For Quick Alerts
  ALLOW NOTIFICATIONS  
  For Daily Alerts

  ದರ್ಶನ್ ದಾಖಲೆಯನ್ನ ಸ್ವತಃ ದರ್ಶನ್ ಬ್ರೇಕ್ ಮಾಡಿದ್ರು.!

  |
  Yajamana Movie:ದರ್ಶನ್ ದಾಖಲೆಯನ್ನ ಸ್ವತಃ ದರ್ಶನ್ ಬ್ರೇಕ್ ಮಾಡಿದ್ರು.! | Filmibeat Kannada

  'ಯಜಮಾನ' ಚಿತ್ರದ ಮೂರನೇ ಹಾಡು ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿದೆ. ಯಜಮಾನ ಚಿತ್ರದ ಹಾಡುಗಳಿಗೆ ಬೇರೆ ಸಿನಿಮಾ ಹಾಡುಗಳ ಜೊತೆ ಪೈಪೋಟಿ ಮಾಡುತ್ತಿಲ್ಲ. ಬದಲಾಗಿ ತನ್ನದೇ ಚಿತ್ರಗಳ ಜೊತೆ ಪೈಪೋಟಿ ಮಾಡುತ್ತಿದೆ.

  ಹೌದು, 'ಯಜಮಾನ' ಚಿತ್ರದ ಮೊದಲ ಹಾಡು ಶಿವನಂದಿ 6.3 ಮಿಲಿಯನ್ ವೀಕ್ಷಣೆ ಕಂಡು ಸತತ ಮೂರು ದಿನ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನದಲ್ಲಿತ್ತು. ಆ ಬಳಿಕ ಬಂದ ಎರಡನೇ ಹಾಡು 'ಓ ಮುಂಜಾನೆ....' ಕೂಡ ಅಷ್ಟೇ ಅಬ್ಬರ ಮಾಡಿತ್ತು.

  ರಿಲೀಸ್ ಆದ 7 ನಿಮಿಷದಲ್ಲಿ ದಾಖಲೆ ಬರೆದ 'ಯಜಮಾನ' ಎರಡನೇ ಹಾಡು

  ಈ ಹಾಡು ಕೇವಲ ಏಳು ನಿಮಿಷದಲ್ಲಿ 100k (ಒಂದು ಲಕ್ಷ) ವೀಕ್ಷಣೆ ಕಂಡು ದಾಖಲೆ ಬರೆದಿತ್ತು. ಇದೀಗ, ಯಜಮಾನ ಚಿತ್ರದ ಮೂರನೇ ಹಾಡು ಬಸಣ್ಣಿ ಈ ದಾಖಲೆಯನ್ನ ಬ್ರೇಕ್ ಮಾಡಿದೆ.

  35 ನಿಮಿಷಕ್ಕೆ 2 ಲಕ್ಷ ಹಿಟ್ಸ್ : ಬಸಣ್ಣಿಗೆ ಬಹುಪರಾಕ್ ಭಕ್ತರು

  ಆರು ನಿಮಿಷದಲ್ಲಿ 100k (ಒಂದು ಲಕ್ಷ) ಆಗಿ ಎರಡನೆ ಹಾಡಿನ ರೆಕಾರ್ಡ್ ಬ್ರೇಕ್ ಮಾಡಿದೆ. ಸದ್ಯ ಯೂಟ್ಯೂಬ್ ನಲ್ಲಿ ಅಬ್ಬರಿಸುತ್ತಿರುವ ಬಸಣ್ಣಿ 90 ನಿಮಿಷದಲ್ಲಿ 500k ವೀಕ್ಷಣೆ ದಾಟಿದೆ.

  ದರ್ಶನ್-ಭಟ್ಟರ ಜೋಡಿಯಲ್ಲಿ ಬಂದ ಎಲ್ಲ ಹಾಡುಗಳು ಸೂಪರ್ ಹಿಟ್.!

  ಅಂದ್ಹಾಗೆ, 'ಬಸಣ್ಣಿ' ಹಾಡಿಗೆ ಯೋಗರಾಜ್ ಭಟ್ಟರು ಸಾಹಿತ್ಯ ಬರೆದಿದ್ದು, ಹರಿಕೃಷ್ಣ ಸಂಗೀತ ನೀಡಿದ್ದಾರೆ. ಬಿ ಸುರೇಶ್ ಮತ್ತು ಶೈಲಾಜ್ ನಾಗ್ ನಿರ್ಮಾಣ ಮಾಡಿದ್ದು, ಪಿ ಕುಮಾರ್ ಜೊತೆ ಹರಿಕೃಷ್ಣ ಸೇರಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ರಶ್ಮಿಕಾ ಮತ್ತು ತಾನ್ಯ ಹೋಪ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

  English summary
  Yajamana movie third song BasaNNi baa gets 100K views in 6 minutes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X