»   » ಸುಧಾಮನಗರದಲ್ಲಿ ಯುವರಾಜ್ ಜೊತೆ 'ಮಗಧೀರ' ದೇವ್ ಗಿಲ್

ಸುಧಾಮನಗರದಲ್ಲಿ ಯುವರಾಜ್ ಜೊತೆ 'ಮಗಧೀರ' ದೇವ್ ಗಿಲ್

By: ಹರಾ
Subscribe to Filmibeat Kannada

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಇಂದು ನಡೆಯುತ್ತಿದೆ. ಇಲ್ಲಿಯವರೆಗೂ ಅನೇಕ ಅಭ್ಯರ್ಥಿಗಳ ಪರ ಸ್ಯಾಂಡಲ್ ವುಡ್ ನ ಹಲವು ಸ್ಟಾರ್ ನಟ-ನಟಿಯರು ಪ್ರಚಾರ ನಡೆಸಿದ್ದಾರೆ. ರೋಡ್ ಶೋಗಳಲ್ಲೂ ಪಾಲ್ಗೊಂಡಿದ್ದಾರೆ.

ಆದರೆ, ಎಲ್ಲರಿಗಿಂತ ಕೊಂಚ ವಿಭಿನ್ನವಾಗಿರುವ ಟಾಲಿವುಡ್ ನ ಖ್ಯಾತ ನಟ ದೇವ್ ಗಿಲ್ ಇಂದು ಕೂಡ ಸುಧಾಮನಗರ ವಾರ್ಡ್ ನಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

devgill

ಬೆಂಗಳೂರಿನ ಸುಧಾಮನಗರ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿ ಯುವರಾಜ್ ಜೊತೆ ದೇವ್ ಗಿಲ್ ಇಂದು ಮತದಾನ ಕೇಂದ್ರದ ಮುಂದೆ ನಿಂತು ಮತ ಪ್ರಕ್ರಿಯೆಯನ್ನ ವೀಕ್ಷಿಸಿದರು.

ವಾರದ ಹಿಂದೆ ಇದೇ ಯುವರಾಜ್ ಪರ 'ಮಗಧೀರ' ಸಿನಿಮಾ ಖ್ಯಾತಿಯ ದೇವ್ ಗಿಲ್ ಇಡೀ ಸುಧಾಮನಗರ ವಾರ್ಡ್ ಸುತ್ತಿ ಪ್ರಚಾರ ನಡೆಸಿದ್ದರು. ಅಷ್ಟಕ್ಕೂ ದೇವ್ ಗಿಲ್ ಮತ್ತು ಯುವರಾಜ್ ಆಪ್ತ ಸ್ನೇಹಿತರು. ಪ್ರಚಾರದಿಂದ ಹಿಡಿದು ಮತವೀಕ್ಷಣೆವರೆಗೂ ಅವರಿಬ್ಬರ ಗೆಳೆತನ ಸಾಗಿದೆ. [ಬೆಂಗಳೂರಿನ ಬೀದಿ-ಬೀದಿಗಳಲ್ಲಿ 'ಕೈ' ಬೀಸಿದ 'ಮಗಧೀರ' ಕೇಡಿ]

ಕಾಂಗ್ರೆಸ್ ನಾಯಕ ಆರ್.ವಿ.ದೇವರಾಜ್ ಪುತ್ರ ಯುವರಾಜ್ ಗೆ ದೇವ್ ಗಿಲ್ ಫ್ಯಾಮಿಲಿ ಫ್ರೆಂಡ್ ಆಗಿರುವ ಕಾರಣ ಅವರ ಪ್ರತಿ ಹೆಜ್ಜೆಗೂ ಜೊತೆಗೂಡಿದ್ದಾರೆ. ಸುಧಾಮನಗರ ವಾರ್ಡ್ ನಲ್ಲಿ ಯುವರಾಜ್ ಗೆಲುವಿನ ನಗೆ ಬೀರಲಿ ಅನ್ನೋದು ದೇವ್ ಗಿಲ್ ಆಶಯ.

English summary
Tollywood Actor Dev Gill of 'Magadheera' fame was spotted in Sudhamanagar, Bengaluru today to support Congress candidate Yuvaraj, Son of Congress leader R.V.Devaraj in BBMP Election 2015.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada