕರಿಸಿದ್ದೇನೆ" ಎಂದಿದ್ದಾರೆ.

ಪುರಾಣದ ಕಥೆಗೆ ತಮ್ಮದೇ ಆದಂತಹ ಪುನರ್ ವ್ಯಾಖ್ಯಾನ ನೀಡಿದ್ದೇವೆ. ವಿವಿಧ ಆಕರಗಳಿಗೆ ಸಂಬಂಧಿಸಿದ ಕಥೆಗೆ ನಾನು ಪ್ರಶಸ್ತಿ ಪಡೆಯುವುದು ನೈತಿಕವಾಗಿ ಸರಿಯಲ್ಲ. ಹಾಗಾಗಿ ನಿರಾಕರಿಸಿದ್ದೇನೆ ಎಂದು ಹೇಳಿದ್ದಾರೆ.

ಕಥಾ ವಿಭಾಗದಲ್ಲಿ ಪ್ರಶಸ್ತಿಗೆ ತಮ್ಮನ್ನು ಪರಿಗಣಿಸಿದ್ದಕ್ಕೆ ಕೃತಜ್ಞತೆಗಳನ್ನು ತಿಳಿಸಿರುವ ಅವರು ಅಷ್ಟೇ ವಿನಯಪೂರ್ವಕವಾಗಿ ನಿರಾಕರಿಸುತ್ತಿರುವುದಾಗಿ ತಿಳಿಸಿದ್ದಾರೆ. ಅಂದಹಾಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಯು ಇಪ್ಪತ್ತು ಸಾವಿರ ರುಪಾಯಿಗಳ ನಗದು ಮತ್ತು ಬೆಳ್ಳಿಯ ಪದಕವನ್ನು ಒಳಗೊಂಡಿದೆ.

English summary
Noted writer and director Baraguru Ramachandrappa has rejected the film award, who was awarded the best story award for the year 2012 for the film Angulimala. He has rejected the award on moral grounds. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada