TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
'ಬಿಗ್ ಬಾಸ್' ಸ್ಪರ್ಧಿ ಜಗನ್ ಗೆ ನಿಶ್ಚಿತಾರ್ಥ: ಹುಡುಗಿ ಯಾರು ಗೊತ್ತಾ.?
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಆಗಾಗ ಟೆಂಪರ್ ರೇಸ್ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದ ಸ್ಪರ್ಧಿ ಜಗನ್ನಾಥ್ ಚಂದ್ರಶೇಖರ್.
'ಗಾಂಧಾರಿ' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ ಜಗನ್ನಾಥ್ ಚಂದ್ರಶೇಖರ್ ಸದ್ಯ 'ಸೀತಾ ವಲ್ಲಭ' ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ಒಂದು ಸಿನಿಮಾದಲ್ಲೂ ಕಾಣಿಸಿಕೊಳ್ಳಲು ಜಗನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂಬ ಸುದ್ದಿ ಇದೆ.
ಬೆಳ್ಳಿಪರದೆ ಮೇಲೆ ಮಿನುಗಲಿದ್ದಾರೆ 'ಬಿಗ್ ಬಾಸ್' ಆಂಗ್ರಿ ಯಂಗ್ ಮ್ಯಾನ್ ಜಗನ್.!
ಹೀಗಿರುವಾಗಲೇ, ದಾಂಪತ್ಯ ಜೀವನಕ್ಕೆ ಕಾಲಿಡಲು ಜಗನ್ನಾಥ್ ಚಂದ್ರಶೇಖರ್ ಮನಸ್ಸು ಮಾಡಿದ್ದಾರೆ. ಕಿರುತೆರೆ ನಟ ಜಗನ್ ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ತಮ್ಮ ಆತ್ಮೀಯ ಗೆಳತಿ ರಕ್ಷಿತಾ ಮುನಿಯಪ್ಪ ಜೊತೆಗೆ ಜಗನ್ನಾಥ್ ಚಂದ್ರಶೇಖರ್ ನಿಶ್ಚಿತಾರ್ಥ ನೆರವೇರಿದೆ. ಮುಂದೆ ಓದಿರಿ...
ಕಿರುತೆರೆ ನಟ ಜಗನ್ ಗೆ ನಿಶ್ಚಿತಾರ್ಥ
ಕಿರುತೆರೆ ನಟ ಜಗನ್ನಾಥ್ ಚಂದ್ರಶೇಖರ್ ನಿಶ್ಚಿತಾರ್ಥ ಇತ್ತೀಚಿಗಷ್ಟೇ ನೆರವೇರಿತು. ತಾವು ಪ್ರೀತಿಸುತ್ತಿದ್ದ ಹುಡುಗಿ ರಕ್ಷಿತಾ ಮುನಿಯಪ್ಪ ಅವರ ಕೈ ಬೆರಳಿಗೆ ಜಗನ್ ಉಂಗುರ ತೊಡಿಸಿದ್ದಾರೆ. ಉಭಯ ಕುಟುಂಬಗಳ ಸಮ್ಮುಖದಲ್ಲಿ ಜಗನ್-ರಕ್ಷಿತಾ ಎಂಗೇಜ್ಮೆಂಟ್ ನಡೆದಿದೆ.
ಬ್ರೇಕಪ್ ವಿಚಾರವನ್ನ ಕ್ಯಾಮರಾ ಮುಂದೆ ಹೇಳಿದ ಅನುಪಮಾಗೆ ಜಗನ್ ಕ್ಲಾಸ್.!
ಯಾರು ಈ ರಕ್ಷಿತಾ.?
ರಕ್ಷಿತಾ ಮುನಿಯಪ್ಪ ದುಬೈನ ಕಾಲೇಜೊಂದರಲ್ಲಿ ವ್ಯಾಸಂಗ ಮುಗಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಜಗನ್ ಮತ್ತು ರಕ್ಷಿತಾ ಪ್ರೀತಿಸುತ್ತಿದ್ದಾರೆ. ಇಬ್ಬರ ಪ್ರೀತಿಗೆ ಕುಟುಂಬ ಸಮ್ಮತಿ ನೀಡಿದೆ.
ಜಗನ್ ಗೆ ಆಶಿತಾ ಮುತ್ತು ಕೊಟ್ಟ ಗುಟ್ಟು ಅನುಪಮಾ ಮುಂದೆ ರಟ್ಟು.!
ಮದುವೆ ಯಾವಾಗ.?
ಮೂಲಗಳ ಪ್ರಕಾರ, ಇದೇ ವರ್ಷದ ಮೇ ತಿಂಗಳಿನಲ್ಲಿ ಜಗನ್-ರಕ್ಷಿತಾ ವಿವಾಹ ಮಹೋತ್ಸವ ನಡೆಯಲಿದೆ. ಅಷ್ಟರೊಳಗೆ ಬೆಳ್ಳಿತೆರೆಮೇಲೆ ಜಗನ್ ಮಿಂಚುವ ಸಾಧ್ಯತೆ ಕೂಡ ಇದೆ.
ಸದ್ಯದಲ್ಲೇ ಸಿನಿಮಾ ಸುದ್ದಿ
ಸ್ಯಾಂಡಲ್ ವುಡ್ ನ ಬಿಗ್ ಬಜೆಟ್ ಚಿತ್ರವೊಂದರಲ್ಲಿ ಸೆಕೆಂಡ್ ಹೀರೋ ಆಗಿ ಅಭಿನಯಿಸಲು ಜಗನ್ನಾಥ್ ಚಂದ್ರಶೇಖರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಚಿತ್ರದ ಅನೌನ್ಸ್ ಮೆಂಟ್ ಫೆಬ್ರವರಿ ತಿಂಗಳಿನಲ್ಲಿ ಆಗಲಿದೆ. ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಹೊಸ ಹೆಜ್ಜೆ ಇಡುತ್ತಿರುವ ಜಗನ್ ಗೆ ಆಲ್ ದಿ ಬೆಸ್ಟ್.